LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಭಾರತೀಯ ಅಡುಗೆ ಮನೆಯನ್ನು ಕ್ರಾಂತಿಕಾರಿಗೊಳಿಸಲು ಎಂಡ್ಯೂರಾ ಪ್ರೊ (Endura Pro)) ಪರಿಚಯಿಸಿದ ಟಿಟಿಕೆ ಪ್ರೆಸ್ಟೀಜ್

ಬೆಂಗಳೂರು: ಭಾರತದ ಮುಂಚೂಣಿ ಅಡುಗೆಮನೆ ಅಪ್ಲಯನ್ಸ್ ಸಂಸ್ಥೆಯಾದ ಟಿಟಿಕೆ ಪ್ರೆಸ್ಟೀಜ್, ತನ್ನ ಇತ್ತೀಚಿನ ಆವಿಷ್ಕಾರ ಪ್ರೆಸ್ಟೀಜ್ ಎಂಡ್ಯೂರಾ ಪ್ರೊ ಮಿಕ್ಸರ್ ಗ್ರೈಂಡರ್(Prestige Endura Pro Mixer Grinder)) ಪರಿಚಯಿಸಿದೆ. ಬಿಡುಗಡೆ ಕಾರ್ಯಕ್ರಮವು ಬೆಂಗಳೂರಿನ ಇಂದಿರಾನಗರದಲ್ಲಿರುವ ಪೈ ಇಂಟ್‍ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿ.,ನಲ್ಲಿ ಜನವರಿ 18,2024ರಂದು ನಡೆಯಿತು.

ಪ್ರೆಸ್ಟೀಜ್ ಎಂಡ್ಯೂರಾ ಪ್ರೊ 14 ಕಾರ್ಯಾಚರಣೆಗಳನ್ನು ಮಾಡುವ ಎಲ್ಲವೂ ಒಂದರಲ್ಲೇ ಒಳಗೊಂಡ ಮಿಕ್ಸರ್ ಗ್ರೈಂಡರ್ ಆಗಿದ್ದು, ಬಾಲ್ ಬೇರಿಂಗ್‍ಗಳಿಂದ ಸಜ್ಜುಗೊಂಡಿರುವ ಪರಿಶುದ್ಧವಾದ ತಾಮ್ರದಿಂದ ತಯಾರಿಸಲಾದ 1000 Wಮೋಟಾನ ಶಕ್ತಿಯನ್ನು ಹೊಂದಿದೆ. ಎಂಡ್ಯೂರಾ ಪ್ರೊ, ಸಮರ್ಥ ಕಾರ್ಯಕ್ಷಮತೆ(ದಕ್ಷತೆ), ಕನಿಷ್ಟ ಶಬ್ದ ಹಾಗೂ ದೀರ್ಘಕಾಲ ಮೋಟಾರ್ ಬಾಳಿಕೆಯನ್ನು ಖಾತರಿಪಡಿಸುತ್ತದೆ.

14 ಕಾರ್ಯಾಚರಣೆಗಳು: ವೆಟ್ ಗ್ರೈಂಡಿಂಗ್(ಹಿಟ್ಟು ರುಬ್ಬುವುದು), ಡ್ರೈ ಗ್ರೈಂಡಿಂಗ್(ಒಣಪುಡಿ ಮಾಡುವುದು), ಚಟ್ನಿ ತಯಾರಿಕೆ, ಜೂಸ್ ತಯಾರಿಸುವುದು, ಕತ್ತರಿಸುವುದು, ಹಿಟ್ಟು ನಾದುವುದು, ದಪ್ಪ ಸಿಪ್ಪೆ ತೆಗೆಯುವುದು, ತೆಳುಸಿಪ್ಪೆ ತೆಗೆಯುವುದು, ಸರಿಪಡಿಸಬಹುದಾದ ಸ್ಲೈಸಿಂಗ್, ಮಿನ್ಸಿಂಗ್, ಸಿಟ್ರಸ್ ಜೂಸಿಂಗ್, ಫಿಂಗರ್ ಚಿಪ್ಸ್ ಕತ್ತರಿಸುವಿಕೆ ಮತ್ತು ಮಿಶ್ರಣಮಾಡಿ ಹಾಗೂ ಇಡಿ-ಮುಂತಾದವುಗಳನ್ನು ಒಳಗೊಂಡಿದೆ.

ಈ ಉತ್ಪನ್ನದ ಬಿಡುಗಡೆಯನ್ನು ಪೈ ಇಂಟ್‍ನ್ಯಾಷನಲ್ ಲಿ., ನಡೆಸಿಕೊಟ್ಟಿತು ಮತ್ತು ಎಮ್‍ಡಿ ರಾಜ್‍ಕುಮಾರ್ ಪೈ; ಫೈನಾನ್ಸ್ ವಿಭಾಗದ ನಿರ್ದೇಶಕಿ ಶ್ರೀಮತಿ ಮೀನ ರಾಜ್‍ಕುಮಾರ್ ಪೈ; ಹಾಗೂ ಪೈ ಇಂಟ್‍ನ್ಯಾಷನಲ್ ಲಿ.,ನ ಲಾಜಿಸ್ಟಿಕ್ಸ್ ಮುಖ್ಯಸ್ಥ ರಮೇಶ್ ಉದ್ಘಾಟನೆ ನೆರವೇರಿಸಿದರು. ಹಿರಿಯ ಜಿಎಮ್ ಅನಿಲ್ ಕುಮಾರ್ ಜಿಎಸ್; ಐಒ, ZSಒ ಶ್ರೀ ಪ್ರಾಣೇಶ್; ಮತ್ತು ಟಿಟಿಕೆ ಪ್ರೆಸ್ಟೀಜ್‍ನ ಮಾರ್ಕೆಟಿಂಗ್ ವಿಭಾಗದ ಅಭಿಷೇಕ್ ಮತ್ತು ಮತ್ತು ದೀಪಕ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಟಿಟಿಕೆ ಪ್ರೆಸ್ಟೀಜ್ ಲಿ.,ನ ಹಿರಿಯ ಜಿಎಮ್ ಶ್ರೀ ಅನಿಲ್ ಕುಮಾರ್ ಜಿಎಸ್, "ಪೈ ಎಲೆಕ್ಟ್ರಾನಿಕ್ಸ್‍ನ ಸಹಭಾಗಿತ್ವದಲ್ಲಿ ಎಂಡ್ಯೂರಾ ಪ್ರೊ ಮಿಕ್ಸರ್ ಪರಿಚಯಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ. ತನ್ನ ಬಾಳಿಕೆ ಹಾಗೂ ಆಧುನಿಕ ಗುಣವಿಶೇಷತೆಗಳಿಂದಾಗಿ ಈ ಉತ್ಪನ್ನ ಶ್ರೇಣಿಯು ತಾರೆಯಾಗಿದೆ. ಶಬ್ದವನ್ನು ಕಡಿಮೆ ಮಾಡುವುದಕ್ಕಾಗಿಯೇ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿರುವ ಮೋಟಾರ್ ಈ ಉತ್ಪನ್ನದ ವಿಶೇಷತೆಯಾಗಿದೆ. ಈ ಉತ್ಪನ್ನದ ಮೋಟಾರ್ ಗುಣಮಟ್ಟದೊಡನೆ ಬೇರೆ ಯಾವುದೇ ತರ ಅಡುಗೆಮನೆ ಅಪ್ಲಯನ್ಸ್ ಕೂಡ ಸ್ಪರ್ಧಿಸಲಾಗದು ಎಂದು ಹೇಳಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು