LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ತಿಕ್ಲುರಾಮ ಸಿನಿಮಾದ ಪುಸ್ತಕ ಬಿಡುಗಡೆ

ಪರಿಸರ ಪ್ರೇಮಿ, ಹೃದಯಸ್ಪರ್ಶಿ ಕಥೆಯನ್ನು ಹೊಂದಿರುವ `ತಿಕ್ಲುರಾಮ' ಡಾ.ನಟರಾಜ ವಿರಚಿತ ಕಾದಂಬರಿಯಾಗಿದ್ದು ಸಿನಿಮಾರೂಪದಲ್ಲಿ ಬರುತ್ತಿದೆ. ಈಗಾಗಲೇ ಶೇಕಡ 40ರಷ್ಟು ಚಿತ್ರೀಕರಣ ನಡೆದಿದೆ. ಮೊನ್ನೆಯಷ್ಟೇ ಕಾದಂಬರಿ ಬಿಡುಗಡೆ ಸಮಾರಂಭವು ಮಂತ್ರಿ ಮಾಲ್‌ದಲ್ಲಿ ಅದ್ದೂರಿಯಾಗಿ ನಡೆಯಿತು. ಪದ್ಮಶ್ರೀ ಡಾ.ದೊಡ್ಡರಂಗೇಗೌಡ, ನಟ ನಿರ್ದೇಶಕ ಕೆ.ಸುಚೇಂದ್ರಪ್ರಸಾದ್, ಸಾಹಿತಿ ಮತ್ತು ನಿರ್ದೇಶಕ ಬಿ.ಶಿವಾನಂದ, ಡಾ.ಭರತ್ ಮುಂತಾದವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
ಇನ್ನು ಸಿನಿಮಾಕ್ಕೆ ಮಂಜುಕವಿ ನಿರ್ದೇಶನ ಜವಬ್ದಾರಿಯನ್ನು ಹೊತ್ತುಕೊಂಡಿದ್ದು, ಡಾ.ರಾಜವೀರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಕರಿಷ್ಮ-ಶ್ರಾ÷್ಯವ್ಯ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಶೃತಿ.ಜಿ.ಬಿ ಮತ್ತು ಕೋಮಲ ನಟರಾಜು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ತಾರಾಗಣದಲ್ಲಿ ಸುಚೇಂದ್ರ ಪಸ್ರಾದ್, ಜಹಾಂಗೀರ್, ಚೈತ್ರರಾಮ್, ಹಾಸ್ಯ ನಟ ಗಿರೀಶ್. ಇವರೊಂದಿಗೆ ವಿನೋದ್ ಪವಿತ್ರ, ನಿಖಿತಸ್ವಾಮಿ, ಶ್ರಾವ್ಯ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಅಭಿನಯಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಪುಸ್ತಕವನ್ನು ಪ್ರತಿಯೊಬ್ಬರು ಓದಬೇಕು. ಓದಿದವರು ಖಂಡಿತ ಒಂದಷ್ಟು ಜನ ಬದಲಾವಣೆ ಆಗ್ತಾರೆ. ಪರಿಸರ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು. ಪ್ರಕೃತಿ ಎಲ್ಲವನ್ನು ಕೊಟ್ಟಿದೆ. ಇನ್ನು ಮುಂತಾದ ವಿಷಯಗಳ ಬಗ್ಗೆ ವರ್ಣನೆ ಮಾಡಲಾಗಿದೆ. ಸುಚೇಂದ್ರಪ್ರಸಾದ್ ಶಾಸಕರಾಗಿ ಬಣ್ಣ ಹಚ್ಚುತ್ತಿದ್ದಾರೆ. ಬೇರೆ ಟೈಟಲ್ ಇಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತಿಳಿಸಲಾಗುವುದೆಂದು ಮಂಜುಕವಿ ತಿಳಿಸಿದರು.
ಬಿಇ ಮುಗಿಸಿದ ನನಗೆ, ನಾನು ಕಥೆ ಬರೆದಿರುವುದು ಸೋಜಿಗ ಅನಿಸಿದೆ. ಪ್ರೌಡಶಾಲೆಯಲ್ಲಿದ್ದಾಗ ದೊಡ್ಡರಂಗೇಗೌಡರ ಪ್ರವಚನ ಕೇಳಿ ಪ್ರೇರಣೆಯಾಗಿ, ಅವರಂತೆ ಜೀವನದಲ್ಲಿ ನಡೀಬೇಕು ಅಂದುಕೊಂಡಿದ್ದೆ, ಇಂದು ಹಲವು ಕಥೆಗಳನ್ನು ಬರೆಯಲು ಸಹಕಾರಿ ಆಯಿತು. ಸರ್ಕಾರಿ ಕೆಲಸದಲ್ಲಿ ಕಂಡAತ, ಸುತ್ತಮುತ್ತಲಿನ ವಿದ್ಯಾಮಾನಗಳನ್ನು ಅಕ್ಷರರೂಪದಲ್ಲಿ ತಂದಿದ್ದೇನೆ. ಕೊನೆಗೆ ತಿಕ್ಲುರಾಮ ಹೆಸರು ಇಡಲಾಗಿದ್ದಕ್ಕೆ ಕಾರಣವೇನು ಎಂಬುದಕ್ಕೆ ಡಾ.ರಾಜ್‌ವೀರ್ ವಿವರಣೆ ಕೊಟ್ಟರು.
ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ವಿಶಿಷ್ಟ ಕೊಡುಗೆಗಳಾದ ಬರಹಗಳು, ಸೃಜನಶೀಲ ಸಾಹಿತ್ಯಗಳು. ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂದರ್ಭಗಳಲ್ಲಿ ನಮ್ಮ ಭಾಷೆಯು ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡು, ಕನ್ನಡ ಸಂಸ್ಕೃತಿ ಎಲ್ಲಾ ಕಡೆ ರಾರಾಜಿಸುತ್ತಿದೆ. ತಿಕ್ಲುರಾಮ ಕಾದಂಬರಿ ಚೆನ್ನಾಗಿದೆ. ಸಿನಿಮಾ ನೋಡಲು ಕಾತುರನಾಗಿದ್ದೇನೆಂದು ಡಾ.ದೊಡ್ಡರಂಗೇಗೌಡರು ಹೇಳಿದರು.
ಸುಚೇಂದ್ರಪ್ರಸಾದ್ ಹೇಳುವಂತೆ, ಪುಸ್ತಕದಲ್ಲಿ ಗ್ರಾಮೀಣ ಸೊಗಡು, ಪರಿಸರ ಕಾಳಜಿ ಓದುಗರನ್ನು ಆಸಕ್ತಿ ತರಿಸುವಂತಿದೆ. ತಿಕ್ಲುರಾಮ ಸಿನಿಮಾ ರೂಪದಲ್ಲಿ ಸಾಕ್ಷಿಯಾಗಿರುವುದು, ಗಮನೀಯ ಮತ್ತು ಮಾದರಿ ಅನಿಸುತ್ತೆ. ಇಂತಹ ಕೃತಿಗಳು ನಿರಂತವಾಗಿ ಹೊರಬರಲಿ. ಮನದ ಗದ್ದಲ ದೂರ ಮಾಡಿಕೊಳ್ಳಲು, ಪುಸ್ತಕ ಸಹಕಾರಿಯಾಗಿ, ಮನಸ್ಸಿಗೆ ಮುದ ನೀಡುತ್ತದೆ. ಮಂಜುಕವಿ ಶ್ರಮಕ್ಕೆ ಫಲ ಸಿಗಲಿ ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು