LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

"ಕ್ಯಾಪ್ಟನ್ ಕೂಲ್ ಧೋನಿ ಮನೆಗೆ ವಿರಾಟ್ ಕೊಹ್ಲಿ ಆಗಮನ"

ಭಾರತೀಯ ಕ್ರಿಕೆಟ್ ಲೋಕದಲ್ಲಿ ಇತ್ತೀಚೆಗೆ ನಡೆದ ಅತ್ಯಂತ ಹೃದಯಸ್ಪರ್ಶಿ ಘಟನೆಗಳಲ್ಲಿ ಒಂದು. ಮಹೇಂದ್ರ ಸಿಂಗ್‌ ಧೋನಿ ಅವರು ತಮ್ಮ ಮಾಜಿ  ಸಹ ಆಟಗಾರ ವಿರಾಟ್ ಕೊಹ್ಲಿ ಅವರನ್ನು ತಮ್ಮ ಕಾರಿನಲ್ಲಿ ಕರೆದೊಯ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನವೆಂಬರ್ ೩೦ರಂದು ನಡೆಯಲಿರುವ ಪ್ರಥಮ ಏಕದಿನ ಪಂದ್ಯವನ್ನು ಆಡುವ ಸಲುವಾಗಿ ರಾಂಚಿಗೆ ಆಗಮಿಸಿರುವ ವಿರಾಟ್ ಕೊಹ್ಲಿ ಅವರು ಧೋನಿ ಅವರ ಮನೆಗೆ ಭೋಜನಕೂಟಕ್ಕಾಗಿ ಆಗಮಿಸಿದ್ದರು. ಭೋಜನದ ನಂತರ ಧೋನಿ ಅವರು ಕೊಹ್ಲಿ ಅವರನ್ನು ಭಾರತ ತಂಡದ ಹೋಟೆಲ್‌ಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು.

ಗುರುವಾರ ರಾತ್ರಿ ನಡೆದ ಈ ಘಟನೆಯ ವಿಡಿಯೋವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದು ಇದೀಗ ವೈರಲ್ ಆಗಿದೆ. ಧೋನಿ ಅವರು ತಮ್ಮ SUV
ಕಾರನ್ನು ಚಲಾಯಿಸುತ್ತಿದ್ದರೆ, ಕೊಹ್ಲಿ ಅವರು ಪಕ್ಕದ ಸೀಟಿನಲ್ಲಿ ಕುಳಿತಿದ್ದರು. ಇದು ಬಹಳ ಅಪರೂಪದ, ಆದರೆ ಬಹಳಷ್ಟು ನೆನಪುಗಳನ್ನುಮೆಲುಕು ಹಾಕುವ ದೃಶ್ಯವಾಗಿತ್ತು.

ಏನಿದು ಘಟನೆ?
ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್  ರಿಷಭ್ ಪಂತ್ ಅವರೊಂದಿಗೆ ನವೆಂಬರ್ ೨೭ರಂದು ರಾಂಚಿಯ ತಮ್ಮ ಫಾರ್ಮ್ಹೌಸ್‌ನಲ್ಲಿ ಭೋಜನಕೂಟ ಏರ್ಪಡಿಸಿದ್ದರು. ಸಂಜೆ ವೇಳೆ ವಿರಾಟ್ ಕೊಹ್ಲಿ ಅವರು ಧೋನಿ ಅವರ ನಿವಾಸವನ್ನು ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಗುರುತಿಸಿದರು. ಇದರ
ವಿಡಿಯೋ ಅಂತರ್ಜಾಲದಲ್ಲಿ ಹರಿದಾಡಿ ದೊಡ್ಡ ಸುದ್ದಿಯಾಯಿತು. ಕೆಲ ಗಂಟೆಗಳ ನಂತರ ಧೋನಿ ಅವರು ಕೊಹ್ಲಿಯನ್ನು ಹೋಟೆಲ್‌ಗೆ ಕರೆದುಕೊಂಡು ಹೋದರು. ಯಾವುದೇ ಭದ್ರತಾ
ಸಿಬ್ಬಂದಿ ಇಲ್ಲದೆ, ಯಾವುದೇ ಆಡಂಬರವಿಲ್ಲದೆ, ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಭಾರತೀಯ ಕ್ರಿಕೆಟ್ ಅನ್ನು ರೂಪಿಸಿದ ಅವರ ಸುದೀರ್ಘ ಪಾಲುದಾರಿಕೆಯ ನೆನಪುಗಳನ್ನು
ಈ ದೃಶ್ಯ ಪುನರುಜ್ಜೀವನಗೊಳಿಸಿತು.

ಈ ವಿಡಿಯೋವನ್ನು ಹಂಚಿಕೊಂಡಿರುವ ಸ್ಟಾರ್  ಸ್ಪೋರ್ಟ್ಸ್‌, ಇದಕ್ಕೆ"ವರ್ಷದ ಪುನರ್ಮಿಲನ" (Re union of the year ) ಎಂದು ಶೀರ್ಷಿಕೆ ನೀಡಿದೆ. ರಾಂಚಿಯಲ್ಲಿ ವಿರಾಟ್ ಗೆ ಮೊದಲ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲು ವಿರಾಟ್ ಕೊಹ್ಲಿ ಅವರು ಲಂಡನ್ ನ ತಮ್ಮ ನಿವಾಸದಿಂದ ಭಾರತಕ್ಕೆ ಮರಳಿದ್ದಾರೆ. ನವೆಂಬರ್ ೩೦ರಂದು ರಾಂಚಿಯಲ್ಲಿ ಪ್ರಥಮ ಏಕದಿನ ಪಂದ್ಯ ನಡೆಯಲಿದೆ. ಬಳಿಕ ಡಿಸೆಂಬರ್ ೩ರಂದು ರಾಯಪುರದಲ್ಲಿ ೨ನೇ ಏಕದಿನ, ೬ರಂದು ವಿಶಾಖಪಟ್ಟಣದಲ್ಲಿ ೩ನೇ
ಏಕದಿನ ಪಂದ್ಯಗಳು ನಡೆಯಲಿವೆ. ಇದು ವಿರಾಟ್ ಕೊಹ್ಲಿ ಅವರು ರಾಂಚಿಯಲ್ಲಿ ಆಡುತ್ತಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಫೆಬ್ರವರಿ ೨೦೨೪ ರಲ್ಲಿ ಇಂಗ್ಲೆಂಡ್ ವಿರುದ್ಧ ಇಲ್ಲಿ ಟೆಸ್ಟ್ ಪಂದ್ಯ ನಡೆದಾಗ ಅವರು ತಮ್ಮ ಪುತ್ರ ಅಕಾಯ್ ಜನನದ ಕಾರಣದಿಂದಾಗಿ ಗೈರು ಹಾಜರಾಗಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು