LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

"ಗುವಾಹಟಿ ಟೆಸ್ಟ್ ನಲ್ಲಿ ಊಟಕ್ಕೂ ಮೊದಲೇ ಟೀ ಬ್ರೇಕ್! ಉಲ್ಟಾ ವೇಳಾಪಟ್ಟಿ"

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಸ್ಸಾಂನ ಗುವಾಹಟಿಯಲ್ಲಿ ನವೆಂಬರ್ ೨೨ ರಿಂದ ನಡೆಯಲಿದೆ. ಅಲ್ಲಿನ ಹವಾಮಾನಕ್ಕೆ ತಕ್ಕಂತೆ ಆ ಪಂದ್ಯದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಯಾಕೆಂದರೆ ಈ ವೇಳಾಪಟ್ಟಿಯಲ್ಲಿ ಭೋಜನ ವಿರಾಮಕ್ಕಿಂತಲೂ ಮುಂಚಿತವಾಗಿಯೇ ಚಹಾ ವಿರಾಮವನ್ನು
ಅಳವಡಿಸಲಾಗಿದೆ. ಟೆಸ್ಟ್ ಪಂದ್ಯಗಳಲ್ಲಿ ಈ ರೀತಿಯ ಬದಲಾವಣೆಗಳು ಬಹಳ ಅಪರೂಪ. ಅಹರ್ನಿಶಿ ಪಂದ್ಯ ಅಲ್ಲದಿದ್ದರೂ ವೇಳಾಪಟ್ಟಿಯ ಬದಲಾವಣೆ ಪ್ರಕಾರ ಈ ಬದಲಾವಣೆಯನ್ನು ಮಾಡಲಾಗಿದೆ. ಈಶಾನ್ಯ ಭಾರತದಲ್ಲಿ ಸೂರ್ಯ ಬೇಗ ಉದಯಿಸಿ ಬೇಗ ಅಸ್ತಮಿಸುವುದರಿಂದ, ಪಂದ್ಯದ ಮೊದಲ ಸೆಷನ್ ಎಂದಿಗಿಂತ ೩೦ ನಿಮಿಷ ಮುಂಚಿತವಾಗಿ
ಆರಂಭವಾಗಲಿದೆ.

ಈ ಪಂದ್ಯವು ಗುವಾಹಟಿಯ ಬಾರ್ಸಾಪಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯವಾಗಿದೆ. ಈ ಮೈದಾನದಲ್ಲಿ ಇತ್ತೀಚೆಗೆ ಮುಗಿದ ಮಹಿಳಾ ಏಕದಿನ ವಿಶ್ವಕಪ್
ಪಂದ್ಯ ನಡೆದಿತ್ತು. ರಾಜಸ್ಥಾನ್ ರಾಯಲ್ಸ್ ತಂಡ ಇಲ್ಲಿ IPL ೨೦೨೫ ಪಂದ್ಯಗಳನ್ನು ಆಯೋಜಿಸಿತ್ತು. ಗುವಾಹಟಿ ಪಂದ್ಯದ ವೇಳಾಪಟ್ಟಿ ಟಾಸ್ ಬೆಳಗ್ಗೆ ೮:೩೦ಕ್ಕೆ ನಡೆಯಲಿದೆ. ಮೊದಲ
ಸೆಷನ್ ಬೆಳಗ್ಗೆ ೯:೦೦ ರಿಂದ ೧೧:೦೦ ರವರೆಗೆ ನಡೆಯಲಿದೆ. ಬಳಿಕ ೨೦ ನಿಮಿಷಗಳ ಚಹಾ ವಿರಾಮ ಇರಲಿದೆ. ೧೧:೨೦ಕ್ಕೆ ಆಟ ಪುನರಾರಂಭಗೊಂಡು ಮಧ್ಯಾಹ್ನ ೧:೨೦ರವರೆಗೆ ನಡೆಯಲಿದೆ. ೧:೨೦ ರಿಂದ ೨:೦೦ ರವರೆಗೆ ಭೋಜನ ವಿರಾಮ ಇರಲಿದೆ ಇರುತ್ತದೆ. ಅಂತಿಮ ಸೆಷನ್ ಸಂಜೆ ೪:೦೦ ಗಂಟೆಗೆ ಮುಕ್ತಾಯಗೊಳ್ಳಲಿದೆ.

ಟೆಸ್ಟ್ ವಿಶ್ವಚಾಂಪಿಯನ್ ದಕ್ಷಿಣ ಆಫ್ರಿಕಾ ಮತ್ತು ಶುಭಮನ್ ಗಿಲ್ ನೇತೃತ್ವದ ಭಾರತ ತಂಡಗಳ ನಡುವೆ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯವು ನವೆಂಬರ್ ೧೪ ರಿಂದ ೧೮ ರವರೆಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. ಇದು ಅತ್ಯಂತ ಸ್ಪರ್ಧಾತ್ಮಕ ಪಿಚ್ ಎಂದು ಪಿಚ್ ಕ್ಯುರೇಟರ್ ತಿಳಿಸಿರುವುದರಿಂದ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಇದ್ದಾರೆ. ದಕ್ಷಿಣ ಆಫ್ರಿಕಾ ತಂಡವು ೨೦೨೧-೨೨ ರಲ್ಲಿ ತವರಿನಲ್ಲಿ ನಡೆದ ಸರಣಿಯಲ್ಲಿ ೨-೧ ಅಂತರದಿಂದ 'ಫ್ರೀಡಂ ಟ್ರೋಫಿ' ಗೆದ್ದುಕೊಂಡಿತ್ತು. ಆದರೆ ೨೦೧೯ ರಲ್ಲಿ ಭಾರತಕ್ಕೆ ಬಂದಿದ್ದಾಗ, ೦-೩ ಅಂತರದಿಂದ ಸರಣಿಯನ್ನು ಸೋತಿತ್ತು.

ವರ್ಣಭೇದ ನೀತಿಯ ಪರಿಣಾಮ ದಕ್ಷಿಣ ಆಫ್ರಿಕಾತಂಡ ಕ್ರಿಕಟ್ ನಿಂದ ಬಹುಕಾಲ ನಿಷೇಧಕ್ಕೊಳಗಾಗಿತ್ತು. ೧೯೯೨ ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ನಂತರ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಒಟ್ಟು ೧೭ ಟೆಸ್ಟ್ ಸರಣಿಗಳು ನಡೆದಿವೆ. ಇದರಲ್ಲಿ ದಕ್ಷಿಣ ಆಫ್ರಿಕಾ ತಂಡ ೮ ಬಾರಿ ಸರಣಿಗಳನ್ನು ಗೆದ್ದಿದ್ದರೆ, ಭಾರತ ೫ ಸರಣಿಗಳನ್ನು ಗೆದ್ದಿದೆ. ೪
ಸರಣಿಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಇನ್ನು ದಕ್ಷಿಣ ಆಫ್ರಿಕಾ ತಮ್ಮ ತವರಿನಲ್ಲಿ ನಡೆದ ಒಂಬತ್ತು ಸರಣಿಗಳಲ್ಲಿ ಏಳನ್ನು ಗೆದ್ದಿದೆ. ೨೦೧೦- ೧೧ ಮತ್ತು ೨೦೨೩-೨೪ ರ ಎರಡು ಸರಣಿಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಹೀಗಾಗಿ ಭಾರತ ತಂಡ ಅಲ್ಲಿ ಒಂದೇ ಒಂದು ಸರಣಿಯನ್ನೂ ಗೆದ್ದಿಲ್ಲ. ಅದೇ ಭಾರತ ತಂಡ ತವರಿನಲ್ಲಿ ಹರಿಣಗಳ ವಿರುದ್ಧ ಉತ್ತಮ ದಾಖಲೆ ಹೊಂದಿದೆ. ಎಂಟು ಸರಣಿಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕಾ ೧೯೯೯-೨೦೦೦ ರಲ್ಲಿ ಮಾತ್ರ ಭಾರತದಲ್ಲಿ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು