LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಕಾಂಗರೂಗಳ ಗೆಲುವಿನಾಸೆಗೆ ವಾಶಿಂಗ್ಟನ್ ಸುಂದರ್ ತಣ್ಣೀರು!

ಅರ್ಶದೀಪ್ ಸಿಂಗ್ ಅವರ ಮಾರಕ ಬೌಲಿಂಗ್ ಮತ್ತು ವಾಶಿಂಗ್ಟನ್ ಸುಂದರ್  ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಆಸ್ಟೆçÃಲಿಯಾದ ವಿರುದ್ಧ ೫ ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ೫ ಪಂದ್ಯಗಳ ಟಿ೨೦ ಸರಣಿಯಲ್ಲಿ ೧-೧ ಸಮಬಲ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮೆಲ್ಬರ್ನ್ ನಲ್ಲಿ ನಡೆದ ೨ನೇ ಪಂದ್ಯದಲ್ಲಿ
ಆದ ಸೋಲಿಗೆ ಭಾರತ ತಂಡ ತಿರುಗೇಟು ನೀಡಿದೆ. ಹೋಬರ್ಟ್ ಕ್ರೀಡಾಂಗಣದಲ್ಲಿ ನಡೆದ ಕಳೆದ ೫ ಪಂದ್ಯಗಳಲ್ಲಿ ಆಸ್ಟೆçÃಲಿಯಾ ಗೆಲುವು ಸಾಧಿಸಿತ್ತು. ಇದೀಗ ಭಾರತ ಇಲ್ಲಿ
ಸೋಲಿನ ರುಚಿ ತೋರಿಸಿದೆ.

ಹೋಬರ್ಟ್ ಬೆಲ್ಲಿರೈವ್  ಓವಲ್ ನಲ್ಲಿ ಬಾನುವಾರ ನಡೆದ ೩ನೇ ಟಿ೨೦ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್  ಮಾಡಿದ ಆಸ್ಟೆçÃಲಿಯಾ ತಂಡ ನಿಗದಿತ ೨೦ ಓವರ್ ಗಳಲ್ಲಿ ೧೮೬ ರನ್ ಪೇರಿಸಿತು. ಈ ಗುರಿಯನ್ನು ಭಾರತ ತಂಡ ಇನ್ನೂ ೯ ಎಸೆತಗಳು ಬಾಕಿ ಉಳಿದಿರುವಂತೆ ೫ ವಿಕೆಟ್ ನಷ್ಟಕ್ಕೆ ತಲುಪಿತು. ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಅವರು ಸ್ಫೋಟಕ ಆರಂಭ ನೀಡಿದರು. ಕೇವಲ ೧೬ ಎಸತೆಗಳಲ್ಲಿ ೨ ಬೌಂಡರಿ ಮತ್ತು ೨ ಸಿಕ್ಸರ್ ಗಳಿದ್ದ ೨೫ ರನ್ ಗಳಿಸಿದ್ದ ಅವರು ಆಸ್ಟೆçÃಲಿಯಾ ಪಾಳಯವನ್ನು ಅಕ್ಷರಶಃ ನಡುಗಿಸಿದ್ದರು. ಆದರೆ
ತಂಡದ ಮೊತ್ತ ೪ನೇ ಓವರ್ ನಲ್ಲಿ ೩೩ ಆಗಿದ್ದಾಗ ನೇಥನ್ ಎಲ್ಲಿಸ್ ಬೌಲಿಂಗ್ ನಲ್ಲಿ ಮಿಸ್ ಹಿಟ್ ಆಗಿ ಕ್ಯಾಚ್ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು.

ಆ ಬಳಿಕ ಶುಭಮನ್ ಗಿಲ್ ಅವರನ್ನು ಸೇರಿಕೊಂಡ ಸೂರ್ಯಕುಮಾರ್ ಯಾದವ್ ಅವರು ಸಹ ಎರಡು ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿ ಪವರ್ ಪ್ಲೇನಲ್ಲಿ ಸ್ಕೋರ್ ಬೋರ್ಡ್ ಅನ್ನು ಚಾಲನೆಯಲ್ಲಿರಿಸಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆಸ್ಟೆçÃಲಿಯಾ ತಂಡ ನಿಗದಿತ ೨೦ ಓವರ್ ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೮೬ ರನ್ ಕಲೆ ಹಾಕಿತು. ಆತಿಥೇಯ ತಂಡದ ಪರ ಟಿಂ ಡೇವಿಡ್( ೩೮ ಎಸೆತಗಳಲ್ಲಿ ೭೪) ಮತ್ತು ಸ್ಟಯೋನಿಸ್ ಅವರು ಸ್ಱೋಟಕ ಅರ್ಧಶತಕಗಳನ್ನು ಬಾರಿಸಿ ತಂಡಕ್ಕೆ ಆಸರೆಯಾದರು. ಭಾರತದ
ಅರ್ಶದೀಪ್ ಸಿಂಗ್ ಅವರು ಕಾಂಗರೂ ಪಾಳಯದ ೩ ವಿಕೆಟ್ ಗಳನ್ನು ಕಿತ್ತು ಯಶಸ್ವಿ ಬೌಲರ್ ಎನ್ನಿಸಿಕೊಂಡರು. ಅವರಿಗೆ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು