LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ನವೆಂಬರ್‌ನಲ್ಲಿ ಸಂಪುಟಕ್ಕೆ ಆಗುತ್ತಾ ಸರ್ಜರಿ?

ರಾಜ್ಯದಲ್ಲಿ ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್, ಎರಡುವರೆ ವರ್ಷಗಳನ್ನು ಪೂರೈಕೆ ಮಾಡಿದ ಬೆನ್ನಲ್ಲೇ, ನವೆಂಬರ್ ತಿಂಗಳಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲಿದೆ ಎಂಬ ಗುಸುಗುಸು ಆರಂಭವಾಗಿದೆ. ಇದೇ ತಿಂಗಳ ೧೩ ರಂದು ಸಿಎA ಸಿದ್ಧರಾಮಯ್ಯ ಎಲ್ಲಾ ಕಾಂಗ್ರೆಸ್ ಶಾಸಕರನ್ನು ಡಿನ್ನರ್‌ಗೆ ಆಹ್ವಾನಿಸಿದ್ದು, ಬಿಹಾರ ರಾಜ್ಯದ ಸಾರ್ವತ್ತಿಕ ವಿಧಾನಸಭಾ ಚುನಾವಣೆ ಮುಕ್ತಾಯವಾದ ಬಳಿಕ ರಾಜ್ಯದಲ್ಲಿ ಸಂಪುಟ ಪುನಾರಚನೆ ಆಗುವ ಲಕ್ಷಣಗಳು ಗೋಚರವಾಗುತ್ತಿದೆ.

ಇನ್ನು ಈಗಿರುವ ಮಾಹಿತಿಯ ಪ್ರಕಾರ ಸಂಪುಟ ಪುನಾರಚನೆ ಅಷ್ಟುಸುಲಭದ ಮಾತಲ್ಲ. ಆದ್ರೂ ಸಹ ಸಂಪುಟ ಪುನಾರಚನೆ ಮಾಡಲೇಬೇಕೆಂದು ಕಾಂಗ್ರೆಸ್ ಪಕ್ಷ
ನಿರ್ಧರಿಸಿದ್ದು, ಇದಕ್ಕೆ ಯಾವ ರೀತಿ ಚರ್ಚೆ ಪಕ್ಷದೊಳಗೆ ಆಗುತ್ತಿದೆ ಎಂಬುದನ್ನು ದೂರದಿAದಲೇ ಉಸ್ತುವಾರಿಗಳು ಹಾಗೂ ಎಐಸಿಸಿ ಅಧ್ಯಕ್ಷರು ನೋಡುತ್ತಿದ್ದಾರೆ
ಎನ್ನಲಾಗಿದೆ.ಇತ್ತ, ಒಂದು ಡಜನ್‌ಗೂ ಹೆಚ್ಚಿನ ಸಚಿವರನ್ನು ಕ್ಯಾಬಿನೆಟ್‌ನಿಂದ ಗೇಟ್‌ಪಾಸ್ಕೊಟ್ಟು ಹೊಸ ಮುಖದವರಿಗೆ ಅವಕಾಶ ಕಲ್ಪಿಸುವ ಉದ್ದೇಶ ಕಾಂಗ್ರೆಸ್‌ದಾಗಿದೆ. ಹಾಲಿ ಸಚಿವರುಗಳ ಮೌಲ್ಯಮಾಪನ ಮುಕ್ತಾಯವಾಗಿದ್ದು ಸಂಪುಟ ಸೇರ್ಪಡೆಯಾಗುವ ಸಂಭಾವ್ಯರ ಪಟ್ಟಿ ಕೂಡ ರೆಡಿಯಾಗಿದೆ ಎನ್ನಲಾಗಿದೆ.

ಇನ್ನು ಈ ಪಟ್ಟಿಯ ಬಗ್ಗೆ ನಮಗೂ ಕೂಡ ಮಾಹಿತಿ ಇದೆ. ಒಂದು ಡಜನ್‌ಗೂ ಹೆಚ್ಚಿನ ಸಚಿವರನ್ನು ಕೈ ಬಿಟ್ಟು, ಹೊಸದಾಗಿ ಯಾರನ್ನೆಲ್ಲಾ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ನೋಡುವುದಾರೆ, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಸಲೀಂ ಅಹ್ಮದ್, ಯಲ್ಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ, ಬೆಂಗಳೂರಿನ ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಶಿರಾ ಕ್ಷೇತ್ರದ ಟಿ.ಬಿ.ಜಯಚಂದ್ರ, ಕೆಜಿಎಫ್‌ನ ರೂಪಾ ಶಶಿಧರ್, ಅರಸೀಕೆರೆಯ ಶಿವಲಿಂಗೇಗೌಡ, ಬಳ್ಳಾರಿ ಗ್ರಾಮೀಣದ ಬಿ.ನಾಗೇಂದ್ರ, ಮುದ್ದೇಬಿಹಾಳದ ಅಪ್ಪಾಜಿ ನಾಡಗೌಡ, ಅಥಣಿಯ ಲಕ್ಷ÷್ಮಣ್ ಸವದಿ, ತರೀಕೆರೆಯ ಶ್ರೀನಿವಾಸ್, ಬೆಂಗಳೂರಿನ ಶಿವಾಜಿನಗರದ ರಿಜ್ವಾನ್ ಅರ್ಷದ್, ಹಾಲಿ ಸಭಾಧ್ಯಕ್ಷ ಯು.ಟಿ.ಖಾದರ್, ಚಳ್ಳಕೆರೆಯ ರಘುಮೂರ್ತಿ, ಮಧುಗಿರಿಯ ಕೆ.ಎನ್.ರಾಜಣ್ಣ, ಮಳವಳ್ಳಿಯ ಪಿ.ಎಂ.ನರೇAದ್ರ ಸ್ವಾಮಿ, ಅನೇಕಲ್‌ನ ಶಿವಣ್ಣ, ಜೇವರ್ಗಿಯ ಡಾ.ಅಜಯ್ ಸಿಂಗ್ ಅವರ ಹೆಸರುಗಳು ಮುಂಚೂಣಿಯಲ್ಲಿದ್ದು,
ಸAಪುಟ ಪುನಾರಚನೆ ಆದ್ರೆ,ಇವರಲ್ಲಿ ಕೆಲವರಿಗೆ ಮಣೆ ಹಾಕುವ ಸಾಧ್ಯತೆಯಿದೆ ಎನ್ನಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು