ಬೆಂಗಳೂರು: ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಒಂದು ವಾರದಲ್ಲಿ 50ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದ್ದಾರೆ.
ಇಂದು ಮಧ್ಯಾಹ್ನದ ವೇಳೆಗೆ ಜಪ್ತಿಯಾಗಿರುವ ಹಾಗೂ ಈ ಬಗ್ಗೆ ಕ್ರಮ ಜರುಗಿಸಿರುವ ಬಗ್ಗೆ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಗೃಹಸಚಿವರ ಸಮ್ಮುಖದಲ್ಲಿ ಮಾಹಿತಿ ಒದಗಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬಾಗಲೂರು ಪೊಲೀಸರು 16 ಕೋಟಿ.ರೂಪಾಯಿ, ಸಿಸಿಬಿ ಪೊಲೀಸರು 17.50 ಕೋಟಿ ರೂಪಾಯಿ, ಜಾಲಹಳ್ಳಿ ಹಾಗೂ ಮತ್ತಿತರ ಠಾಣಾ ವತಿಯಿಂದ ಒಟ್ಟು 50 ಕೋಟಿ ರೂ.ಮಾದಕ ವಸ್ತು ಪತ್ತೆ ಹಚ್ಚಿದ್ದು, ಪೊಲೀಸರ ಕಾರ್ಯವೈಖರಿಯನ್ನು ಗೃಹಸಚಿವರು ಶ್ಲಾಘಿಸಿದ್ದಾರೆ.



