LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ಕೆ.ಶಿವರಾಮ್ ಅವರಿಗೆ ನುಡಿನಮನ ಕಾರ್ಯಕ್ರಮ

ರಾಮನಗರ: ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಬರೆದು ಯಶಸ್ಸು ಕಂಡಿದ ಮೊಟ್ಟ ಮೊದಲಿಗರಾಗಿ ನಮ್ಮ ಜಿಲ್ಲೆಗೆ ಕೀರ್ತಿ ತಂದು ಕೊಟ್ಟವರು ಕೆ.ಶಿವರಾಮು ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಸ್ಮರಿಸಿದರು.ನಗರದ ಡಾ.ಬಿ.ಅರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ಛಲವಾದಿ ಮಹಾಸಭಾ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟ ಹಾಗೂ ಅಭಿಮಾನಿಗಳ ಸಹಯೋಗ ದಲ್ಲಿ ನಡೆದ ಕೆ.ಶಿವರಾಮ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯ ಹೆಮ್ಮೆಯ ಮಗನಾಗಿದ್ದ ಶಿವರಾಮ್ ಅವರು ಪ್ರಾದೇಶಿಕ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದವರು.

ಅವರು ಸ್ನೇಹಜೀವಿಯಾಗಿ ನಾನು ಸೇರಿದಂತೆ ಹಲವರಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು.ಬಡ ಕುಟುಂಬದಲ್ಲಿ ಹುಟ್ಟಿ, ದಕ್ಷ ಅಧಿಕಾರಿಯಾಗಿ ಜನಪರ ಆಡಳಿತ ನಡೆಸಿ ಇತರ ಅಧಿಕಾರಿಗಳಿಗೆ ಆದರ್ಶ ವಾಗಿದ್ದರು. ಅವರು ಶೋಷಿತ ಸಮಾಜಕ್ಕೆ ನೀಡಿದ ಕೊಡುಗೆ ಗಳು ಅಪಾರವಾಗಿವೆ. ಅಲ್ಲದೆ ಶೋಷಿತರ ಧ್ವನಿಯಾಗಿ ಕೆಲಸ ಮಾಡುತ್ತಾ ಸಮುದಾಯದ ಪ್ರಗತಿಗಾಗಿ ಶ್ರಮಿಸಿದ್ದ ಮಹಾನ್ ಚೇತನ. ಈ ಸಭೆಯಲ್ಲಿ ಭಾಗವಹಿಸಿರುವ ಜನರನ್ನು ನೋಡಿದರೆ ಅವರ ಮೇಲಿನ ಅಭಿಮಾನ ಎಷ್ಟಿದೆ ಎಂಬುದ ನ್ನು ಕಾಣಬಹುದಾಗಿದೆ.

ಅವರು ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಕೊಟ್ಟ ಕೊಡುಗೆಗಳು ಸಮಾಜದಲ್ಲಿ ನಮ್ಮ ಜೊತೆ ಇವೆ ಎಂದು ಅವರ ವಿಚಾರ ಧಾರೆಗಳನ್ನು ಸ್ಮರಿಸಿದರು.
ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ ಕೆ.ಶಿವರಾಮು ಅವರ ಮೇಲಿನ ಪ್ರೀತಿಯಿಂದ ಭಕ್ತಿ, ಶ್ರದ್ದೆಯಿಂದ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ ಅವರನ್ನು ನೆನಪು ಮಾಡುವ ಕೆಲಸ ಮಾಡಿದ್ದೀರಿ, ಮಲಗಿರುವ ಜನರನ್ನು ಎದ್ದೇಳುವಂತೆ ಮಾಡಿದ್ದೇನೆ ಎಂಬ ಅಂಬೇಡ್ಕರ್ ಅವರ ಮಾತಿನಂತೆ ಅಶೃಷ್ಯರ ಗುಡಿಸಿಲಿನ ಮಕ್ಕಳ ಕೈನಲ್ಲಿ ಪೆನ್ನು ಹಿಡಿಸಿದಾಗ ಅವರ ನೆನಪು ಅಜರಾಮರವಾಗಲಿದೆ.

ಡಾ.ಅಂಬೇಡ್ಕರ್ ಅವರ ಕನಸ್ಸನ್ನು ಶಿವರಾಮ್ ಅಧ್ಯಯನ ಮಾಡಿದ್ದ ಮಹಾನ್ ಚೇತನ. ಸಮಾಜ ಕಲ್ಯಾಣ ಇಲಾಖೆಗೆ ಹೊಸ ದಿಕ್ಕನ್ನು ತೋರಿಸಿದ ಇಲಾಖೆಯ ಹಾಸ್ಟೆಲ್ ಗಳಿಗೆ ಅವರ ಹೆಸರನ್ನು ಇಡಬೇಕು. ಆ ಮೂಲಕ ಶಿವರಾಮ್ ಅವರಿಗೆ ಸರ್ಕಾರ ಗೌರವಿಸುವ ಕೆಲಸ ಮಾಡಬೇಕಿದೆ ಎಂದರು.

ಕೆ.ಶಿವರಾಮು ಪತ್ನಿ ವಾಣಿಶಿವರಾಮು ಮಾತನಾಡಿ ಕೆ.ಶಿವರಾಮು ಅವರುಸಮುದಾಯದ ಎಲ್ಲ ಜನರನ್ನು ನನ್ನ ರಕ್ತ ಸಂಭಂದಿಗಳಂತೆ ಕಾಣುತ್ತಿದ್ದರು. ನನ್ನ ಪತಿ ದೊಡ್ಡ ಅಧಿಕಾರಿಯಾಗಿ ಕೆಲಸ ಮಾಡಬೇಕೆಂಬ ಕನಸ್ಸನ್ನು ನನಸು ಮಾಡಿಕೊಂಡಿದ್ದರು. ಎಸಿಯಾಗಿ, ಜಿಲ್ಲಾಧಿಕಾರಿಯಾಗಿ ಸಮಾಜದ ಜನರಿಂದ ಹೆಚ್ಚು ಪ್ರೀತಿ ಸಂಪಾದನೆ ಮಾಡಿದ್ದರು.

ಜನರ ಸಮಸ್ಯೆಗಳ ನಿವಾರಣೆಗೆ ಹಗಲಿರುಳು ಶ್ರಮಿಸುತ್ತಿದ್ದರು. ಅವರು ನಮ್ಮನ್ನು ಅಗಲಿದ್ದಾರೆ. ತವರಿನಲ್ಲಿ ಅವರಿಗೆ ನುಡಿ ನಮನದ ಮೂಲಕ ಸ್ಮರಿಸುವ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ನುಡಿನಮನ ಕಾರ್ಯಕ್ರಮದಲ್ಲಿ ಭಾವುಕರಾದರು.ಸಾಮಾಜಿಕ ಹೋರಾಟಗಾರ, ನಟ ಚೇತನ್ ಮಾತನಾಡಿ ಯುವಕರು ಉನ್ನತ ವ್ಯಾಸಾಂಗ ಮಾಡಬೇಕು, ಅವರನ್ನು ಬೆಳೆಸಬೇಕು ಎಂಬುದು ಶಿವರಾಮ್ ಅವರ ವಿಶೇಷವಾದ ವ್ಯಕ್ತಿತ್ವವಾಗಿತ್ತು. ಚಲನಚಿತ್ರದ ನಟನೆ, ಕಲೆಯಲ್ಲಿಯೂ ಯಶಸ್ಸು ಕಂಡಿದ್ದರು, ಶೋಷಿತ ವರ್ಗಕ್ಕೆ ದೊಡ್ಡ ಶಕ್ರಿಯಾಗಿದ್ದ ಅವರನ್ನು ಕಳೆದುಕೊಂಡಿದ್ದೇವೆ ಎಂದು ಅವರನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ವೆಂಕಟಸ್ವಾಮಿ ಮಾತನಾಡಿ ಅವರ ಹೆಸರಿನಲ್ಲಿ ಬಡಾವಣೆ ನಿರ್ಮಾಣ ಮಾಡಬೇಕು. ಕೆ.ಶಿವರಾಮ್ ಅವರಿಗೆ ಸರ್ಕಾರ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದರು. ವೇದಿಕೆಯಲ್ಲಿ ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಹಿರಿಯ ಅಧಿಕಾರಿ ಸಿದ್ದರಾಜು,ರೂಪೇಶ್ ರಾಜಣ್ಣ, ಪಿ.ಮೂರ್ತಿ, ಶಂಕರ್ ರಾಮಲಿಂಗಯ್ಯ,ಮೈಕೋ ನಾಗರಾಜ್ ಮಾತನಾಡಿ ಗುಣಗಾನ ಮಾಡಿದರು.

ನುಡಿನಮನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಜಯಚಂದ್ರ, ಪುರಸಭಾ ಸದಸ್ಯ ರಾಮಚಂದ್ರಯ್ಯ, ದಲಿತಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶೇಖರ್, ಪದಾಧಿಕಾರಿಗಳಾದ ಬಾನಂದೂರುಶಿವಕುಮಾರ್, ದಿನೇಶ್, ಕ್ಯಾಸಾಪುರ ಶಿವಣ್ಣ, ಅಂಜನಾಪುರ ವಾಸು, ಕೊತ್ತೀಪುರ ಗೋವಿಂದರಾಜು, ಸಿದ್ದರಾಜು, ಆರ್.ರಮೇಶ್, ಹೊಂಬಯ್ಯನದೊಡ್ಡಿಪುನಿತ್, ಶ್ರೀಧರ್, ಕಿರಣ್ ಬಾಲು ಸೇರಿದಂತೆ ಕೆ.ಶಿವರಾಮ್ ಅವರ ಕುಟುಂಬಸ್ಥರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು