LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಸುವರ್ಣ ಗೃಹಮಂತ್ರಿ" ಸೀಸನ್ 3.... ನಾಳೆಯಿಂದ ಹೊಸ ರೂಪದಲ್ಲಿ!

.ಕರ್ನಾಟಕದ ಗೃಹಿಣಿಯರ ಮನಗೆದ್ದು ಮನೆಮಾತಾಗಿರೋ ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಕಾರ್ಯಕ್ರಮ "ಸುವರ್ಣ ಗೃಹಮಂತ್ರಿ". ಖ್ಯಾತ ನಟ ರವಿಶಂಕರ್ ಗೌಡ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮ ಕನ್ನಡ ಕಿರುತೆರೆಯಲ್ಲಿ ಪ್ರತಿದಿನ ಪ್ರಸಾರವಾಗುವ ಸಾಮಾನ್ಯ ಜನರ (ಕಾಮನ್ ಮ್ಯಾನ್) ರಿಯಾಲಿಟಿ ಶೋ. ಇದೀಗ "ಸುವರ್ಣ ಗೃಹಮಂತ್ರಿ" ತನ್ನ ಮೂರನೇ ಸೀಸನ್ ನೊಂದಿಗೆ ಹೊಸತನದ ಹುರುಪಲ್ಲಿ ಬರಲು ಸಜ್ಜಾಗಿದೆ.
.ಈಗಾಗಲೇ "ಸುವರ್ಣ ಗೃಹಮಂತ್ರಿ"ಯು ಎರಡು ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದ್ದು 700 ಸಂಚಿಕೆಗಳ ಹೊಸ್ತಿಲಲ್ಲಿದೆ. ಇನ್ನು ಈ ಹೊಸ ಸೀಸನ್ ನ ಪ್ರಮುಖ ಆಕರ್ಷಣೆ ಅಂದ್ರೆ ಪ್ರತೀ ಸಂಚಿಕೆಯಲ್ಲೂ ಇನ್ಮುಂದೆ 'ಸುವರ್ಣ ಪರಿವಾರ'ದ ತಾರೆಯರು ಭಾಗಿಯಾಗಲಿದ್ದಾರೆ. ಸುವರ್ಣ ಸ್ಟಾರ್ ಗಳ ಜೊತೆ ಜನಸಾಮಾನ್ಯರ ಭರ್ಜರಿ ಜಟಾಪಟಿಯೇ ನಡೆಯಲಿದೆ. ಮೊದಲ ಸಂಚಿಕೆಯಲ್ಲಿ 'ಆಸೆ' ಧಾರಾವಾಹಿ ಖ್ಯಾತಿಯ 'ಮೀನಾ' ಪಾಲ್ಗೊಂಡಿದ್ದು ವೀಕ್ಷಕರಿಗೆ ಭರ್ಜರಿ ಮನರಂಜನೆಯೇ ಸಿಗಲಿದೆ.
.ಇನ್ನು ಈ ಶೋ ಬಗ್ಗೆ ಹೇಳೋದಾದ್ರೆ, ತನಗಾಗಿ ಏನನ್ನೂ ಬಯಸದೇ ತನ್ನವರ ಖುಷಿಗಾಗಿ ನಿರಂತರವಾಗಿ ಹಂಬಲಿಸುವ ಗೃಹಿಣಿಯರನ್ನು ಗೌರವಿಸುವ ನಿಟ್ಟಿನಲ್ಲಿ ಕರ್ನಾಟಕದ ಮನೆ ಮನೆಗೆ ಹೋಗಿ ದಿನಕ್ಕೊಂದು ಕುಟುಂಬವನ್ನು ಭೇಟಿ ಮಾಡಿ, ಗಂಡ-ಹೆAಡತಿಯನ್ನು ಆಟ ಆಡಿಸಿ , ಮಾತನಾಡಿಸಿ, ಆಕೆಯ ಕುಟುಂಬದವರ ಪರಿಚಯ ಮಾಡಿಕೊಂಡು, ಅವರಿಗಾಗಿ ಆ ದಿನವನ್ನು ಮೀಸಲಿಟ್ಟು ರಾಣಿ ಸೀಟ್ ನಲ್ಲಿ ಅವರನ್ನ ಕೂರಿಸಿ ಗೌರವಿಸುತ್ತಾ ಥ್ಯಾಂಕ್ಸ್ ಹೇಳುವ ಕಾರ್ಯಕ್ರಮವೇ ಈ "ಸುವರ್ಣ ಗೃಹಮಂತ್ರಿ". ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ನಟ ರವಿ ಶಂಕರ್ ಗೌಡ ರವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆಯ ಉಡುಗೊರೆಯಾಗಿ ಬಾಗಿನ ನೀಡಿ ಗೌರವಿಸಿ ಇಡೀ ಕುಟುಂಬವನ್ನು ಒಗ್ಗೂಡಿಸಿ ಸಂಭ್ರಮಿಸುವುದೇ 'ಸುವರ್ಣ ಗೃಹಮಂತ್ರಿ' ಕಾರ್ಯಕ್ರಮದ ವಿಶೇಷತೆ.
.ಹೊಸ ಸೀಸನ್, ಹೊಸ ಆರಂಭ, ಆಟ-ತುಂಟಾಟದ ಜೊತೆ ಮಸ್ತ್ ಮನರಂಜನೆಯನ್ನೊಳಗೊAಡಿರುವ "ಸುವರ್ಣ ಗೃಹಮಂತ್ರಿ" ಸೀಸನ್ 3 ನಾಳೆಯಿಂದ (ಮಾರ್ಚ್ 25) ಪ್ರತಿದಿನ ಸಂಜೆ 5 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು