LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ಬಿಜೆಪಿ ಮುಖಂಡರಿಂದ ಸಿಹಿ ಹಂಚಿ ಸಂಭ್ರಮ

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕುರುಬರಹಳ್ಳಿ ಹಾಗೂ ನಂದಿನಿ ಲೇಔಟ್ ನಲ್ಲಿರುವ ನವರಾತ್ರಿಯ ವೃತ್ತದಲ್ಲಿ ಇಂದು ಸಾಯಂಕಾಲ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮೈತ್ರಿಕೂಟದ ಮುಖಂಡರು , ಕಾರ್ಯಕರ್ತರು ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಕೇಂದ್ರದಲ್ಲಿ ನರೇಂದ್ರ ಮೋದಿಜಿ ಹಾಗೂ ಅವರ ನೂತನ ಸಚಿವ ಸಂಪುಟವು ಅಧಿಕಾರ ಗೋಪ್ಯತೆಯ ಪ್ರಮಾಣವಚನ ಸ್ವೀಕರಿಸುತ್ತಿರುವ ಕಾರ್ಯಕ್ರಮ ನಡೆಯುತ್ತಿರುವ ಸುಸಂದರ್ಭದಲ್ಲಿ ಎರಡು ಪಕ್ಷಗಳ ಮುಖಂಡರು ಕಾರ್ಯಕರ್ತರು ಪಾಲ್ಗೊಂಡು ಪಟಾಕಿ ಸಿಡಿಸಿ ಸಿಹಿ ಹಂಚಿ ನರೇಂದ್ರ ಮೋದಿ ದೇವೇಗೌಡ್ರು ಕುಮಾರಸ್ವಾಮಿ ಶೋಭಾ ಕರಂದ್ಲಾಜೆ ಗೋಪಾಲಯ್ಯ ಅವರ ಹೆಸರುಗಳ ಘೋಷನೆಕೂಗುತ್ತ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಲಗಳ ಬಾವುಟ ಪ್ರದರ್ಶನ ಮಾಡುವ ಮೂಲಕ ಸಂಭ್ರಮದಲ್ಲಿ ತೇಲಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರದ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ರವರು ದೇಶ ಮತ್ತಷ್ಟು ಹೆಚ್ಚಿನ ಅಭಿವೃದ್ಧಿ ಹಾಗೂ ವಿಶ್ವಗುರು ಆಗಲು ಇಂದು ಮತ್ತೊಮ್ಮೆ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಪ್ರಮಾಣ ವಚನ ಸ್ವೀಕರಿಸಿರುವ ಈ ಸಮಯದಲ್ಲಿ ನಮ್ಮ ದೇಶ ಸೇರಿದಂತೆ ಪ್ರಪಂಚದ ಬಹಳಷ್ಟು ರಾಷ್ಟ್ರಗಳು ಮೋದಿಯವರ ಆಡಳಿತ ಹಾಗೂ ರಾಷ್ಟ್ರಗಳ ನಡುವಿನ ಸಾಮರಸ್ಯ ಭಾಂದವ್ಯ ಕಾಪಾಡಿಕೊಂಡು ತಾವೊಬ್ಬ ಸಮರ್ಥ ಇರುವ ಜನನಾಯಕ ಹಾಗೂ ವಿಶ್ವಾನಾಯಕ ಎಂದು ಸಾಬೀತುಪಡಿಸಿದ್ದಾರೆ ಎಂದ ರಾಘವೇಂದ್ರ ಶೆಟ್ಟಿ ಅವರು,

ಮುಂಬರುವ ದಿನಗಳಲ್ಲಿ ಮತ್ತಷ್ಟು ದೇಶದ ಬಡ ಹಾಗೂಹಿಂದುಳಿದ ವರ್ಗಗಳ ದಿನ ದಲಿತರ ಹಾಗೂ ಮಧ್ಯಮ ವರ್ಗದ ಏಳಿಗೆಗೆ ಕೆಲಸ ಮಾಡಲಿದ್ದಾರೆಂದು ರಾಘವೇಂದ್ರ ಶೆಟ್ಟಿ ಹೇಳಿದರು. ಇದೇ ಸಂದರ್ಭದಲ್ಲಿ ಕೇಂದ್ರದಲ್ಲಿ ಕರ್ನಾಟಕದ ಸಂಸದರಾದ ಕುಮಾರಸ್ವಾಮಿ, ಸೋಮಣ್ಣ ಪ್ರಹ್ಲಾದ ಜೋಶಿ ಶೋಭಾ ಕರಂದ್ಲಾಜೆ ಸೇರಿದಂತೆ ಇನ್ನಿತರ ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ವಿಜಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ,ಮಾಜಿ ಶಾಸಕರಾದ ನರೇಂದ್ರಬಾಬು,ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎನ್ ಜಯರಾಂ, ಜೆಡಿಎಸ್ ಪಕ್ಷದ ಮುಖಂಡರಾದ ಚಂದ್ರೇಗೌಡ, ನಾರಾಯಣಸ್ವಾಮಿ,ಶ್ರೀನಿವಾಸ್, ಬಾಬಿ ಶಿವಕುಮಾರ್,ಕರಿಯಪ್ಪ, ಪ್ರಸನ್ನ ಮುನಿರಾಜು, ನಾರಾಯಣಸ್ವಾಮಿ ಬಿ, ತಮ್ಮಣ್ಣ ಗೌಡ,ಸುರಭಿ ನಾಗರಾಜ್, ಉಮಾ ಶ್ರೀನಿವಾಸ್, ಹನುಮಂತು, ಮಲ್ನಾಡ್ ನಾಗರಾಜ್, ಸುಧಾಕರ್ ರಾಜು ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಪಾಲ್ಗೊಂಡು ವಿಜಯೋತ್ಸವ ಆಚರಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು