ಬೆಂಗಳೂರು: ಗುರುವಾರ ಸಂಜೆ ಸುರಿದ ಮಳೆಗೆ ಹತ್ತಾರು ಅವಾಂತರ ಸೃಷ್ಟಿಯಾಗಿದೆ. ಹಲವೆಡೆ ಮರಗಳು ಧರೆಗುರುಳಿದ್ದು, ವಾಹನಗಳನ್ನ ಜಖಂಗೊಂಡಿದೆ. ಬೆಂಗಳೂರು ಸೇರಿದಂತೆ ದಾವಣಗೆರೆ , ಕೋಲಾರ, ಚಿತ್ರದುರ್ಗ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜೋರು ಮಳೆಗೆ ಕೆಲವೆಡೆ ಮನೆಗಳಿಗೆ ನೀರು ನಿಗ್ಗಿದರೆ, ಇನ್ನೂ ಕೆಲ ಕಡೆ ಮರಗಳು ಧರೆಗುರುಳಿವೆ. ವರುಣಾರ್ಭಟಕ್ಕೆ ರಾಜ್ಯದ ಜನತೆ ತತ್ತರಿಸಿಹೋಗಿದ್ದಾರೆ. ಇನ್ನೂ ಮೂರು ದಿನ ರಾಜ್ಯದಲ್ಲಿ ಹೀಗೆ ಮಳೆಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಬೆಂಗಳೂರಿನ ವೈಯ್ಯಾಲಿಕಾವಲ್ ಹಾಗೂ ಮಹಾಲಕ್ಷ್ಮೀ ಲೇಔಟ್ನಲ್ಲಿ ತಡರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಬೃಹತ್ ಮರಗಳು ಬುಡಮೇಲಾಗಿವೆ. ವೈಯ್ಯಾಲಿಕಾವಲ್ ರಸ್ತೆ ಯಲ್ಲಿ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ದ್ವಿಚಕ್ರ ವಾಹನವೊಂದು ಜಖಂಗೊಂಡಿದೆ. ಇತ್ತ ಮಹಾಲಕ್ಷಿ÷್ಮ ಲೇಔಟ್ನ ಪೈಪ್ ಲೈನ್ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿದ್ದು, ಅದರ ಅಡಿಯಲ್ಲಿ ಸಿಲುಕಿ ಮೂರು ಕಾರುಗಳು ಸಂಪೂರ್ಣ ಜಖಂಗೊಂಡಿವೆ.ರಾಜಾಜಿನಗರದಲ್ಲಿ ಬೃಹದಾಕಾರದ ಮರವೊಂದು ಉರುಳಿಬಿದ್ದು, ಕಾರು ಮತ್ತು ಬೈಕ್ಗಳು ಜಖಂಗೊಂಡಿವೆ. ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಬೃಹತ್ ಮರ ಧರೆಗೆ ಉರುಳಿತ್ತು. ಇದ್ರಿಂದ ಎರಡು ಕಾರುಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಮರ ತೆರವುಗೊಳಿಸುವವರೆಗೆ ಈ ಮಾರ್ಗದಲ್ಲಿ ಸಂಚಾರ ಬಂದ್ ಮಾಡಲಾಗಿದೆ.
ನಂದಿನಿ ಲೇಔಟ್ನ 4ನೇ ಬ್ಲಾಕ್ನ ಒಂದೇ ರಸ್ತೆಯಲ್ಲಿ ಐದಾರು ಮರಗಳು ನೆಲಕಲ್ಕುರುಳಿ ಬಿದ್ದಿವೆ. 5 ಕ್ಕೂ ಹೆಚ್ಚು ವಾಹನಗಳು ಜಖಂಗೊAಡಿವೆ. ಅಂಗಡಿ ಮುಂಭಾಗದ ಶೆಡ್, ಮನೆಗಳ ಮೇಲೂ ಮರ ಬಿದ್ದಿದ್ದು, ಸಂಚಾರಕ್ಕೂ ಅಸ್ತವ್ಯಸ್ತ ಉಂಟಾಗಿದೆ. ಸದ್ಯ ಸ್ಥಳಕ್ಕೆ ದೌಡಾಯಿಸಿರುವ ಜಿಬಿಎ ಸಿಬ್ಬಂದಿ ಮರಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದಲ್ಲದೇ ಮಹಾಲಕ್ಷಿ÷್ಮ ಲೇಔಟ್ ನಲ್ಲಿ ಪೈಪ್ ಲೈನ್ ರಸ್ತೆಯಲ್ಲಿ ಭಾರೀ ಗಾತ್ರದ ಮರ ಕಾರಿನ ಮೇಲೆ ಬಿದ್ದು, ಕಾರು ಜಖಂಗೊAಡಿದೆ. ವರದರಾಜಸ್ವಾಮಿ ದೇಗುಲದಲ್ಲಿದ್ದ ಮರ ದೇಗುಲದ ಮೇಲ್ಚಾವಣಿ ಮೇಲೆ ಬಿದ್ದಿದೆ. ಇನ್ನು ಪುಲಿಕೇಶಿನಗರದ ಮುಖ್ಯ ರಸ್ತೆಯಲ್ಲೂ ಮರ ಉರುಳಿ ಬಿದ್ದಿದೆ.ವಿಜಯನಗರದಲ್ಲಿ ಮರದ ಕೆಳಗೆ ಪಾರ್ಕ್ ಮಾಡಿದ್ ಬೈಕ್ ಜಖಂ ಗೊಂಡಿದೆ. ಮಲ್ಲೇಶ್ವರದ 7ನೇ ಅಡ್ಡ ರಸ್ತೆಯಲ್ಲಿ ಭಾರೀ ಗಾತ್ರದ ಮರ ಬಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.ಬೆಣ್ಣೆನಗರಿ ದಾವಣಗೆರೆಯ ಹಳೇ ಪಿಬಿ ರಸ್ತೆಯ ಬಿಎಸ್ಎನ್ಎಲ್ ಕಚೇರಿ ಹಿಂಭಾಗದಲ್ಲಿರುವ ಶಂಕರ ಲೇಔಟ್ನ ರಸ್ತೆಗಳು ಜಲಾವೃತಗೊಂಡು ಹಳ್ಳದಂತಾಗಿವೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ನೇರವಾಗಿ ಹಲವು ಮನೆಗಳಿಗೆ ನುಗ್ಗಿದ್ದು, ಜನರು ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ.
ಮನೆಗಳಿಗೆ ನುಗ್ಗಿದ ನೀರು | ಧರೆಗುರುಳಿದ ಬೃಹತ್ ಮರಗಳು | ರಾಜ್ಯದ ಜನತೆ ತತ್ತರ



