ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿ ಆಗಿರುವ ನಟ ದರ್ಶನ್ ಜಾಮೀನು ಅರ್ಜಿ ಸಲ್ಲಿಸಿದ್ದು, ಇದೀಗ ಸುಪ್ರೀಂ ಕೋರ್ಟಲ್ಲಿ ನಟ ದರ್ಶನ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಒಂದು ವರ್ಷದವರೆಗೆ ಸಾಕ್ಷಿಗಳ ವಿಚಾರಣೆಗೆ ಕಾಲಾವಕಾಶ ನೀಡಿದ್ದು, ಹಾಗಾಗಿ ನಟ ದರ್ಶನ್ಗೆ ಇನ್ನೂ ಒಂದು ವರ್ಷ ಜೈಲುವಾಸವೇ ಖಾಯಂ ಆಗಿದೆ
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ವಿಜಯ್ ಬಿಷ್ನೋಯಿ ಅವರ ಪೀಠದಲ್ಲಿ ಬೇಲ್ ಅರ್ಜಿ ವಿಚಾರಣೆ ನಡೆಯಿತು. ದರ್ಶನ್ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ವಿಚಾರಣೆ ವೇಳೆ 272 ಸಾಕ್ಷಿಗಳಲ್ಲಿ 10 ಸಾಕ್ಷಿಗಳನ್ನು ವಿಚಾರಣೆ ಮಾಡಿದ್ದಾರೆ. 150 ಸಾಕ್ಷಿಗಳ ವಿಚಾರಣೆ ಮಾಡುತ್ತೇವೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಜೈಲಿನಲ್ಲಿ ದರ್ಶನ್ ಗೆ ಕನಿಷ್ಠ ಮೂಲ ಸವಲತ್ತು ಸಹ ನೀಡಿಲ್ಲ. ಈ ವೇಳೆ ನಿಮಗೆಲ್ಲಾ ಕನಿಷ್ಠ ಸವಲತ್ತು ನೀಡಲಾಗಿದೆ. ಪ್ರಮಾಣ ಪತ್ರದಲ್ಲಿ ಅಧಿಕಾರಿಗಳು ಹೇಳಿಕೆ ಕೊಟ್ಟಿದ್ದಾರೆ ಎಂದು ಇದೆ ವೇಳೇ ಜಡ್ಜ್ ಮುಕುಲ್ ಅವರ ವಾದ ತಳ್ಳಿ ಹಾಕಿದರು.
ಬೇರೆ ಖೈದಿಗಳಿಗೆ ಕುಟುಂಬದೊಂದಿಗೆ ಮಾತನಾಡಲು ಅವಕಾಶ ನೀಡುತ್ತಾರೆ. 70 ಬಾರಿ ಕುಟುಂಬದವರ ಭೇಟಿಗೆ ಅವಕಾಶ ನೀಡಿದ್ದೇವೆ ಎನ್ನುತ್ತಾರೆ ಆದರೆ ಮಾತನಾಡುವಾಗ ಪೊಲೀಸರು ಜೊತೆಗೆ ಇರುತ್ತಾರೆ ಎಂದು ಮುಕುಲ್ ರೋಹ್ಟಗಿ ವಾದಿಸಿದರು. ನಾವು ಇನ್ನು ಸ್ವಲ್ಪ ದಿನ ಕಾದು ನೋಡೋಣ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪರ್ದಿವಾಲ ತಿಳಿಸಿದರು. ಈ ವೇಳೆ ಮುಕುಲ್ ಅವರು ಜುಲೈಗೆ ದಿನಾಂಕ ನಿಗದಿಪಡಿಸಿ ಇನ್ನು ಕ್ವಾರಂಟೈನ್ ಸೆಲ್ ನಲ್ಲಿ ದರ್ಶನ್ ಅವರನ್ನು ಇಡಲಾಗಿದೆ ಎಂದಾಗ ಈ ವೇಳೆ ಜೈಲು ನಿಯಮದಂತೆ ಸವಲತ್ತು ನೀಡಲಾಗುತ್ತಿದೆ.
ನಟ ದರ್ಶನ್ಗಿಲ್ಲ ಜಾಮೀನು ಭಾಗ್ಯ ಒಂದು ವರ್ಷದವರೆಗೆ ಸಾಕ್ಷಿಗಳ ವಿಚಾರಣೆಗೆ ಕಾಲಾವಕಾಶ : ಸುಪ್ರೀಂ



