LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಹಬ್ಬಕ್ಕೆ ಅಗತ್ಯ ವಸ್ತುಗಳ ದರ ದುಬಾರಿ

ಬೆಂಗಳೂರು: ಮಂಗಳವಾರ ಯುಗಾದಿ ಹಿಂದೂ ಪಂಚಾಂಗದ ಪ್ರಕಾರ ಹೊಸವರ್ಷ. ಹೀಗಾಗಿ ಯುಗಾದಿ ಪ್ರತಿವರ್ಷ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಮಾರುಕಟ್ಟೆ ಜನ ಜಂಗಳಿಯಿಂದ ಕೂಡಿರುತ್ತದೆ. ಖರೀದಿ ಭರಾಟೆ ಜೋರಾಗಿರುತ್ತದೆ. ಆದರೆ ಈ ವರ್ಷ ಮಾರಕಟ್ಟೆಯಲ್ಲಿ ಹೇಳಿಕೊಳ್ಳುವಷ್ಟು ಜನರಿಲ್ಲ.

ಬಿಸಿಲಿಗೆ ಹೆದರಿ ಜನರು ಮಾರುಕಟ್ಟೆಗಳಿಗೆ ಬರಲು ಹಿಂದೇಟು ಹಾಕುತ್ತಿರುವುದು ಒಂದು ಕಡೆಯಾದರೆ, ಬರಗಾಲದಿಂದ ನೀರಿಲ್ಲದೆ ಹಣ್ಣು, ಹೂವು, ತರಕಾರಿ ಬೆಳೆ ಕಡಿಮೆಯಾಗಿದೆ. ಇದರಿಂದ ಹೂವು, ಹಣ್ಣು ಮತ್ತು ತರಕಾರಿ ಬೆಲೆ ಗಗನಕ್ಕೆ ಏರಿದೆ. ಈ ಕಾರಣದಿಂದ ಜನರು ಮಾರುಕಟ್ಟೆಯತ್ತ ಮುಖ ಮಾಡುತ್ತಿಲ್ಲ.
ಎರಡು ವಾರಗಳ ಮಾರುಕಟ್ಟೆಯಲ್ಲಿ ಕೆಜಿ ಬೀನ್ಸ್‍ಗೆ 50 ರಿಂದ 60 ರೂ. ಇತ್ತು. ಇದೀಗ ಬೀನ್ಸ್ ಬೆಲೆ 70 ರೂ.ಗೆ ಏರಿಕೆಯಾಗಿದೆ.

40 ರಿಂದ 50 ರೂ. ವರೆಗೆ ಮಾರಾಟವಾಗುತ್ತಿದ್ದ ಕ್ಯಾರೆಟ್ 60 ರೂ. ಕ್ಕೆ ಮಾರಾಟವಾಗುತ್ತಿದೆ. ಇತರೆ ತರಕಾರಿಗಳಾದ ಕ್ಯಾಪ್ಸಿಕಂ, ಬದನೆ, ಟೊಮೇಟೊ ಬೆಲೆ ಕೆಜಿಗೆ 10 ರೂ. ಏರಿಕೆಯಾಗಿದೆ. ಹಾಗಿದ್ದರೆ ಕೆಆರ್ ಮಾರುಕಟ್ಟೆಯಲ್ಲಿ ತರಕಾರಿ, ಹೂವು ಮತ್ತು ಹಣ್ಣಿನ ಬೆಲೆ ಹೀಗಿದೆ..ಹೂವಿನ ಬೆಲೆ: ಮಲ್ಲಿಗೆ 500-600, ಸೇವಂತಿಗೆ 300-350, ಗುಲಾಬಿ 250, ಚೆಂಡು 150, ಕಾಕಡ 800, ಕನಕಾಂಬರ 800-1000, ಸುಗಂದರಾಜ 300, ಆಸ್ಟ್ರೀಲಿಯಾ 600, ತುಳಸಿ 1 ಮಾರ್‍ಗೆ 100, ಬೇವು 1 ಕಟ್‍ಗೆ 20-30, ಮಾವಿನ ಎಲೆ 30,

ಹಣ್ಣಿನ ಬೆಲೆ: ಹಣ್ಣಿನ ಬೆಲೆ (ಕೆಜಿಗೆ), ಹಣ್ಣು ದರ (ರೂ. ಗಳಲ್ಲಿ), ಅನಾನಸ್ (ಜೋಡಿ) 80, ಸೇಬು 220, ದ್ರಾಕ್ಷಿ 100, ಸಪೋಟ 100, ಮೂಸಂಬಿ 100,ಕಿತ್ತಲೆ 140, ಕಿವಿ (3ಕ್ಕೆ) 100, ಡ್ಯ್ರಾಗನ್ ಫ್ರೂಟ್ 1ಕ್ಕೆ 80, ದಾಳಿಂಬೆ 200, ಬಟರ್ ಫ್ರೂಟ್ 200, ಮರಸೇಬು 200, ಏಲಕ್ಕಿ ಬಾಳೆ 80, ಪಚ್ಚಬಾಳೆ 40, ತರಕಾರಿ ಬೆಲೆ: ಬೀನ್ಸ್ 60-80, ಮೂಲಂಗಿ 40-30, ಬದನೆಕಾಯಿ 35-25, ಊಟಿ ಗಜ್ಜರಿ 35-40, ಹಾಗಲಕಾಯಿ 40-60, ಈರುಳ್ಳಿ 20-25, ಬೀಟ್‍ರೂಟ್ 30-40, ನವಿಲುಕೋಸು 35-40, ಬೆಂಡೆಕಾಯಿ 30-50, ಬೆಳ್ಳುಳ್ಳಿ 180-300, ಆಲೂಗಡ್ಡೆ 25-30, ಹೀರೆಕಾಯಿ 35-40, ಟೊಮೆಟೊ 20-25, ಮೆಣಸಿನಕಾಯಿ 60-65, ಕೊತ್ತಂಬರಿ20-30, ಕ್ಯಾಪ್ಸಕಮ್ 20-45, ನುಗ್ಗೆಕಾಯಿ 60-80,

ಬೆಂಗಳೂರಿನ ಸುತ್ತಮುತ್ತಲಿನ ಪ್ರಮುಖ ತೋಟಗಾರಿಕೆ ವಲಯದಲ್ಲಿ ಕೃಷಿಯ ಚಟುವಟಿಕೆ ಸುಮಾರು 50% ರಷ್ಟು ಕಡಿಮೆಯಾಗಿದೆ. ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳ ಬೆಲೆಗಳು ಈಗ ಸ್ವಲ್ಪ ಏರಿಕೆಯಾಗಿದೆ. ಮಳೆಯಾಗದ ಹಿನ್ನೆಲೆಯಲ್ಲಿ, ಮುಂಬರುವ ವಾರಗಳಲ್ಲಿ ಈ ಬೆಲೆಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು