LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ರೈತರ ಮಕ್ಕಳಿಗೆ ಹೆಣ್ಣು ಕೊಡಿ ಚಿತ್ರಕ್ಕೆ ಸಿಕ್ಕಿತು ಯುಎ ಪ್ರಮಾಣ ಪತ್ರ

ರೈತರ ಮಕ್ಕಳಿಗೆ ಹೆಣ್ಣು ಸಿಗೋಲ್ಲ ಎಂಬುದು ಅನಾದಿ ಕಾಲದಿಂದಲೂ ಹೇಳುತ್ತಾ ಬಂದಿದ್ದು, ಈಗಲೂ ವಿಷಯ ಚಾಲ್ತಿಯಲ್ಲಿದೆ. ಇಂತಹುದೇ ಅಂಶಗಳನ್ನು ಬಳಸಿಕೊಂಡು 'ರೈತರ ಮಕ್ಕಳಿಗೆ ಹೆಣ್ಣು ಕೊಡಿ' ಎಂಬ ಸಿನಿಮಾವೊಂದು ಸದ್ದಿಲ್ಲದೆ ಮುಗಿದು ಬಿಡುಗಡೆಗೆ ಸಿದ್ದವಾಗಿದೆ.ಕೆಂಪುರಾಮ್ ಹೆಡಿಯಾಲ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡುವ ಜತೆಗೆ ಮೆಲ್ಲುಲಿಗಾನ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.ಅನ್ನದಾತನ ಮಕ್ಕಳಿಗೆ ವಧು ಸಿಗೋಲ್ಲ ಎಂಬುದು ರಾಜ್ಯವ್ಯಾಪ್ತಿ ಮಾರ್ದನಿಸಿ ಅವರ ಬದುಕಿನಲ್ಲಿ ತಲ್ಲಣವನ್ನು ಉಂಟು ಮಾಡುತ್ತಿದೆ. ಚಿತ್ರವು ವಿಭಿನ್ನ ಹಾಗೂ ವಿಶಿಷ್ಟವಾದ ಅನುಭವಗಳನ್ನು ತೋರಿಸಿಕೊಡುತ್ತದೆ. ಅವರ ಬದುಕಿನ ಸೂಕ್ಷತೆಗಳು, ಅಲ್ಲಿನ ಗಂಭೀರ ಅಂಶಗಳು ಗಮನ ಸೆಳೆದು, ಬುದ್ದಿ, ಭಾವ ಚಿತ್ತ ಜಾಗೃತಗೊಳ್ಳುವಂತೆ ಮಾಡುತ್ತಾ, ನೋಡುಗರ ಮನಸ್ಸನ್ನು ಒಳಹೊಕ್ಕಿಸಿ, ಸನ್ನಿವೇಶಗಳಲ್ಲಿ ಕಾಣುವ ಪಾತ್ರಗಳು ನಮ್ಮ ಜೀವನದ ಪ್ರತಿಬಿಂಬವಾಗುವಂತೆ ಮಾಡುತ್ತದೆ. ಗೆಲ್ಲುತ್ತಾ ಹೋಗುವವರು ಇತಿಹಾಸ ಸೃಷ್ಟಿಸುತ್ತಾರೆ. ಆದರೆ ಸೋತು ಗೆಲ್ಲುವವರು ಇತಿಹಾಸವನ್ನು ಬದಲಾಯಿಸುತ್ತಾರೆ ಎನ್ನುವಂತ ತೂಕದ ಸಂದೇಶವನ್ನು ಹೇಳಲಾಗಿದೆ.
ಬಹುತೇಕ ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ತಾರಾಗಣದಲ್ಲಿ ಜಗದೀಶ್ ಮೂಕ, ದಿವ್ಯಶ್ರೀ, ಜೈ ಅಮೋಘದಾಸ್, ಅಗಸ್ತ್ಯ ಪ್ರೇಮ್, ಸಂತೋಷ್ ಜೋಗುಳ್, ಅಶ್ವಿನಿ ಮುಂತಾದವರು ನಟಿಸಿದ್ದಾರೆ.
ಸಂಗೀತ-ಛಾಯಾಗ್ರಹಣ-ಸಂಕಲನ ರೋಹನ್.ಎಸ್.ದೇಸಾಯಿ, ಸಾಹಸ ಸಂತೋಷ್ ರಾಥೋಡ್, ನೃತ್ಯ ಅಕುಲ್ ಮಾಸ್ಪರ್-ಅಜಯ್ ಜೈಕೃಷ್ಣ-ಸಾಕ್ಷಿ ಅವರದಾಗಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು