ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ `ಜೈಲರ್ 2′ ಚಿತ್ರದ ಚಿತ್ರೀಕರಣದ ವೇಳೆ ಭಾರಿ ದುರಂತವೊAದು ಸಂಭವಿಸಿದೆ.
ಚೆನ್ನೈನ ಪಣಯೂರ್ನಲ್ಲಿರುವ ಖಾಸಗಿ ಸ್ಟುಡಿಯೋವೊಂದರಲ್ಲಿ ಸೆಟ್ ನಿರ್ಮಾಣದ ಕೆಲಸದಲ್ಲಿದ್ದ 28 ವರ್ಷದ ಯುವಕನೋರ್ವ ವಿದ್ಯುತ್ ಶಾಕ್ನಿಂದ ಸಾವನ್ನಪ್ಪಿದ್ದಾರೆ.
ಮೃತರನ್ನು ಕಲಾ ವಿಭಾಗದ ಕಾರ್ಮಿಕ ಕಾರ್ತಿಕೇಯನ್ ಎಂದು ಗುರುತಿಸಲಾಗಿದೆ.
ಪಣಯೂರ್ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದ್ದು, ಚಿತ್ರದ ಚಿತ್ರೀಕರಣಕ್ಕಾಗಿ ಮನೆಯೊಂದರ ಸೆಟ್ ನಿರ್ಮಿಸುವ ಕೆಲಸದಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಸೋರಿಕೆಯಾಗಿ ಕಾರ್ತಿಕೇಯನ್ಗೆ ತೀವ್ರವಾದ ಶಾಕ್ ತಗುಲಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಕುರಿತು ಕಾನತ್ತೂರು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ವಿದ್ಯುತ್ ಸೋರಿಕೆಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಇನ್ನೂ ಅಧಿಕೃತವಾಗಿ ಎಫ್ಐಆರ್ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.



