ಕನಕಪುರ: ಕೋಡಿಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26 ನೇ ಸಾಲಿನ ಕ್ರೀಡೆ ಸಾಂಸ್ಕೃತಿಕ ಎನ್.ಎಸ್.ಎಸ್, ರೆಡ್ ಕ್ರಾಸ್ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಬಹಳ ಅದ್ದೂರಿಯಾಗಿ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ. ಕೆ ಟಿ ವೆಂಕಟೇಶ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ನಿರಂತರ ಮೂರು ವರ್ಷಗಳ ಕಾಲ ನಮ್ಮ ಕಾಲೇಜಿನಲ್ಲಿ ನೀವು ವಿದ್ಯಾಭ್ಯಾಸ ಪಡೆದಿರುತ್ತೀರಿ ಇಂದಿನ ಕಲಿಕೆ ಮುಂದಿನ ಜೀವನದ ಉದ್ದಕ್ಕೂ ನಿಮಗೆ ನೆರವಾಗು ತ್ತದೆ ದೇಶದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ನಿಮಗೆ ಸಾಕಷ್ಟು ಅನುಭವ ನಮ್ಮ ಕಾಲೇಜಿನಲ್ಲಿ ಸಿಕ್ಕಿದೆ ಅದನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಭವಿಷ್ಯ ವನ್ನು ಭದ್ರಪಡಿಸಿಕೊಳ್ಳುವುದರ ಜೊತೆಗೆ ದೇಶದ ಭವಿಷ್ಯ ವನ್ನು ಸದೃಢ ಗೊಳಿಸಲು ನೀವೆಲ್ಲರೂ ಹೆಚ್ಚಿನ ಶ್ರಮ ವಹಿಸುವಂತೆ ಸಲಹೆ ನೀಡಿದರು.
ಕಲಿಕೆ ಎಂಬುದು ನಿರಂತರ ಜೀವನದ ಉದ್ದಕ್ಕೂ ಇದ್ದೇ ಇರುತ್ತದೆ ಈಗ ನೀವು ಕಾಲೇಜಿನಿಂದ ಸಮಾಜಕ್ಕೆ ಹೋಗುತ್ತಿದ್ದೀರಿ ಮುಂದಿನ ಉನ್ನತ ವ್ಯಾಸಂಗವು ನಿಮ್ಮ ಗುರಿಯಾಗಿರಲಿ ಅದರ ಜೊತೆಜೊತೆಗೆ ಮೌಲ್ಯಗಳನ್ನು ಸಹ ಹೊಂದುವ ಮೂಲಕ ಒಳ್ಳೆಯ ನಾಗರಿಕರಾಗಬೇಕು ಎಂದು ಆಶಿಸುತ್ತೇನೆ. ನಿರಂತರ ಪರಿಶ್ರಮ ಒಂದೇ ನಿಮಗೆ ಆತ್ಮವಿಶ್ವಾಸನ ತಂದುಕೊಡುತ್ತದೆ ಆದ್ದರಿಂದ ಸೋಮಾರಿ ಗಳಾಗದೆ ಸದಾ ಕ್ರಿಯಾಶೀಲರಾಗಿ ಮುಂದೆ ಸಾಗುವಂತೆ ತಿಳಿಸಿದರು.
ಪದವಿ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮುನಿ ಹುಚ್ಚೇಗೌಡ ಮಾತನಾಡಿ ವಿದ್ಯಾರ್ಥಿಗಳು ಸದಾ ಕಾಲ ಮುಂಚೂಣಿಯಲ್ಲಿದ್ದು ದೇಶದ ಆಸ್ತಿಯಾಗಿರುತ್ತಾರೆ, ದೇಶವನ್ನು ಮುನ್ನಡೆಸುವ ಅವಕಾಶ ಯುವಕರಿಗೆ ಇದೆ ಸತ್ಪ್ರಜೆಗಳಾಗಿ ನೀವು ಹೊರಹೊಮ್ಮಬೇಕು, ದುಶ್ಚಟ ಗಳಿಂದ ದೂರವಿರಬೇಕು ನೀವು ಇಲ್ಲಿ ಕಲಿತಿರುವುದನ್ನು ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಇನ್ನೋರ್ವ ಸದಸ್ಯ ರಘು ಜಿ ಮಾತನಾಡಿ ವಿದ್ಯಾರ್ಥಿಗಳು ದೇಶದ ಆಸ್ತಿ ನೀವೆಲ್ಲರೂ ನಿಮ್ಮ ಕುಟುಂಬ ಹಾಗೂ ನಿಮಗೆ ವಿದ್ಯೆ ಕಲಿಸಿದ ಶಿಕ್ಷಕ ರುಗಳ ಬಗ್ಗೆ ಸದಾ ಕಾಲ ಗೌರವ ಭಾವನೆಯನ್ನು ಹೊಂದಿರಬೇಕು ಅದರ ಜೊತೆಗೆ ನಿಮ್ಮ ವಿದ್ಯಾಭ್ಯಾಸ ವನ್ನು ಯಾವುದೇ ಕಾರಣಕ್ಕೂ ಇಲ್ಲಿಗೆ ನಿಲ್ಲಿಸಬಾರದು.. ನಿರಂತರ ಮೂರು ವರ್ಷಗಳ ಕಾಲ ನಿಮ್ಮ ಸ್ನೇಹಿತರ ಜೊತೆ ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿರುತ್ತೀರಿ ಇದು ನಿಮ್ಮ ಜೀವನದಿದ್ದಕ್ಕೂ ಉತ್ತಮವಾದ ನೆನಪಾಗಿ ಉಳಿದಿರುತ್ತದೆ ಇಂಥ ಸುಂದರ ಪರಿಸರದಲ್ಲಿ ಕಲಿಯಲು ನೀವು ಅದೃಷ್ಟ ಮಾಡಿರುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಂದಿನಿ ಹಾಲಿನ ಉತ್ಪನ್ನದ ಆಡಳಿತ ಅಧಿಕಾರಿ ಕಿಶೋರ್ ಗೌಡ, ಕೃಷ್ಣಯ್ಯನ ದೊಡ್ಡಿ ಕಂಟ್ರಾಕ್ಟರ್ ಶಿವಲಿಂಗೇಗೌಡ ಅವರು ಹಾಗೂ ಆದರ್ಶ ವಿದ್ಯಾಮಂದಿರ ಚಿಕ್ಕೊಪ್ಪ ಇದರ ಸ್ಥಾಪಕ ಅಧ್ಯಕ್ಷ ಗುಂಡಣ್ಣ ಹೆಚ್ ರವರು ಸಮಾರಂಭದಲ್ಲಿ ಭಾಗಿ ಯಾಗಿದ್ದರು..
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಹಾಗೂ ಎನ್ಎಸ್ಎಸ್ ವಿಭಾಗ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು,ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳು ತೃತೀಯ ವರ್ಷದ ಹಿರಿಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯಾಗಿ ಕಿರು ಉಡುಗೊರೆಯನ್ನು ನೀಡಿದರು,ಕಾಲೇಜಿನ ಎಲ್ಲಾ ಪ್ರಾಧ್ಯಾಪಕರುಗಳು,ಭೋದಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಈ ವೇಳೆ ಹಾಜರಿದ್ದರು.
ಇಂದಿನ ಕಲಿಕೆ ಮುಂದಿನ ಜೀವನದ ಉದ್ದಕ್ಕೂ ನಿಮಗೆ ನೆರವಾಗುತ್ತದೆ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಾಂಶುಪಾಲ ಡಾ. ಕೆ ಟಿ ವೆಂಕಟೇಶ್ ಅಭಿಪ್ರಾಯ



