ಬೆಳಗಾವಿ: ನೈಟಿ ಹಾಕಿದ್ದಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿ ಗಂಡ ಹೆಂಡತಿಗೆ ಬೆಂಕಿಯಿಟ್ಟ ಘಟನೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ಕೃಷ್ಣ ಪಾಟೀಲ್ ಎಂಬಾತ ತನ್ನ ಹೆಂಡತಿ ಮಂಜುಳ ಸೀರೆ ಬದಲಿಗೆ ನೈಟಿ ಹಾಕಿದ್ದನ್ನು ವಿರೋಧಿಸಿ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಪತಿ ಮಂಜುಳಾಗಾಗಿ ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಮಂಜುಳ ಸುಮಾರು ಶೇ.80ರಷ್ಟು ಭಾಗ ಬೆಂಕಿಗೆ ಸುಟ್ಟುಹೋಗಿದ್ದಾಳೆ. ಗಂಡ ಹೆಂಡತಿಯರ ಜಗಳ ಕಂಡು ಕೇಳಿಸಿಕೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೇ.80ರಷ್ಟು ಸುಟ್ಟಿರುವ ಮಂಜುಳಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗೋವಾಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಪತಿಯನ್ನು ವಶಕ್ಕೆ ಪಡೆದಿರುವ ನಂದಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



