LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಆಸೀಸ್ ವಿರುದ್ಧ ಸೂರ್ಯವಂಶಿ ೬ ಸಿಕ್ಸ್!; ಯುವ ಏಕದಿನದಲ್ಲಿ ಹೊಸ ವಿಶ್ವದಾಖಲೆ

ತನ್ನ ಯಶಸ್ಸು ಕ್ಷಣಿಕವಲ್ಲ ಎಂಬುದನ್ನು ಭಾರತದ ಯುವ ಕ್ರಿಕೆಟ್ ಆಟಗಾರ ವೈಭವ್  ಸೂರ್ಯವಂಶಿ ಯುವ ಏಕದಿನ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಉನ್ಮುಕ್ತ್   ಚಂದ್ ಅವರ ೩೮ ಸಿಕ್ಸರ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಬ್ರಿಸ್ಬೇನ್‌ನಲ್ಲಿ ನಡೆದ ಭಾರತ ಮತ್ತು ಆಸ್ಟೆçÃಲಿಯಾ ನಡುವಿನ ಅಂಡರ್ ೧೯
ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ವೈಭವ್ ಅವರು ಕೇವಲ ೧೦ ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಆಸ್ಟೆçÃಲಿಯಾ ವಿರುದ್ಧ ಅವರು ೭೦ ರನ್ ಗಳಿಸಿ ಔಟಾದರು. ಸೂರ್ಯವಂಶಿ ಈಗ ಯುವ ಏಕದಿನ ಪಂದ್ಯಗಳಲ್ಲಿ ಒಟ್ಟು ೫೪೦ ರನ್ ಗಳಿಸಿದ್ದಾರೆ. ಇದರಲ್ಲಿ ಶೇಕಡಾ ೨೬ರಷ್ಟು ರನ್ ಗಳು ಕೇವಲ ಬೌಂಡರಿಗಳಿAದಲೇ ಬಂದಿವೆ ಎಂಬುದು ವಿಶೇಷವಾಗಿದೆ. ಅವರ ಹೆಸರಿನಲ್ಲಿ ಈಗ ೪೧ ಸಿಕ್ಸರ್‌ಗಳಿವೆ. ಉನ್ಮುಕ್ತ್ ಚಾಂದ್ ಅವರು ೩೮ಸಿಕ್ಸರ್ ಬಾರಿಸಿದ್ದು ಈ ಹಿಂದಿನ ದಾಖಲಾಗಿತ್ತು. ಅದನ್ನು ವೈಭವ್ ಅವರು ಮೀರಿ ನಿಂತಿದ್ದಾದೆ. ಆಸ್ಟೆçÃಲಿಯಾ ಪ್ರವಾಸದಲ್ಲಿ ಅವರು ಮತ್ತಷ್ಟು ಸಾಧನೆಗಳನ್ನು ಮಾಡುವ ನಿರೀಕ್ಷೆ ಇದೆ. ವೈಭವ್-ವಿಹಾನ್ ಶತಕದ ಜೊತೆಯಾಟ ಬುಧವಾರ ಬ್ರಿಸ್ಬೇನ್ ನ ಓವರ್ ನಲ್ಲಿ ನಡೆಯುತ್ತಿವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟೆçÃಲಿಯಾ ತಂಡ ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿತು.

ಭಾರತದ ನಾಯಕ ಆಯುಷ್  ಮಾತ್ರೆ ಅವರು ವಿಲ್ ಬೈರೋಮ್ ಅವರು ಎಸೆದ ಮೊದಲ ಒವರ್ ನ ಎರಡನೇ ಎಸೆತದಲ್ಲೇ ಶೂನ್ಯಕ್ಕೆ ಔಟಾದರು. ಈ
ವೇಳೆ ವಿಹಾನ್ ಮಲ್ಹೋತ್ರಾ ಅವರನ್ನು ಸೇರಿಕೊಂಡ ವೈಭವ್ ಸೂರ್ಯವಂಶಿ ಅವರು ಆಸೀಸ್ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದರು. ಅವರಿಬ್ಬರೂ ಎರಡನೇ ವಿಕೆಟ್ ಆಸೀಸ್ ವಿರುದ್ಧ ಸೂರ್ಯವಂಶಿ ೬ ಸಿಕ್ಸ್!; ಯುವ ಏಕದಿನದಲ್ಲಿ ಹೊಸ ವಿಶ್ವದಾಖಲೆಗೆ ೧೧೭ ರನ್ ಗಳ ಜೊತೆಯಾಟವಾಡಿದ್ದರಿಂದ
ಭಾರತ ದೊಡ್ಡ ಮೊತ್ತದ ಕಡೆಗೆ ಮುಖಮಾಡುವಂತಾಯಿತು.

ಒಟ್ಟು ೬೮ ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ ಅವರು ೫ ಬೌಂಡರಿ ಮತ್ತು ೬ ಸಿಕ್ಸರ್ ಗಳನ್ನು ಒಳಗೊಂಡ ೭೦ ರನ್ ಗಳಿಸಿ ಆಸೀಸ್ ನಾಯಕ ವೈಭವ್ ದೇಶಮುಖ್ ಅವರ ಬೌಲಿಂಗ್ ನಲ್ಲಿ ಆರ್ಯನ್ ಶರ್ಮಾ ಅವರಿಗೆ ಕ್ಯಾಚಿತ್ತು ಔಟಾದರು. ಮತ್ತೊಂದೆಡೆ ವಿಹಾನ್ ಮಲ್ಹೋತ್ರಾ ಅವರು ೭೪ ಎಸೆತದಲ್ಲಿ ೭ ಬೌಂಡರಿ ಮತ್ತು ೧ ಸಿಕ್ಸರ್ ಗಳನ್ನು ಒಳಗೊಂಡ ೭೦ ರನ್ ಗಳಿಸಿ ದೇಶಮುಖ್  ಅವರಿಗೇ ವಿಕೆಟ್ ಒಪ್ಪಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು