ದೇವನಹಳ್ಳಿ : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದರ ಮೂಲಕ ಕೇಂದ್ರದಲ್ಲಿ ರಕ್ಷರಾಮಯ್ಯ ಬರಬೇಕು ಹೆಚ್ಚು ಮತಗಳಿಂದ ಜನರು ಅವರನ್ನು ಬೆಂಬಲಿಸಬೇಕು ಎಂದು ಹೇಳುವುದರ ಮೂಲಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಮತ ಕೇಳಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕುಂದಾಣ ಹೋಬಳಿಯ ಗ್ರಾಮಪಂಚಾತಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಕ್ಷಾ ರಾಮಯ್ಯನವರ ಪರ ಮತಯಾಚನೆ ಮಾಡಿದರು.
ಬೈಯಪ ಅಧ್ಯಕ್ಷ ವಿ.ಶಾಂತ್ ಕುಮಾರ್ ಮಾತನಾಡಿ ಕಾಂಗ್ರೇಸ್ ಗೆಲುವು ಸಾಧಿಸಿದ್ದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ನಮ್ಮ ಹಳ್ಳಿಗಳಿಗೆ ಹೆಚ್ಚು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಅಭಿವೃದ್ಧಿಪಡಿಸಲು ಸಾಧ್ಯ ಕಾಂಗ್ರೇಸ್ ಪಕ್ಷಕ್ಕೆ ನಿಮ್ಮ ಮತಗಳ ಬೆಂಬಲವಿರಲಿ ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಚಿನ್ನಪ್ಪ,ಸಿ.ಜಗನ್ನಾಥ್, ಕೆಸಿ.ಮಂಜುನಾಥ್, ಕುಂದಾಣ ಗ್ರಾ.ಪಂ.ಅಧ್ಯಕ್ಷೆ ನೇತ್ರಾ ನಾಗೇಶ್, ಉಪಾಧ್ಯಕ್ಷ ದೇವರಾಜ್ , ಪ್ರಸನ್ನಕುಮಾರ್ , ನಾಗೇಂದ್ರ ಗೌಡ, ಎಸ್.ಆರ್.ರವಿಕುಮಾರ್,ಜಾಲಿಗೆ ಶ್ರೀರಾಮಣ್ಣ, ಕೆ.ಆರ್.ನಾಗೇಶ್, ನಾರಾಯಣಸ್ವಾಮಿ, ವಿಜಯಮ್ಮ, ಕೆ.ವಿ.ಸ್ವಾಮಿ,ರಾಧಾರೆಡ್ಡಿ, ಶಶಿಕಲಾ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.