LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ದಿ ಟಾಸ್ಕ್‌ ಟೀಸರ್‌ ಬಿಡುಗಡೆ ಬೆಳ್ಳಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿರುವ

ರಾಘು ಶಿವಮೊಗ್ಗ ನಿರ್ದೇಶಿಸಿರುವ ಮೂರನೇ ಸಿನಿಮಾ ದಿ ಟಾಸ್ಕ್ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ನವೆಂಬರ್ ೨೧ಕ್ಕೆ ತೆರೆಗೆ ಎಂಟ್ರಿ ಕೊಡಲಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆ ದಿದೆ. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿ ಎಂ ಚಂದ್ರಶೇಖರ್, ಲಹರಿ ವೇಲು, ವೀರಲೋಕ ವೀರಕಪುತ್ರ ಶ್ರೀನಿವಾಸ್ , ನಿರ್ದೇಶಕರಾದ
ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಬಹದ್ದೂರ್ ಚೇತನ್ ಭಾಗಿಯಾಗಿ ಶುಭಾಶಯ ಕೋರಿದರು.

ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ಎಂ ಚಂದ್ರಶೇಖರ್, ಟಾಸ್ಕ್ ಅಂದರೆ ಆಪರೇಷನ್, ಮಿಷನ್. ಇದನ್ನು ಯುನಿಫಾರ್ಮ್ ಸರ್ವೀಸ್ ನಲ್ಲಿ ಇದನ್ನು ಬಳಸುತ್ತಾರೆ. ಯಾವುದೇ ಒಂದು ಸಿನಿಮಾದಲ್ಲಿ ಮೆಸೇಜ್ ಇರಬೇಕು. ಇದರಿಂದ ಸಮಾಜದಲ್ಲಿ ಪ್ರಭಾವ ಜಾಸ್ತಿ ಇರುತ್ತದೆ. ಕೇವಲ ಎಂಟರ್ಟೈನ್ಮೆಂಟ್‌ ಅಲ್ಲದೇ ಒಂದು ಮೆಸೇಜ್ ಇರುವ ಸಿನಿಮಾ ದಿ ಟಾಸ್ಕ್. ಒಂದು ಸಿನಿಮಾ ಮಾಡಲು ಸಾಕಷ್ಟು ಕಷ್ಟ ಇರುತ್ತದೆ. ಇಬ್ಬರು ನಾಯಕರಿಗೆ ಒಳ್ಳೆಯದಾಗಲಿ. ಟೀಸರ್ ಚೆನ್ನಾಗಿದೆ. ಒಳ್ಳೆ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಒಳ್ಳೆ ತಾರಾ ಬಳಗ ಇದೆ
ಎಂದರು. ಪವನ್ ಒಡೆಯರ್ ಮಾತನಾಡಿ, ಟೀಸರ್ ಪ್ರಾಮಿಸಿಂಗ್ ಆಗಿದೆ. ಇಬ್ಬರು ನಾಯಕರು ಸ್ಕ್ರೀನ್‌ ನಲ್ಲಿ ಚೆನ್ನಾಗಿ ಕಾಣಿಸುತ್ತಾರೆ. ಬರವಣಿಗೆ, ಸಿನಿಮಾ ಮೇಕಿಂಗ್ ಗೆ ರಾಘು ಸರ್ ಒತ್ತು ನೀಡುತ್ತಾರೆ.

ಚಿತ್ರರಂಗಕ್ಕೆ ಮಕ್ಕಳು ಹೋಗ್ತಾರೆ ಎಂದರು ತಂದೆ ತಾಯಿ ಬೇಡ ಎನ್ನುತ್ತಾರೆ. ಈ ವಿಚಾರದಲ್ಲಿ ರಾಜೇಶ್  ಸರ್ ಮಗ ಅದೃಷ್ಟ ಮಾಡಿದ್ದಾರೆ. ಅವರ ತಂದೆಮಗನ ಸಿನಿಮಾ ಕನಸಿಗೆ ಸಾಥ್ ಕೊಟ್ಟಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ದಿ ಟಾಸ್ಕ್ ಚಿತ್ರ ಸೂಪರ್  ಹಿಟ್ ಆಗಲಿ ಎಂದರು. ಚೇತನ್ ಕುಮಾರ್ ಮಾತನಾಡಿ, ಟೀಸರ್ ನೋಡಿದ್ರೆ ಟೆರಿಫಿಕ್ ಆಗಿದೆ. ಕಥೆ ನೀವು ಗೆಸ್ ಮಾಡಿ ಎಂದು ಡೈರೆಕ್ಟರ್ ಟಾಸ್ಕ್ ಕೊಟ್ಟಿದ್ದಾರೆ. ಇಬ್ಬರು ಹೀರೋಗಳನ್ನು ನೋಡಿದ್ರೆ ಎರಡು ಹುಲಿಗಳನ್ನು ನೋಡಿದ ರೀತಿ ಆಗುತ್ತದೆ. ರಾಘು ಶಿವಮೊಗ್ಗ ಅಭಿನಯ ಎಷ್ಟೋ ನೈಜವಾಗಿ ಇರುತ್ತದೆಯೋ ಅವರು ಆಯ್ಕೆ ಮಾಡಿಕೊಳ್ಳುವ ಕಥೆ ಕೂಡ ನೈಜವಾಗಿ ಇರುತ್ತದೆ. ಕಥೆ ಮೇಲೆ ನಿರೀಕ್ಷೆ ಇದೆ. ಅವರು ಯಾವುದೇ ಸಿನಿಮಾ ಮಾಡಿದರೂ ಕೊನೆ ಸೀನ್ ತನಕ ಹೋಲ್ಡ್ ಮಾಡಿ ಇಡುತ್ತಾರೆ. ಟೆಕ್ನಿಕಲ್ ಟೀಂ ಸ್ಟ್ರಾಂಗ್‌ ಆಗಿದೆ.

ಒಳ್ಳೆ ಕಲಾ ಬಳಗ ಚಿತ್ರದಲ್ಲಿದೆ ಎಂದರು. ನಿರ್ದೇಶಕ ರಾಘು ಶಿವಮೊಗ್ಗ ಮಾತನಾಡಿ, ದಿ ಟಾಸ್ಕ್ ಚಿತ್ರವಾಗಲು ನಿರ್ಮಾಪಕರ ಪಾತ್ರ ಮುಖ್ಯವಾಗಿದೆ. ಪ್ರತಿಯೊಬ್ಬ ಟೆಕ್ನಿಷಿಯನ್ ಈ ಚಿತ್ರಕ್ಕೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ದಿ ಟಾಸ್ಕ್ ಆಕ್ಷನ್ ಥ್ರಿಲ್ಲರ್ ಜಾನರ್. ಹಲವು ನೈಜ ಘಟನೆ ಇಟ್ಕೊಂಡು ಕಥೆ ಎಣೆದಿದ್ದೇನೆ ಎಂದು ಮಾಹಿತಿ ನೀಡಿದರು. ಜಯಸೂರ್ಯ ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಶ್ರೀ ಲಕ್ಷ್ಮೀ, ಅರವಿಂದ್ ಕುಪ್ಳಿಕರ್,  ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್, ಸಂಪತ್  ಮೈತ್ರಿಯಾ, ಬಿ ಎಂ ಗಿರಿರಾಜ್, ಭರತ್ ಜಿಬಿ, ಪಿಡಿ ಸತೀಶ್ ಚಂದ್ರ,ಕಿರಣ್ ನಾಯ್ಕ್, ಅಶ್ವಿನ್ ಹಾಸನ್  ಸೇರಿದಂತೆ ನಿರ್ದೇಶಕ ರಾಘು ಶಿವಮೊಗ್ಗ ಕೂಡಾ ಚಿತ್ರದಲ್ಲಿ ಅಭಿನಯಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು