LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ರಾಮಾಯಣ' ಚಿತ್ರದಲ್ಲಿ ಯಶ್ ರಾವಣ

`
ಬೃಹತ್ ದೃಶ್ಯಕಾವ್ಯ `ರಾಮಾಯಣ’ ಸಿನಿಮಾ. ಇದೀಗ ಇದೇ ಚಿತ್ರತಂಡ  ಯಶ್ ಅವರ ‘ರಾವಣ’ ಪಾತ್ರದ ಮೊದಲ ಅಧಿಕೃತ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್‌ನಲ್ಲಿ ಯಶ್ ಅತ್ಯಂತ ಗಂಭೀರ ಹಾಗೂ ಶಕ್ತಿಯುತ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.ಯಶ್ ಅವರ ರಾವಣನ ಪಾತ್ರವು ಅಪಾರ ಕುತೂಹಲ ಮೂಡಿಸಿತ್ತು. ತಮ್ಮ ಮೊದಲ ನೋಟದಲ್ಲೇ ತೀವ್ರತೆ ಹಾಗೂ ಪ್ರಭಾವಶಾಲಿ ವ್ಯಕ್ತಿತ್ವದಿಂದ ಪ್ರೇಕ್ಷಕರ ಗಮನ ಸೆಳೆದಿದ್ದ ಯಶ್, ಇದೀಗ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ರಾಜ ಗಾಂಭೀರ್ಯದೊAದಿಗೆ ವಿಜೃಂಭಿಸಿದ್ದಾರೆ. ಮಹಾಕಾವ್ಯ ರಾಮಾಯಣದ ಭವ್ಯತೆ, ಭಾವನೆಗಳು ಹಾಗೂ ಕಾಲಾತೀತ ಪಾತ್ರಗಳನ್ನು ಬೆಳ್ಳಿತೆರೆಯ ಮೇಲೆ ವಿಶಾಲ ದೃಶ್ಯಕಾವ್ಯವಾಗಿ ತರಲು ನಿರ್ದೇಶಕ ನಿತೀಶ್ ತಿವಾರಿ ಶ್ರಮಿಸುತ್ತಿದ್ದಾರೆ. ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ÷್ಮಣನಾಗಿ ರವಿ ದುಬೆ ಅಭಿನಯಿಸುತ್ತಿದ್ದಾರೆ. ಈ ಚಿತ್ರವು ಭಾರತದಲ್ಲಿ ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ದೃಶ್ಯಕಾವ್ಯವು  Iಒಂಘಿ ರೂಪದಲ್ಲಿ ಬಿಡುಗಡೆಯಾಗಲಿದ್ದು, `ಭಾಗ 1’ ಮುಂಬರುವ 2026ರ ದೀಪಾವಳಿಗೆ ಹಾಗೂ ‘ಭಾಗ 2’ 2027ರ ದೀಪಾವಳಿಗೆ ಜಾಗತಿಕವಾಗಿ ತೆರೆಕಾಣಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೋವಿಂದರಾಜನಗರ ಪ್ರಥಮ ಮಹಿಳಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಪತ್ರಕರ್ತೆ ಪದ್ಮ ನಾಗರಾಜು ಕನ್ನಡ ಜಾನಪದ ಪರಿಷತ್ತಿನಿಂದ ಅಧಿಕೃತ ಆಹ್ವಾನಮತ್ತೆ 2 ಅರ್ಜಿ ಸಲ್ಲಿಸಿದ  ಆರೋಪಿ, ನಟ ದರ್ಶನ್ದೆಹಲಿಯಲ್ಲಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಧರಣಿಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸೌಧದ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರಾಜಕೀಯ ಕೆಸರೆರಚಾಟರಾಜ್‌ಘಾಟ್‌ನಲ್ಲಿ ಗಾಂಧಿ ಸಮಾಧಿಗೆ ಪ್ರಧಾನಿ ಗೌರವಬಡ ಮಕ್ಕಳ ಶಿಕ್ಷಣಕ್ಕಾಗಿ ರೂ.30 ಕೋಟಿ ಮೌಲ್ಯದ 10 ಎಕರೆ ಭೂಮಿ ದಾನಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿನಗು-ಬದುಕಿನ ಮೌನ ಭಾಷೆ50 ಲಕ್ಷ ಮತದಾರರನ್ನು ಕೈಬಿಡುವ ಷಡ್ಯಂತ್ರದ ಆರೋಪ ಮಾಡಿರುವ ಸಿಎಂ ಡಿಕೆಶಿ ಅದನ್ನು ಸಾಬೀತು ಪಡಿಸಲಿ, ಇಲ್ಲವೇ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ ಆಗ್ರಹ