ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಕನಕಪುರ ನಗರ ಹಾಗೂ ಗ್ರಾಮಾಂತರ ಕ್ಷೇತ್ರದಲ್ಲಿ ಗುರುವಾರದಿಂದ ಎನ್ ಡಿ ಎ ಮೈತ್ರಿ ಕೂಟದ ಮುಖಂಡರು, ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಸಿ. ಎಸ್. ಮಂಜುನಾಥ್ ಪರವಾಗಿ ಮನೆ ಮನೆಗೆ ತೆರಳಿ ಮತ ಪ್ರಚಾರ ಮಾಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಬಿ. ನಾಗರಾಜು, ರಾಜ್ಯ ಯುವ ಜೆಡಿಎಸ್ ಉಪಾಧ್ಯಕ್ಷ ಚಿನ್ನಸ್ವಾಮಿ, ಜೆಡಿಎಸ್ ಮುಖಂಡ ನಲ್ಲಹಳ್ಳಿ ಶಿವಕುಮಾರ್ ಹಾಗೂ
ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕೊತ್ತನೂರು ಕುಮಾರ್, ತಾಲೂಕು ರೈತ ಮೋರ್ಚಾಅಧ್ಯಕ್ಷ ನಾಗಾನಂದ ಸೇರಿದಂತೆ ಹಲವು ಮುಖಂಡರು ಗ್ರಾಮ ದೇವತೆಗಳಿಗೆ ಪೂಜೆಯನ್ನು ಸಲ್ಲಿಸಿ ಪ್ರಚಾರ ಕೈಗೊಂಡು ಸುದ್ದಿಗಾರರೊಂದಿಗೆ ಮಾತನಾಡಿ ಇಂದಿನಿಂದ ತಾಲೂಕಿನಾದ್ಯಂತ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಪ್ರಚಾರ ಕೈಗೊಂಡಿದ್ದು ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿ ಈ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿ ಡಾಕ್ಟರ್ ಮಂಜುನಾಥ್ ಅಧಿಕ ಬಹುಮತದಿಂದ ಗೆಲುವು ಸಾಧಿಸುವ ಭರವಸೆ ವ್ಯಕ್ತ ಪಡಿಸಿದರು.
ತಾ.ಪಂ. ಮಾಜಿ ಸದಸ್ಯ ಕಬ್ಬಾಳೇಗೌಡ, ಗೇರಹಳ್ಳಿ ಸಣ್ಣಪ್ಪ ,ಸಾತನೂರು ಮಹೇಂದ್ರ ,ಜೆ ಡಿಎಸ್ ಮಹಿಳಾ ಮುಖಂಡರುಗಳಾದ ಶೋಭಾ,ಯಡಮಾರನಹಳ್ಳಿ ಪವಿತ್ರ,ನಗರಸಭಾ ಮಾಜಿ ಸದಸ್ಯ ಪುಟ್ಟರಾಜು, ಬಿಜೆಪಿ ನಗರ ಘಟಕ ಅಧ್ಯಕ್ಷ ಮಂಜುನಾಥ್,ಪವಿತ್ರ, ಮುರುಳಿ ಸೇರಿದಂತೆ ಹಲವಾರು ಮುಖಂಡರುಗಳು ಹಾಜರಿದ್ದರು