LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಎಯುಎಂನಲ್ಲಿ 1 ಲಕ್ಷ ಕೋ. ರೂ. ಗಡಿದಾಟಿದ ಟಾಟಾ ಎಐಎ ಲೈಫ್ ಇನ್ಶೂರೆನ್ಸ್

ಬೆಂಗಳೂರು: ಭಾರತದ ಪ್ರಮುಖ ಜೀವ ವಿಮಾ ಸಂಸ್ಥೆಗಳಲ್ಲಿ ಒಂದಾದ ಟಾಟಾ ಎಐಎ ಲೈಫ್ ಇನ್ಶೂರೆನ್ಸ್ ಕಂ. ಲಿಮಿಟೆಡ್ (ಟಾಟಾ ಎಐಎ) ಅಸೆಟ್ ಅಂಡರ್ ಮ್ಯಾನೇಜ್ಮೆಂಟ್(ಎಯುಎಂ)ನಲ್ಲಿ ರೂ. 1 ಲಕ್ಷ ಕೋಟಿ ದಾಟಿರುವ ಸಾಧನೆ ಮಾಡಿದೆ. ಮೂರು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಕಂಪನಿಯು ತನ್ನ ಎಯುಎಂ ಅನ್ನು ದ್ವಿಗುಣಗೊಳಿಸಿದೆ.

ರೂ.50000 ಕೋಟಿ (ಆಗಸ್ಟ್ 2021) ಇದ್ದ ಎಯುಎಂ ಮೂರು ವರ್ಷದಲ್ಲಿ ರೂ.1,00,000 ಕೋಟಿ ತಲುಪಿದೆ. ಇಂಡಿವಿಜುವಲ್ ನ್ಯೂ ಬಿಸಿನೆಸ್ ಪ್ರೀಮಿಯಂ (ಐಡಬ್ಲ್ಯೂಎನ್‍ಬಿಪಿ) ಆದಾಯದಲ್ಲಿನ ಉತ್ತಮ ಬೆಳವಣಿಗೆ ಮತ್ತು ಉನ್ನತ ಹೂಡಿಕೆಯ ಕಾರ್ಯಕ್ಷಮತೆಯಿಂದ ಈ ಹೆಚ್ಚಳವು ಉಂಟಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಎಐಎಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ವೆಂಕಿ ಅಯ್ಯರ್, ನಮ್ಮ ಎಯುಎಂ ಅನ್ನು 3 ವರ್ಷಗಳಲ್ಲಿ ದ್ವಿಗುಣಗೊಳಿಸಿರುವುದು ಗ್ರಾಹಕರು ನಮ್ಮ ನವೀನ ಉತ್ಪನ್ನಗಳು ಮತ್ತು ಸೇವಾ ಅನುಭವದ ಮೇಲೆ ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ.

ನಮ್ಮ ಏಜೆಂಟ್‍ಗಳು ಮತ್ತು ಪಾಲುದಾರರ ಬೆಂಬಲ ಮತ್ತು ನಮ್ಮ ಹೂಡಿಕೆ ತಂಡದ ಅತ್ಯುತ್ತಮ ಕಾರ್ಯಕ್ಷಮತೆಗೂ ಇದು ಪುರಾವೆಯಾಗಿದೆ ಎಂದು ಹೇಳಿದರು.
ಆರ್ಥಿಕ ವರ್ಷ 24ರ 3ನೇ ತ್ರೈಮಾಸಿಕದಲ್ಲಿ 4 ಸಮೂಹಗಳಲ್ಲಿ(13ನೇ, 25ನೇ, 37ನೇ, 61ನೇ ತಿಂಗಳು) #1ನೇ ಸ್ಥಾನ ಪಡೆಯುವ ಮೂಲಕ ಟಾಟಾ ಎಐಎ ಅತ್ಯುತ್ತಮ ಕಾರ್ಯಕ್ಷಮತೆಯನ್ನು (ಪ್ರೀಮಿಯಂ ಆಧರಿಸಿದಂತೆ) ಸಾಧಿಸಿ ತೋರಿಸಿದೆ.ಕ್ಲೈಮ್‍ಗಳ ಇತ್ಯರ್ಥದ ಅನುಪಾತವು 12-ತಿಂಗಳ ಆಧಾರದ ಮೇಲೆ 0.71%ರಷ್ಟು ಬೆಳವಣಿಗೆಯೊಂದಿಗೆ ಡಿಸೆಂಬರ್-23ರ ಪ್ರಕಾರ 99.19%ಕ್ಕೆ ಸುಧಾರಣೆ ಕಂಡಿದೆ.

ಟಾಟಾ ಎಐಎಯ ಹೂಡಿಕೆ ತತ್ವವು ಪಾಲಿಸಿದಾರರಿಗೆ ಗ್ರಾಹಕರಿಗೆ ಉನ್ನತವಾದ, ಸ್ಥಿರವಾದ ಮತ್ತು ಅಪಾಯ ಹೊಂದಾಣಿಕೆಯ ದೀರ್ಘಾವಧಿಯ ಆದಾಯವನ್ನು ನೀಡುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈ ಕಾರ್ಯವಿಧಾನವು ಬಾಟಮ್-ಅಪ್ ಸ್ಟಾಕ್-ಪಿಕ್ಕಿಂಗ್ ಎಂಬ ತಂತ್ರದಿಂದ ನಡೆಸಲ್ಪಡುತ್ತದೆ. ಮಾರ್ನಿಂಗ್‍ಸ್ಟಾರ್ ರೇಟಿಂಗ್ಸ್* ಮಾರ್ಚ್ 31 2024ರ ಪ್ರಕಾರ ಟಾಟಾ ಎಐಎನ ಅಸೆಟ್ ಅಂಡರ್ ಮ್ಯಾನೇಜ್ಮೆಂಟ್ (ಎಯುಎಂ)ನ 91%ಗೆ 4 ಸ್ಟಾರ್ ಅಥವಾ 5 ಸ್ಟಾರ್‍ಗಳನ್ನು ರೇಟಿಂಗ್ ನೀಡಲಾಗಿದೆ. ಈ ರೇಟಿಂಗ್ ಅನ್ನು 5- ವರ್ಷದ ಆಧಾರದ ಮೇಲೆ ಮಾಡಲಾಗಿದೆ. ಗಮನ ಹರಿಸಬೇಕಾದ ವಿಚಾರವೆಂದರೆ, ಫಂಡ್ ಗಳು ವಿವಿಧ ಕಾಲಾವಧಿಯಲ್ಲಿ ಅದರ ಮಾನದಂಡಗಳನ್ನು ಮೀರಿಸಿವೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು