ದೆಹಲಿ: ನೀಟ್ ಪರೀಕ್ಷೆ ರದ್ಧತಿಯಿಂದಾಗಿ ನೊಂದು ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರದ ವಿವಿಧೆಡೆ ನಡೆದಿದೆ. ದೆಹಲಿಯಲ್ಲಿ ಅನ್ಯಕಾ ಎಂಬ ವಿದ್ಯಾರ್ಥಿನಿ, ಆದರ್ಶನಗರದ ತನ್ನ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ.
ಈ ಘಟನೆ ಆಕೆಯನ್ನು ಸ್ಮಶಾನದಲ್ಲಿ ಅಂತಿಮ ವಿಧಿವಿಧಾನ ನಡೆಸುವ ವೇಳೆ ಬೆಳಕಿಗೆ ಬಂದಿದೆ. ಸಕಾಲಕ್ಕೆ ಪ್ರವೇಶಿಸಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಉತ್ತರಪ್ರದೇಶದ ಲಕೀಂಪುರ ಲಕೀನ್ ಕಾಲೋನಿಯಲ್ಲಿ ರಿತೀಕ್ ಎಂಬಾತ ಜೈಲು ಪಾಲಾಗಿದ್ದಾನೆ. ರಾಜಸ್ಥಾನದ ಪ್ರದೀಪ್ ಮಚೇರಿ ಎಂಬಾತ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಈ ಘಟನೆಗಳ ಬಗ್ಗೆ ಕಾಂಗ್ರೆಸ್ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಅವರ ವಿರುದ್ಧ ರಾಹುಲ್ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಇಂತಹ ದುರ್ಘಟನೆಗಳಿಗೆಲ್ಲಾ ಹೊಣೆಗಾರರು ಯಾರು ಎಂದು ಮೋದಿಯವರನ್ನು ಪ್ರಶ್ನಿಸಿದ್ದಾರೆ.
ನೀಟ್ ಪರೀಕ್ಷೆ ರದ್ಧತಿಗೆ ಮೂವರು ಬಲಿ



