LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಬಸವ ಬಿಲ್ವ ಭಕ್ತರ ಬಳಗದಿಂದ ಶ್ರೀಬಸವೇಶ್ವರ ಜಯಂತಿ

ಬೆಂಗಳೂರು: ಹೊಂಬೇಗೌಡನಗರ ಬಾಲಕರ ಪ್ರೌಢಶಾಲೆ ಸಭಾಂಗಣದಲ್ಲಿ ಬಸವ ಬಿಲ್ವ ಭಕ್ತರ ಬಳಗದ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಅಚರಣೆ.ಚಿಕ್ಕಮಗಳೂರು, ಬಸವ ಕೇಂದ್ರದ ಶ್ರೀಶಿವಯೋಗಿ ಪ್ರಭುಗಳು, ಶಾಸಕರಾದ ಉದಯ್ ಗರುಡಾಚಾರ್, ಶ್ರೀಮತಿ ಮೇದಿನಿ ಗರುಡಾಚಾರ್ ರವರು, ವೀರಶೈವ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷರಾದ ಬಿ.ಎಸ್.ಪರಮಶಿವಯ್ಯ,

ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ಭಾಗ್ಯವತಿ ಅಮರೇಶ್, ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ಟ್ರಸ್ಟಿ ಅಮರೇಶ್(ಅಂಬರೀಶ್)ರವರು, ಬಸವ ಬಿಲ್ವ ಬಳಗದ ಅಧ್ಯಕ್ಷರಾದ ಎಚ್.ಚಂದ್ರಶೇಖರ್, ಗೌರವಾಧ್ಯಕ್ಷ ಬಿ.ಸಿ. ಸದಾಶಿವಯ್ಯ, ಕಾರ್ಯದರ್ಶಿ ಸುಭಾಷ್ ಚಂದ್ರ, ಕ್ರಾಂತಿಯೋಗಿ ಬಸವೇಶ್ವರರ ಬಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸಿ ಜಯಂತಿ ಅಚರಣೆಗೆ ಚಾಲನೆ ನೀಡಿದರು.

ಶ್ರೀಶಿವಯೋಗಿ ಪ್ರಭುಗಳು ಮಾತನಾಡಿ, ಮಹಿಳೆಯರನ್ನ ಸಮಾಜ ಕಡೆಗಣಿಸಿ ನೋಡುತ್ತಿತ್ತು ಅದರೆ ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಸಮಾನತೆ, ಧಾರ್ಮಿಕ ಹಕ್ಕು ಹಾಗೂ ಸ್ವಾತಂತ್ರ್ಯ ನೀಡಿದ್ದು ಕಾಯಕಯೋಗಿ ಬಸವೇಶ್ವರರು.ಬಸವಾದಿ ಶರಣರ ತತ್ವ, ಸಿದ್ದಾಂತ ಆಳವಡಿಸಿಕೊಂಡರೆ ಅದೇ ಅನುಭವ ಮಂಟಪವಾಗುತ್ತದೆ. ಬಸವಾದಿ ಶರಣರು ನಾಡಿನ ನೆಲದ ಕನ್ನಡ ಭಾಷೆಯನ್ನ ದೇವ ಭಾಷೆಯಾಗಿ ಮಾಡಿ ಕನ್ನಡದಲ್ಲಿ ವಚನಗಳನ್ನು ರಚಿಸಿದರು.

ಫಾನಿಸ್ತಾನ್ ನಿಂದ ಮರುಳು ಶಂಕರದೇವ, ಕಾಶ್ಮಿರದಿಂದ ಮೋಡಿಗೆ ಮಾರಯ್ಯ, ತಮಿಳುನಾಡಿನಿಂದ ಮಾದರ ಚನ್ನಯ್ಯ ಶರಣರು, ಕೇರಳ ದೂಪದ ಗೋಗಯ್ಯ ಶರಣರು ಅನುಭವ ಮಂಟಪಕ್ಕೆ ಬಂದು ಕನ್ನಡ ಭಾಷೆ ಕಲಿತು, ಕನ್ನಡದಲ್ಲಿ ವಚನ ಬರೆಯುತ್ತಾರೆ. ಕನ್ನಡ ಭಾಷೆಯನ್ನು ವಿಶ್ವಕ್ಕೆ ಪರಿಚಯಿಸಲು ಶ್ರೀಮಂತಗೊಳಿಸಿದವರು ಬಸವೇಶ್ವರರು.

ಶೋಷಿತರು, ಮಹಿಳೆಯರನ್ನ ಸಮಾಜದ ಮುಖ್ಯ ವಾಹಿನಿ ತರಲು ಜಗತ್ತನ್ನ ಉದ್ದರಿಸಲು ಬಂದ ಮಹಾನ್ ಶಕ್ತಿ ಅಣ್ಣ ಬಸವಣ್ಣನವರು. ವೇದ ಓದಿದರೆ ಡೊಡ್ಡವರಲ್ಲ ಸತ್ಯ ಶುದ್ದವಾಗಿ ಕಾಯಕ ಮಾಡುವವರು ಸಹ ಡೊಡ್ಡವರು ಎಂದು ಸಂದೇಶ ಸಾರಿದರು ಎಂದು ಹೇಳಿದರು.
ಸಾಹಿತ್ಯ, ಸಂಗೀತ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ, ಸಾಧಕಿಯರಿಗೆ ಗೌರವಿಸಿ, ಸನ್ಮಾನಿಸಲಾಯಿತು. ವಚನಜ್ಯೋತಿ ಬಳಗದ ವತಿಯಿಂದ ವಚನಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು