ಪ್ರಭಾಸ್ ‘ಸಲಾರ್’ ಫೀವರ್ ಜೋರಾಗಿದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಪ್ರಶಾಂತ್ ನೀಲ್ ಖಾನ್ಸರ್ ಪ್ರಪಂಚ ನೋಡಲು ಇನ್ನೊಂದು ದಿನ ಬಾಕಿಯಿದೆ. ಆಂಧ್ರ, ತೆಲಂಗಾಣದಲ್ಲೂ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ದೇಶ ವಿದೇಶದಲ್ಲೂ ‘ಸಲಾರ್’ ಆರ್ಭಟ ನಡೀತಿದೆ.
ಪ್ರಶಾಂತ್ ನೀಲ್, ಪ್ರಭಾಸ್, ಪೃಥ್ವಿರಾಜ್ ಹಾಗೂ ಭುವನ್ ಗೌಡ ಸಿನಿಮಾ ಬಗ್ಗೆ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಬಿಚ್ಚಿಡುತ್ತಿದ್ದಾರೆ. ಇನ್ನು ಪ್ರಶಾಂತ್ ನೀಲ್ ಬಗ್ಗೆ ಒಂದು ಆರೋಪವಿದೆ. ಎಲ್ಲಾ ಚಿತ್ರಗಳ ಲುಕ್ ಒಂದೇ ತರ ಇರುತ್ತದೆ. ಅವರ ಸಿನಿಮಾ ಸ್ಕ್ರೀನ್ ತುಂಬಾ ಕತ್ತಲು, ಕತ್ತಲು.. ಬರೀ ಮಸಿ, ಧೂಳು. ಅವರು ಬ್ಲ್ಯಾಕ್ ಕಲರ್ ಸಿನಿಮಾ ಬಿಟ್ಟು ಕಲರ್ಫುಲ್ ಸಿನಿಮಾ ಮಾಡೋದೇ ಇಲ್ವಾ? ಎನ್ನುವ ಪ್ರಶ್ನೆಗೆ ಕೆಲವರು ಕೇಳುತ್ತಲೇ ಇದ್ದಾರೆ. ಕೊನೆಗೂ ಈ ಬಗ್ಗೆ ನಿರ್ದೇಶಕರು ಮೌನ ಮುರಿದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲ, ನನ್ನ ಆಪ್ತರು, ಸುತ್ತಾಮುತ್ತಾ ಇರುವವರು ಕೂಡ ಇದೇ ಆರೋಪ ಮಾಡುತ್ತಾರೆ. ಕಪ್ಪು ಬಣ್ಣ ಬಿಟ್ಟು ನೀನು ಹೊರಗೆ ಬರುವುದಿಲ್ಲವಾ? ಎಂದು ಕೇಳುತ್ತಿದ್ದಾರೆ. ‘ಏಉಈ’ ಸಿನಿಮಾಗಳ ರೀತಿಯೇ ‘ಸಲಾರ್’ ಕೂಡ ಕಾಣುತ್ತಿದೆ ಎಂದು ಕೆಲವರು ಹೇಳುತ್ತಾರೆ. ಅದಕ್ಕೆ ಕಾರಣ ನನ್ನ ಔಅಆ ಇರಬಹುದು ಎಂದು ನೀಲ್ ಹೇಳಿದ್ದಾರೆ. ನಿಜಕ್ಕೂ ಪ್ರಶಾಂತ್ ನೀಲ್ ಸಿನಿಮಾಗಳ ಬಗ್ಗೆ ಇದೊಂಉ ಆರೋಪ ಕೇಳಿಬರುತ್ತಲೇ ಇತ್ತು. ಚಿತ್ರದ ಪ್ರತಿಫ್ರೇಮ್ ಕಪ್ಪು ಬಣ್ಣದಲ್ಲಿರುತ್ತದೆ. ಚಿನ್ನದ ಗಣಿ, ಕಲ್ಲಿದ್ದಲು ಗಣಿ ಹೀಗೆ ಕತ್ತಲು ತುಂಬಿದ ಲೋಕದಲ್ಲೇ ಕಥೆ ಹೇಳುತ್ತಾರೆ. ಸಿನಿಮಾ ಪೋಸ್ಟರ್ಗಳಲ್ಲಿ ನಾಯಕನ ಮುಖ ಕಪ್ಪು ಬಣ್ಣದಲ್ಲೇ ಇರುತ್ತದೆ. ಚಿತ್ರದ ಕಲಾವಿದರ ಹುಟ್ಟುಹಬ್ಬಕ್ಕೆ ಬರುವ ಪೋಸ್ಟರ್ಗಳಲ್ಲಿ ಬ್ಯಾಕ್ಗ್ರೌಂಡ್ ಕಪ್ಪಾಗಿರುತ್ತದೆ. ಅದನ್ನು ಬಿಟ್ಟು ನೀಲ್ ಹೊರ ಬರುವುದಿಲ್ಲವಾ? KGF,, ಸಲಾರ್ ಸಿನಿಮಾಗಳಲ್ಲಿ ಇದನ್ನೇ ನೋಡಿದ್ದೆವುNTR, 31 ಸಿನಿಮಾ ಪೋಸ್ಟರ್ಗಳಲ್ಲೂ ಇದೇ ಮುಂದುವರೆದಿದೆ.