LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಗುವಾಹಟಿಯಲ್ಲಿ ವೈಭವ್ ಸೂರ್ಯವಂಶಿ ಆರ್ಭಟ

ಚುಟುಕು ಕ್ರಿಕೆಟ್‌ನ ಬಾಲಕ ವೈಭವ್ ಸೂರ್ಯವಂಶಿಯ ಆರ್ಭಟ ಐಪಿಎಲ್ 2026ರಲ್ಲೂ ಮುಂದುವರಿದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಅವರು ಬಾರಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತನ್ನ ಸೀಸನ್ ನ ಮೊದಲ ಪಂದ್ಯವನ್ನು 8 ವಿಕೆಟ್ ಗಳಿಂದ ಗೆದ್ದು ಶುಭಾರಂಭ ಮಾಡಿದೆ. ಜೊತೆಗೆ ಮಾರ್ಚ್ 27ರಂದು 15ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ವೈಭವ್ ಅರ್ಧಶತಕವನ್ನು ಹೊಡೆಯುವ ಮೂಲಕ ಸ್ಮರಣೀಯವಾಗಿಸಿಕೊಂಡರು.
ಗುವಾಹಟಿಯ ಬಾರ್ಸಾಪರ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈಸೂಪರ್ ಕಿಂಗ್ಸ್ ತಂಡ ನಗದಿತ 20 ಓವರ್ ಗಳಲ್ಲಿ 127 ರನ್ ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ರಾಜಸ್ಥಾನ ರಾಯಲ್ಸ್ ತಂಡ ಇನ್ನೂ 47 ಎಸೆತಗಳು ಬಾಕಿ ಉಳಿದಿರುವಂತೆ ಗುರಿ ತಲುಪಿತು.
ಚೆನ್ನೆöÊ ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್
ಮಾಡುವ ವೇಳೆ ಪಿಚ್ ಬೌಲರ್ ಗಳಿಗೆ ಸಹಕಾರಿ
ಯಂತೆ ಕಂಡುಬAದಿತ್ತು. ಋತುರಾಜ್ ಗಾಯ
ಕ್ವಾಡ್ ತಂಡ ಪ್ರತೀ ರನ್ ಗೂ ಪರದಾಡುತ್ತಿದ್ದಾಗ ರಾಜಸ್ಥಾನ ತಂಡ ಸಹ ಇದೇ ಪರಿಸ್ಥಿತಿ ಎದುರಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದ ವೈಭವ್ ಸೂರ್ಯವಂಶಿ ಚೆನ್ನೈ ಯಾವುದೇ ಅವಕಾಶವನ್ನೂ ನೀಡಲಿಲ್ಲ. ಕಳೆದ ಐಪಿಎಲ್ ಸೀಸನ್ ನಲ್ಲಿ ಶರವೇಗದ ಶತಕ ಬಾರಿಸಿದ್ದ ಬಾಲಕ ಈ ಬಾರಿ ಮೊದಲ ಪಂದ್ಯದಲ್ಲೇ ಮಿಂಚಿದರು.
ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ ಪವರ್ ಪ್ಲೇನ 6 ಓವರ್ ಗಳಲ್ಲಿ 74 ರನ್ ಗಳನ್ನು ಕಲೆ ಹಾಕಿದರು. ಅಷ್ಟರಲ್ಲಿಯೇ ವೈಭವ್ ಅವರು 15 ಎಸೆತಗಳಿಂದ 52 ರನ್ ಗಳ ಗಡಿ ತಲುಪಿದರು. ಅದರಲ್ಲಿ ನಾಲ್ಕು ಬೌಂಡರಿ ಮತ್ತು 5 ಸಿಕ್ಸರ್ ಗಳಿದ್ದವು.
ಪವರ್ ಪ್ಲೇ ಮುಗಿದ ಕೂಡಲೇ ಅವರ ವಿಕೆಟ್ ಪತನಗೊಂಡರೂ ಯಾವುದೇ ಪರಿಣಾಮ ಬೀರಲಿಲ್ಲ. ಅನುಭವಿ ಯಶಸ್ವಿ ಜೈಸ್ವಾಲ್ (36 ಎಸೆತದಲ್ಲಿ 38 ರನ್) ಅವರು ಧ್ರುವ್ ಜ್ಯುರೆಲ್(9 ಎಸೆತದಲ್ಲಿ 18 ರನ್) ಮತ್ತು ರಿಯಾನ್ ಪರಾಗ್(11 ಎಸೆತದಲ್ಲಿ ನಾಟೌಟ್ 14 ರನ್) ಅವರೊಂದಿಗೆ ಸಣ್ಣ ಸಣ್ಣ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ತಲುಪಿಸಿದರು.
ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನದ ವೇಗಿಗಳಾದ ನ್ಯಾಂಡ್ರೆ ಬರ್ಗರ್ ಮತ್ತು ಜೋಫ್ರಾ ಆರ್ಚರ್ ಅವರ ಮೊನಚಾದ ದಾಳಿಗೆ ಒದ್ದಾಡಿದರು. ಬರ್ಗರ್ ಅವರು 2ನೇ ಓವರ್ ನ ಕೊನೇ ಎಸೆತದಲ್ಲಿ ಸಂಜು ಸ್ಯಾಮ್ಸನ್(7 ಎಸೆತದಲ್ಲಿ 6 ರನ್) ಅವರನ್ನು ಔಟ್ ಮಾಡುವ ಮೂಲಕ ಚೆನ್ನೈಗೆ ಮೊದಲ ಆಘಾತ ನೀಡಿದರು. ಆ ಬಳಿಕ 3ನೇ ಓವರ್ ನ ಕೊನೇ ಎಸೆತದಲ್ಲಿ ಜೋಫ್ರಾ ಆರ್ಚರ್ ಅವರು ನಾಯಕ ರುತುರಾಜ್ ಗಾಯಕ್ನಾಡ್ (11 ಎಸೆತದಲ್ಲಿ 6) ಅವರ ವಿಕೆಟ್ ಅನ್ನು ಎಗರಿಸಿದರು. 4ನೇ ಓವರ್ ನ ಮೊದಲ ಎಸೆತದಲ್ಲಿ ಬರ್ಗರ್ ಅವರು ಆಯುಷ್ ಮ್ಹಾತ್ರೆ ಅವರನ್ನು ಖಾತೆ ತೆರೆಯುವ ಮೊದಲೇ ಔಟ್ ಮಾಡಿದರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರನ್ ರೇಟ್ ಸಂಪೂರ್ಣ ಬಿತ್ತು. ಜೊತೆಗೆ ವಿಕೆಟ್ ಗಳೂ ಪಟಪಟನೇ ಬೀಳುತ್ತಾ ಹೋದವು.
ಚೆನ್ನೈ ತಂಡವನ್ನು ಆರಂಭದಲ್ಲೇ ಕಟ್ಟಿಹಾಕಿದ ಬರ್ಗರ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು