LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`X&Y ಚಿತ್ರದ `ಆಂಬು ಆಟೋ' ಎಂಬ ಆಪ್ತಮಿತ್ರ

ಇನ್ನೇನು ಬಿಡುಗಡೆಯ ಅoಚಿಗೆ ಬಂದಿರುವ ಕನ್ನಡದ "ಘಿ&ಙ" ಚಿತ್ರದಲ್ಲಿ ಆಟೋರಿಕ್ಷಾ "ಆಂಬು ಆಟೋ " ಆಗಿ ಬಡ್ತಿ ಪಡೆದು ಎಲ್ಲರ ಗಮನ ಸೆಳೆದಿದೆ. ಆಂಬುಲೆನ್ಸ್ ನಲ್ಲಿರುವಂತೆ ಎಲ್ಲ ಸೌಲಭ್ಯಗಳನ್ನು ಈ ಆಟೋದಲ್ಲಿ ಅಳವಡಿಸಿ ಚಿತ್ರದಲ್ಲಿ ಅದನ್ನೊಂದು ಕಲಾವಿದನೆಂಬಂತೆ ಕಲಾತ್ಮಕವಾಗಿ ಬಳಸಲಾಗಿದೆ.

ಈ ವಿಷಯ ತಿಳಿದ ಆಟೋ ಚಾಲಕರು ಗುಂಪು-ಗುಂಪಾಗಿ, ಚಿತ್ರ ನಿರ್ದೇಶಕ ಸತ್ಯಪ್ರಕಾಶ್ ಅವರನ್ನು ಖುದ್ದು ಭೇಟಿ ಮಾಡಿ, `ಸರ್ ಇಲ್ಲಿತನಕ 'ಆಟೋರಿಕ್ಷಾ' ನಮ್ಮ 'ಮಿತ್ರ'ನಾಗಿತ್ತು. ಈಗದನ್ನು `ಆಂಬು ಆಟೋ' ಆಗಿ ಪರಿವರ್ತಿಸಿ ಎಲ್ಲರ `ಆಪ್ತಮಿತ್ರ'ನಾಗಿರುವಂತೆ ಮಾಡಿದ್ದೀರಿ ಎಂದು ಆಂಬು ಆಟೋ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅದರಲ್ಲಿ ಕೆಲವರು ತಾವೂ ತಮ್ಮಆಟೋಗಳನ್ನು `ಆಂಬು ಆಟೋ' ಆಗಿ ರೆಡಿ ಮಾಡಿ ಸಾರ್ವಜನಿಕ ಸಹಾಯಕ್ಕಾಗಿ ಬಳಸುವ ಮನಸ್ಸು ಮಾಡಿದ್ದೇವೆಂದು ಸಂತಸ ಹಂಚಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ಇದೇ ನವೆಂಬರನಲ್ಲಿ ಬೆಂಗಳೂರಿನ ಜಯನಗರದ ಬೆಂಗಳೂರು ಸಾರಥಿ ಸೇನೆ ಆಟೋ ಚಾಲಕರ ಸಂಘ ಸಂಘಟಿಸಿದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಸಮಾಜಮುಖಿ ಸಮಾವೇಶದಲ್ಲಿ ಈ "ಆಂಬು ಆಟೋ" ಪ್ರದರ್ಶನಕ್ಕಿಟ್ಟು ಅದರ ಕುರಿತು ವಿಸ್ತೃತ ವಿವರಣೆ ಪಡೆದು ಹರುಷ ವ್ಯಕ್ತಪಡಿಸಿದ್ದಾರೆ. ಹಾಗೇ ಆಂಬು ಆಟೋದಲ್ಲಿ ಇಅಉ ತಪಾಸಣೆ ಮಾಡುವ ಮೂಲಕ ಚಾಲಕರೆಲ್ಲರಿಗೂ ನೆರವಾಯಿತು.

`X&Y ನಿರ್ದೇಶಕರ ನಾಲ್ಕನೇ ಚಿತ್ರ. ಮೊದಲ ಮೂರು ಚಿತ್ರಗಳು "ರಾಮಾ ರಾಮಾ ರೇ ", "ಒಂದಲ್ಲಾ ಎರಡಲ್ಲಾ" ಮತ್ತು "ಮ್ಯಾನ್ ಆಫ್ ದಿ ಮ್ಯಾಚ್ " ಒಂದಕ್ಕಿಂತ ಒಂದು ಭಿನ್ನ ಕಥಾ ಮಾಲಿಕೆಯ ಚಿತ್ರಗಳಾಗಿವೆ. "ರಾಮ ರಾಮಾ ರೇ" ಉತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿ ಪಡೆದರೆ, ಒಂದಲ್ಲಾ ಎರಡಲ್ಲಾ ಚಿತ್ರವು ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಚಿತ್ರದಿಂದ ಚಿತ್ರಕ್ಕೆ ಹೊಸತನ್ನು ನೀಡುತ್ತ ಹೊರಳಿ ನೋಡುವಂತೆ ಮಾಡುವ ಕಲಾ ಕೌಶಲ್ಯ ನಿರ್ದೇಶಕ ಡಿ. ಸತ್ಯ ಪ್ರಕಾಶ್ ಅವರಿಗೆ ಕರಗತವಾದಂತಿದೆ. ಅದು ಈಗ "ಘಿ&ಙ" ಚಿತ್ರದಲ್ಲು ಮುಂದುವರೆಯಲಿ ಎಂಬ ಹಾರೈಕೆ ನಮ್ಮದು. "`X&Y" ಸಿನಿಮಾ ಚಿತ್ರಮಂದಿರಗಳಲ್ಲಿ ಮುಂಬರುವ ಜನವರಿ ಅಥವಾ ಫೆಬ್ರವರಿಯಲ್ಲಿ ತೆರೆಕಾಣಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು