LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಒಲಿಂಪಿಕ್ಸ್ ಜ್ಯೋತಿ ಯಾತ್ರೆಗೆ ಚಾಲನೆ

ಮಾರ್ಸೆ (ಫ್ರಾನ್ಸ್): ಅತ್ಯಾಕರ್ಷಕ ‘ಬೆಲೆಮ್’ ಹೆಸರಿನ ಹಡಗಿನಲ್ಲಿ ಒಲಿಂಪಿಕ್ ಜ್ಯೋತಿ ಬುಧವಾರ ಇರುಳಲ್ಲಿ ಇಲ್ಲಿ ತಲುಪಿತು. ಭವ್ಯ ಸ್ವಾಗತ ಸಮಾರಂಭದ ನಂತರ ಜ್ಯೋತಿ ಯಾತ್ರೆ ಗುರುವಾರ ನಗರದಲ್ಲಿ ಆರಂಭವಾಯಿತು.

ಒಲಿಂಪಿಕ್ ಜ್ಯೋತಿಯಾತ್ರೆ 11 ವಾರಗಳ ಕಾಲ ದೇಶದ 450 ನಗರಗಳನ್ನು ಕ್ರಮಿಸಲಿದೆ.ಈ ಯಾತ್ರೆಯುದ್ದಕ್ಕೆ 10,000 ಮಂದಿ ಜ್ಯೋತಿ ಹಿಡಿದು ಓಡಲಿದ್ದಾರೆ. ಒಲಿಂಪಿಕ್ಸ್ ಜುಲೈ 26ರಂದು ಪ್ಯಾರಿಸ್‍ನಲ್ಲಿ ಆರಂಭವಾಗಲಿದೆ.ಮೆಡಿಟರೆನಿಯನ್ ಸಾಗರಕ್ಕೆ ಮುಖಮಾಡಿರುವ ಐತಿಹಾಸಿಕ ನಾಟ್ರೆ ಡಾಮ್ ಲಾ ಗಾರ್ದೆ ಬೆಸಿಲಿಕಾದಿಂದ ಜ್ಯೋತಿ ಯಾತ್ರೆಯನ್ನು ಮಾಜಿ ಫುಟ್‍ಬಾಲ್ ಆಟಗಾರ ಬಾಸಿಲ್ ಬೊಲಿ ಅವರು ಆರಂಭಿಸಿದರು. 1990ರ ದಶಕದಲ್ಲಿ ಅವರು ಮಾರ್ಸೆ ತಂಡಕ್ಕೆ ಆಡಿದ್ದರು.

‘ನನಗೆ ಹೆಮ್ಮೆ ಎನಿಸಿದೆ. ಈ ಸಂಭ್ರಮ ಹೇಳಿಕೊಳ್ಳಲು ಆಗದು. ಒಲಿಂಪಿಕ್ ಜ್ಯೋತಿ ಕ್ರೀಡೆಯ ಸಂಕೇತ’ ಎಂದು ಬೊಲಿ ಹೇಳಿದರು.ಇದಕ್ಕೆ ಮೊದಲು ಒಲಿಂಪಿಕ್ ಜ್ಯೋತಿ ಹೊತ್ತು ತಂದ ‘ಬೆಲೆಮ್’ ಹಡಗು ಮಾರ್ಸೆ ಬಂದರು ತಲುಪುವ ವೇಳೆ 2,30,000 ಜನರು ಸೇರಿ ಭವ್ಯ ಸ್ವಾಗತ ಕೋರಿದರು ಎಂದು ಮೇಯರ್ ಬೆನೊಯಿ ಪಯನ್ ಹೇಳಿದರು.ಒಲಿಂಪಿಕ್ಸ್‍ನ ಸೇಲಿಂಗ್ ಸ್ಪರ್ಧೆಗಳು ಮಾರ್ಸೆಯಲ್ಲಿ ನಡೆಯಲಿವೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು