ಬೆಳಗಾವಿ: ಅನ್ಯಕೋಮಿನ ಹುಡುಗನನ್ನು ಪ್ರೀತಿಸಿದ ವಿಷಯಕ್ಕೆ ಸಂಬAಧಪಟ್ಟAತೆ ಕುಟುಂಬವೊAದಕ್ಕೆ ಬಹಿಷ್ಕಾರ ಹಾಕಿದ ಘಟನೆ ಬೆಳಗಾವಿ ತಾಲೂಕಿನಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನರಸೊಬ ಸಾಂಬ್ರೇಕರ್ ಎಂಬ ಕುಟುಂಬಕ್ಕೆ ಅದೇ ಸಮುದಾಯದವರು ಬಹಿಷ್ಕಾರ ಹಾಕಿದ್ದಾರೆ.
ನರಸೊಬ ಕುಟುಂಬದ ಯುವತಿ ಎಸ್ಟಿ ಸಮುದಾಯ ಪ್ರೀತಿಸಿದ ವಿಷಯಕ್ಕೆ ಈ ಘಟನೆ ನಡೆದಿದೆ.
ಬಹಿಷ್ಕಾರ ಹಾಕಿದ ಕುಟುಂಬದವರೊAದಿಗೆ ಯಾರೂ ಮಾತನಾಡಬಾರದು. ಅವರೊಂದಿಗೆ ಮಾತನಾಡಿದರೆ ಐದು ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಬಹಿಷ್ಕಾರ ಹಾಕಿದ ಕುಟುಂಬದವರೊAದಿಗೆ ಯಾವುದೇ ಮದುವೆ ಆಮಂತ್ರಣ ನೀಡುತ್ತಿಲ್ಲ ಎಂದು ಕುಟುಂಬದವರು ನೊಂದಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ 15 ದಿನಗಳು ಕಳೆದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಘಟನೆ ಸಂಬAಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಪ್ರೀತಿ ವಿಷಯಕ್ಕೆ ಕುಟುಂಬಕ್ಕೆ ಬಹಿಷ್ಕಾರ



