ದೇವನಹಳ್ಳಿ: ಕ್ರೀಡೆಯಲ್ಲಿ ಅತಿ ಹೆಚ್ಚು ಜನಪ್ರಿಯ ಆಟಗಳಲ್ಲಿ ವಾಲಿಬಾಲ್ ಪಂದ್ಯಾವಳಿ ಕೂಡ ಒಂದಾ ಗಿದೆ. ಚಂಡನ್ನು ತಳಕ್ಕೆ ಸ್ಪರ್ಷ ಮಾಡದಂತೆ ಬಲೆಯ ಮೇಲೆ ಗುರಿ ಇಡುವ ಪ್ರಯತ್ನವಾಗಿದೆ ಯುವಕರಿಗೆ ಈ ಆಟ ಸ್ಪೂರ್ತಿ ಕೊಡುವ ಆಟವಾಗಿದೆ ಎಂದು ಜಾಲಿಗೆ ಗ್ರಾಮ ಪಂಚಾಯಿತಿ ಸದಸ್ಯ ಅಪ್ಪಯ್ಯ ಅವರು ತಿಳಿಸಿದರು.
ತಾಲ್ಲೂಕಿನ ಭೂವಿಪಾಳ್ಯ ಸರ್ಕಾರಿ ಶಾಲೆ ಆವರಣದಲ್ಲಿ ಬಿಜೆಪಿ ಪಕ್ಷದಿಂದ ಮೊಟ್ಟ ಮೊದಲ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ತಾಲ್ಲೂಕಿನ ಸುತ್ತ-ಮುತ್ತಲಿಂದ ಸುಮಾರು 30 ಕ್ಕೂ ಹೆಚ್ಚು ವಾಲಿಬಾಲ್ ಕ್ರೀಡಾ ತಂಡಗಳು ಸ್ಪರ್ದೆ ಮಾಡಲು ನೊಂದಾಯಿಸಿ ಕೊಂಡಿದ್ದಾರೆ.
ಜಾಲಿಗೆ ಗ್ರಾಮ ಪಂಚಾಯಿತಿಯಲ್ಲಿ ವಾಲಿಬಾಲ್ ಕ್ರೀಡಾಪಟುಗಳನ್ನು ಉತ್ತಮ ರೀತಿಯಲ್ಲಿ ತಯಾರು ಮಾಡುವ ಮುಖ್ಯ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿದೆ. ದೇಶದಲ್ಲಿ ಬಿಜೆಪಿ ಜನಪರ ಆಡಳಿತ ನೀಡಿದ ಹಿನ್ನೆಲೆಯಲ್ಲಿ ಅದಿಕಾರಕ್ಕೆ ಬರದಿರುವ ಕ್ಷೇತ್ರಗಳಲ್ಲೂ ಖಾತೆ ತೆರೆಯುವ ಮೂಲಕ ಅದಿಕಾರದ ಗದ್ದುಗೆ ಹಿಡಿಯುತಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯುವಕರ ಪಾತ್ರ ಮಹತ್ವ ಬಹಳಷ್ಟಿದ್ದು, ದುಶ್ಚಟಗಳಿಂದ ದೂರವಿದ್ದು, ಕಲೆ, ಸಾಹಿತ್ಯ, ಕ್ರೀಡೆ, ಮನರಂಜನೆ ಚುಟುವಟಿಕೆಯಲ್ಲಿ ಮುಂದೆ ಬರುವ ಸದುದ್ದೇಶದಿಂದ ವಾಲಿಬಾಲ್ ಕ್ರೀಡಾಕೂಟ ಹಮ್ಮಿಕೊಳ್ಳಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಇಂಡ್ರಸನಹಳ್ಳಿ ಗೋಪಿನಾಥ್ ಮಾತನಾಡಿ, ವಾಲಿಬಾಲ್ ಪಂದ್ಯಾವಳಿ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಸುವ ಬಹುದಿನಗಳ ಬೇಡಿಕೆ ಆಗಿತ್ತು. ರಾಷ್ಟ್ರ ನಿರ್ಮಾಣ, ಪಕ್ಷದ ಸಂಘಟನೆಯನ್ನು ಬಲಗೊಳಿಸುವ ಉದ್ದೇಶದಿಂದ ನಮ್ಮ ಪಕ್ಷದಕಾರ್ಯಕರ್ತರು ಹಾಗೂ ಕ್ರೀಡಾಪಟುಗಳು ವಾಲಿಬಾಲ್ ಪಂದಾವಳಿಯಲ್ಲಿ ಪಾಲ್ಗೊಳ್ಳಲು ಸಾದ್ಯವಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವರಿಷ್ಟರು ಯಾರಿಗೆ ಟಿಕೇಟ್ ನೀಡಿದರು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಮತ್ತೊಮ್ಮೆ ಅದಿಕಾರಕ್ಕೆ ಬರುವ ಕಲ್ಪನೆಯನ್ನು ಮುಂದಿಟ್ಟುಕೊಂಡು ಶಕ್ತಿಮೀರಿ ನಮ್ಮ ಭಾಗದಲ್ಲಿ ಪಕ್ಷದ ಚಿನ್ಹೆಗೆ ಮತಗಳಿಕೆಯಲ್ಲಿ ಏರಿಕೆ ಮಾಡಲಿದ್ದೇವೆ. ಯುವಕರನ್ನು ರಾಜಕೀಯ ಕ್ಷೇತ್ರಕ್ಕೆ ಕರೆತರುವ ಪ್ರಯತ್ನವು ಕೂಡ ಈ ಒಂದು ಕ್ರೀಡಾಕೂಟದಿಂದ ಜಾರಿಗೆ ಬರುವ ನಿರೀಕ್ಷೆಯನ್ನು ಹೊಂದಿದ್ದೇವೆ ಎಂದರು.ಈ ಸಂದರ್ಭದಲ್ಲಿ ಭೂವಿಪಾಳ್ಯ ಗ್ರಾಮಸ್ಥರಾದ ಅಗ್ರಹಾರ ಸೋಮ, ಬಿಪಿ. ಸೂರ್ಯ, ಶ್ರೀನಿವಾಸ್, ದೇವರಾಜು, ಸುರೇಶ್, ಕುಮಾರ್, ಮುನಿರಾಜು, ಮುನ್ನ, ಶ್ರೀನಿವಾಸ್ ರೆಡ್ಡಿ, ಸುಬ್ಬಣ್ಣ ಮುಂತಾದವರು ಇದ್ದರು.