ಕೋಲಾರ: ಕೋಲಾರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಕೊರತೆಯಿಂದ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯ ನಿರ್ವಹಣೆಗಾಗಿ ಗ್ರಾಮೀಣ ಭಾಗದ ಕೂಲಿಕಾರರ ಜೀವನೋಪಾಯಕ್ಕೆ ಆಸರೆಯಾಗಲು ವಿಬಿ-ಜಿ ರಾಮ್ ಜಿ (ಗಿಃ-ಉಖಂಒ ಉ)ಯಡಿ ಉದ್ಯೋಗ ಒದಗಿಸುವಂತೆ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರವೀಣ್ ಪಿ ಬಾಗೇವಾಡಿರವರು ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಮಳೆಯ ಅಭಾವದಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಕ್ಷೀಣಿಸಿದ್ದು, ಗ್ರಾಮಗಳಲ್ಲಿ ಕೆಲಸವಿಲ್ಲದೆ ಕೂಲಿಕಾರರು ನಗರಗಳತ್ತ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ವಲಸೆ ತಡೆಯುವ ಉದ್ದೇಶದಿಂದ ಗ್ರಾಮೀಣ ಉದ್ಯೋಗ ಯೋಜನೆಯಾದ ವಿಬಿ-ಜಿ ರಾಮ್ ಜಿ ನ್ನು ಸಕ್ರಿಯವಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯತ್ ಮುಂದಾಗಿದೆ. ಈ ಸಂಬಂಧ ಗ್ರಾಮ ಪಂಚಾಯತಿಗಳಲ್ಲಿ ಚಾಲನೆಯಲ್ಲಿರುವ ಹಾಗೂ ಯುಕ್ತಧಾರ ತಂತ್ರಾಂಶದಲ್ಲಿ ಅನುಮೊದನೆಗೊಂಡಿರುವ ಕಾಮಗಾರಿಗಳನ್ನು ತಕ್ಷಣವೇ ಪ್ರಾರಂಭಿ, ಕೂಲಿಕಾರರಿಗೆ ಕೆಲಸ ನೀಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ವಿಬಿ-ಜಿ ರಾಮ್ ಜಿ ಸಿಬ್ಬಂದಿಗೆ ತಿಳಿಸಲಾಗಿದೆ.ಬೇಡಿಕೆ ಸಲ್ಲಿಸಿದ ಕೂಡಲೇ ಉದ್ಯೋಗ ಜಾಬ್ ಕಾರ್ಡ್ ಹೊಂದಿರುವ ಗ್ರಾಮೀಣ ಕೂಲಿಕಾರರು ‘ಫಾರಂ-6’ (ಈoಡಿm-6) ರಲ್ಲಿ ಉದ್ಯೋಗ ಕೋರಿ ಅರ್ಜಿ ಸಲ್ಲಿಸಿದ 15 ದಿನದೊಳಗೆ ಪ್ರತಿಯೊಬ್ಬರಿಗೂ ಕೆಲಸ ಒದಗಿಸಬೇಕು. ಕೆಲಸ ಒದಗಿಸಲು ಸಾಧ್ಯವಾಗದಿದ್ದರೆ ನಿರುದ್ಯೋಗ ಭತ್ಯೆ ನೀಡಬೇಕು. ಹೀಗಾಗಿ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗಕ್ಕೆ ಬೇಡಿಕೆ ಸಲ್ಲಿಸುವ ಪ್ರತಿಯೊಬ್ಬ ಕೂಲಿಕಾರನಿಗೂ ತಕ್ಷಣವೇ ಕೆಲಸ ನೀಡಬೇಕು. ಅದೇ ರೀತಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ಯಾವುದೇ ಕಾರಣಕ್ಕೂ ಕೂಲಿ
ಹಣ ಪಾವತಿಯಲ್ಲಿ ವಿಳಂಬವಾಗಬಾರದು. ನಿಗದಿತ ಸಮಯದೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲು ಕ್ರಮ ವಹಿಸಲು ಸೂಚಿಸಲಾಗಿದೆ.ಪ್ರತಿ ಕುಟುಂಬಕ್ಕೆ 125 ದಿನ ಕೂಲಿ ಖಾತರಿಮನರೇಗಾ ಯೋಜನೆ ಬದಲಾಗಿ ಸರ್ಕಾರ ರೂಪಿಸಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆ ಜು.1ರಂದು ದೇಶಾದ್ಯಂತ ಜಾರಿಗೆ ಬಂದಿದೆ. ಹೊಸ ಉದ್ಯೋಗ ಖಾತರಿ ಯೋಜನೆಯಡಿ ಸ್ವಯಂಪ್ರೇರಿತರಾಗಿ ಅಕುಶಲ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸುವ ಗ್ರಾಮೀಣ ವಯಸ್ಕ ಸದಸ್ಯರ ಕುಟುಂಬಕ್ಕೆ, ಒಂದು ಆರ್ಥಿಕ ವರ್ಷದಲ್ಲಿ 125 ದಿನಗಳ ಕೆಲಸ ಒದಗಿಸಲಾಗುವುದು. ಇದರಿಂದ ಜಾಬ್ ಕಾರ್ಡ್ ಹೊಂದಿರುವ ಒಂದು ಕುಟುಂಬ ವಾರ್ಷಿಕವಾಗಿ ರೂ.47,750/- ಆದಾಯ ಗಳಿಸಬಹುದಾಗಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಅನುಮೋದಿತ 266 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ವಿಬಿ-ಜಿ ರಾಮ್ ಜಿ ಯೋಜನೆಯಲ್ಲಿ 318 ಕಾಮಗಾರಿಗಳಿಗೆ ಅವಕಾಶ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಶಾಲೆ ಕೊಠಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಸ್ ನಿಲ್ದಾಣ, ಗ್ರಾಮೀಣ ಉದ್ಯಾನವನ ಸೇರಿದಂತೆ ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ಕೂಲಿದರ ರೂ.382ಕ್ಕೆ ಏರಿಕೆವಿಬಿ-ಜಿ ರಾಮ್ ಜಿ ಯೋಜನೆಯಲ್ಲಿ ಕೂಲಿ ದರವನ್ನು ಪ್ರಸಕ್ತ ವರ್ಷದಲ್ಲಿ ದಿನಕ್ಕೆ ರೂ.370/- ರಿಂದ ರೂ.382/- ರೂಪಾಯಿಗೆ ಏರಿಸಲಾಗಿದೆ. ಜುಲೈ 1 ರಿಂದ ರಾಜ್ಯದಲ್ಲಿ ಕೂಲಿದರ 382 ರೂಪಾಯಿಗೆ ಏರಿಸಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶಿಸಿದ್ದು, ಗ್ರಾಮೀಣ ಕೂಲಿಕಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಮಹಾತ್ಮ ಗಾಂಧಿ ನರೇಗಾದಡಿಯಲ್ಲಿ ಜಾಬ್ ಕಾರ್ಡ್ ಹೊಂದಿರುವ ಎಲ್ಲರೂ, ಎಂದಿನಂತೆ ಕೆಲಸಕ್ಕೆ ಬೇಡಿಕೆ ಸಲ್ಲಿಸಿ, ಉದ್ಯೋಗ ಪಡೆಯಬಹುದು. ಹೊಸದಾಗಿ ಉದ್ಯೋಗ ಚೀಟಿ ಬೇಕಾದರೆ, ಗ್ರಾಮ ಪಂಚಾಯತಿಗಳಿಗೆ ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಪ್ರತಿ ನೀಡಿ, ವಿಬಿಜಿರಾಮ್ಜಿ ಯೋಜನೆಯಡಿ ನೊಂದಾಯಿಸಿ, ಉಚಿತವಾಗಿ ಗ್ಯಾರಂಟಿ ಕಾರ್ಡ್ ಪಡೆಯಬಹುದು. ಜಿಲ್ಲೆಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವ ಉದ್ದೇಶದಿಂದ ಈಗಾಗಲೇ ತರಬೇತಿ ನೀಡಲಾಗಿದೆ. ಅನುಷ್ಠಾನ ಇಲಾಖೆಗಳ ಅಧಿಕಾರಿಗಳಿಗೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಂಪ್ಯೂಟರ್ ಆಪರೇಟರ್ಗಳು, ಎಂ.ಐ.ಎಸ್, ತಾಂತ್ರಿಕ ಸಂಯೋಜಕರು, ಐಇಸಿ, ತಾಂತ್ರಿಕ ಸಹಾಯಕರು, ಸೇರಿ ಬಿಎಫ್ಟಿ, ಕಾಯಕ ಮಿತ್ರರಿಗೆ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಅಗತ್ಯ ತರಬೇತಿ ನೀಡಲಾ
ಗಿದೆ. ಜಲ ಭದ್ರತೆ ಕಾಮಗಾರಿಗಳಿಗೆ ಆದ್ಯತೆ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಚೆಕ್ ಡ್ಯಾಂ, ಕಲ್ಯಾಣಿ ಪುನಶ್ಚೇತನ, ಕೆರೆ ಹೂಳೆತ್ತುವುದು, ನಾಲೆಗಳ ಸ್ವಚ್ಛತೆ ಹಾಗೂ ಮಳೆನೀರು ಕೊಯ್ಲು ಸೇರಿಂದ ಜಲ ಭದ್ರತೆ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ. ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವುದರ ಜತೆಗೆ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ, ಜೀವನೋಪಾಯ ಹಾಗೂ ಹವಾಮಾನ ವೈಪರೀತ್ಯ ಶಮನ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿಯಾಗಿದೆ.
ಮುಂಗಾರು ಕೊರತೆಯಿಂದ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ವಿಬಿ-ಜಿ ರಾಮ್ ಜಿಯಡಿ ಉದ್ಯೋಗ ಒದಗಿಸಲು ಸಿಇಒ ಸೂಚನೆ



