LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಯುವ ಪ್ರತಿಭೆಗಳ ' ರಂಗಸ್ಥಳ' ಚಿತ್ರದ ಟೈಟಲ್ ಲಾಂಚ್

ಚಂದನವನಕ್ಕೆ ಯುವಕರ ಬಳಗವು ಪೂರ್ವ ತಯಾರಿಯೊಂದಿಗೆ ಒಂದು ಕಂಪನಿಯ ಮಾದರಿಯಲ್ಲಿ ತಂಡವನ್ನು ಕಟ್ಟಿಕೊಂಡು ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಜೀವನವೇ ಒಂದು ರಂಗ ಪ್ರಪಂಚ ಅಲ್ಲಿ ಎಲ್ಲಾ ರೀತಿಯ ಏಳು, ಬೀಳುಗಳು, ಪಾತ್ರಧಾರಿಗಳು ಕಣ್ಣ ಮುಂದೆ ಹಾದು ಹೋಗುತ್ತಾರೆ.

ಅಂತಹದ್ದೇ ಒಂದು ವಿಭಿನ್ನ ಕಥೆಯ ಮೂಲಕ ಅಘೋರ್ ಮೋಶನ್ ಪಿಚ್ಚರ್ಸ್ ಅಡಿಯಲ್ಲಿ ಡಾ. ರೇವಣ್ಣ ನಿರ್ಮಾಣದ 'ರಂಗಸ್ಥಳ ' ಎಂಬ ನೂತನ ಚಿತ್ರದ ಟೈಟಲ್ ಲಾಂಚ್ ಬಿಡುಗಡೆ ಮಾಡಲಾಯಿತು.ಈ ಒಂದು ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡ ಮಂಜುನಾಥ್ , ಸಂತೋಷ್ ಸೇರಿದಂತೆ ಹಲವರು ಹಾಜರಿದ್ದರು. ಬಹುತೇಕ ಯುವ ಪ್ರತಿಭೆಗಳ ತಂಡ ಸೇರಿಕೊಂಡು ಸಿದ್ಧಪಡಿಸುತ್ತಿರುವ ಈ ಚಿತ್ರದ ಪತ್ರಿಕಾಗೋಷ್ಠಿಯನ್ನ ಒಒಃ ಲೆಗೆಸಿ ಆಯೋಜಿಸಲಾಗಿದ್ದು , ಮಾಧ್ಯಮದವರ ಮುಂದೆ ಚಿತ್ರ ತಂಡ ಮಾಹಿತಿಯನ್ನು ಹಂಚಿಕೊಳ್ಳಲು ಮುಂದಾದರು.

ಈ ಚಿತ್ರದ ನಿರ್ಮಾಪಕ ಡಾ. ರೇವಣ್ಣ ಮಾತನಾಡುತ್ತಾ ನಾನು ಮೂಲತ ರೈತ ಕುಟುಂಬದಿಂದ ಬಂದವನು, ವಿದ್ಯಾಭ್ಯಾಸದಲ್ಲಿ ಹೆಚ್ಚು ಗಮನ ಇಲ್ಲದಿದ್ದರೂ ಮನೆಯವರ ಒತ್ತಾಯದ ಮೇರೆಗೆ ಮುಗಿಸಿ ಡಿಗ್ರಿ ಮುಗಿಸಿಕೊಂಡೆ. ಭದ್ರಾವತಿಯ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ನನ್ನ ಎತ್ತರವನ್ನು ಗಮನಿಸಿದಂತಹ ಹಿರಿಯರೊಬ್ಬರು ನನಗೆ ವಾಲಿಬಾಲ್ ತಂಡಕ್ಕೆ ಸೇರಿಸಿದರು. ನಂತರ ನಾನು ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೂ ಆಡಿ ಪ್ರಶಸ್ತಿಯನ್ನು ಪಡೆದೆ.

ನನ್ನ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಪದವಿಯು ಸಿಕ್ಕಿತು. ಸಿನಿಮಾ ಬಗ್ಗೆ ನಮಗೇನು ಹೆಚ್ಚು ಒಲವಿಲ್ಲ ಆದರೆ ನನ್ನ ಇಬ್ಬರು ಮಕ್ಕಳಾದ ವಿನೋದ್ ಕುಮಾರ್ ಜೈ ಕೀರ್ತಿ ಹಾಗೂ ವಿನಯ್ ಕುಮಾರ್ ಜೈ ಕೀರ್ತಿ ಅಮೇರಿಕಾದಲ್ಲಿ ಸ್ವಂತ ಉದ್ಯೋಗವನ್ನು ಆರಂಭಿಸಿದರು , ಅದು ಹಂತ ಹಂತವಾಗಿ ದೊಡ್ಡ ಮಟ್ಟಕ್ಕೆ ಬೆಳೆದಿದೆ.

ಅವರ ಜೊತೆ ನಾನು ನನ್ನ ಮಡಿದಿ ಕೂಡ ಈಗ ಕೈಜೋಡಿಸಿದ್ದೇವೆ. ಈ ಒಂದು ಚಿತ್ರವನ್ನ ಸಾಫ್ಟ್ವೇರ್ ಕಂಪನಿಯ ಕಾರ್ಯ ವೈಖರಿಯಂತೆ ಬಹಳ ಅಚ್ಚುಕಟ್ಟಾಗಿ ಆರಂಭಿಸಿದ್ದೇವೆ, ಕಲಾವಿದರು , ತಂತ್ರಜ್ಞಾನರ ಆಯ್ಕೆಯ ಜೊತೆಗೆ ವಿಶೇಷವಾಗಿ ಮಲಯಾಳಂನ ಖ್ಯಾತ ನಟ ಮನೋಜ್. ಕೆ.ಜಯನ್ ಆಯ್ಕೆಯನ್ನು ನನ್ನ ಸುಪುತ್ರ ವಿನೋದ್ ಫೈನಲ್ ಮಾಡಿದ್ರು. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ತಂಡ ಅಚ್ಚುಕಟ್ಟಾಗಿ ಕೆಲಸ ಮಾಡ್ತಿದೆ. ನಮ್ಮಿಂದ 150 ಕುಟುಂಬಗಳಿಗೆ ಅನುಕೂಲವಾದರೆ ಸಾಕು , ನಮಗೆ ಲಾಭ ಬೇಡ ಹಾಕಿದ ಹಣ ಬಂದರೆ ಸಾಕು , ನಮ್ಮ ಸಂಸ್ಥೆಯಿಂದ ಹೊಸಬರಿಗೆ ಮುಂದೆಯೂ ಅವಕಾಶ ಕೊಡುವ ಉದ್ದೇಶವಿದೆ. ಹಾಗೆಯೇ ವಾಲಿಬಾಲ್ ಗೆ ಸಂಬಂಧಪಟ್ಟ ಚಿತ್ರವನ್ನು ನಿರ್ಮಿಸುವ ಆಸೆಯೂ ನನಗಿದೆ ಎಂದು ಹೇಳಿಕೊಂಡರು.

ಇನ್ನು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿರುವ ಯುವ ಪ್ರತಿಭೆ ಈಶ್ವರ್ ನಿತಿನ್ ಪ್ರಥಮ ಪ್ರಯತ್ನ ಇದಾಗಿದೆ. ಡೆಂಟಲ್ ವಿದ್ಯಾರ್ಥಿ ಆಗಿದ್ದ ನಿತಿನ್ , ಎಲ್. ವಿ. ಪ್ರಸಾದ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆದು ಒಂದಷ್ಟು ಕಿರು ಚಿತ್ರ , ಹ್ಯಾಡ್ ಫಿಲಂ ನಲ್ಲಿ ವರ್ಕ್ ಮಾಡುವ ಮೂಲಕ ಪೂರ್ಣ ಪ್ರಮಾಣದ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಇದೊಂದು ಗ್ರಾಮೀಣ ಸೊಗಡಿನ ಕಥೆಯಾಗಿದ್ದು , ನಮ್ಮ ಪುತ್ತೂರು , ಸುಳ್ಯ, ಭಾಗದ ಭಾಷೆ , ಸೊಗಡು , ಆಚಾರ , ವಿಚಾರ, ಕಲೆ, ಬದುಕಿನ ಸುತ್ತ ನೈಜಕ್ಕೆ ಪೂರಕ ಎನ್ನುವಂತಹ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ರಂಗಸ್ಥಳ ಎಂದರೆ ನನ್ನ ಪ್ರಕಾರ ಒಂದು ವೇದಿಕೆ , ರಂಗ ಕಲೆಗಳ ಪ್ರದರ್ಶನ ನಡೆಯುವ ಸ್ಥಳ. ಅದೇ ರೀತಿ ನನ್ನ ಕಥೆಗೆ ಬರುವ ಪಾತ್ರಧಾರಿಗಳ ಒಬ್ಬೊಬ್ಬರದು ಒಂದೊಂದು ರೀತಿಯ ಮನಸ್ಥಿತಿ. ಅದು ಹೇಗೆ , ಯಾವ ರೀತಿ, ಏನೆಲ್ಲಾ ತೊಂದರೆಗಳನ್ನು ನೀಡುತ್ತದೆ ಎಂದು ಹೇಳಿಕೊಂಡರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು