ಚಳ್ಳಕೆರೆ: ಚಿತ್ರದುರ್ಗದಲ್ಲಿ ಮೇ 9ಕ್ಕೆ ನಡೆಯಲಿರುವ ಬಿಎಸ್.ಯಡಿಯೂರಪ್ಪ ನವರ 50ವರ್ಷ ರಾಜಕೀಯ ಪೂರೈಸಿದಕ್ಕೆ, ಕರ್ನಾಟಕದ ಅವರ ಅಭಿಮಾನಿಗಳು ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿ. ’ಬಿ.ಎಸ್ವೈ ಅಭಿಮಾನೋತ್ಸವ’ ಕಾರ್ಯಕ್ರಮದ ಯಶಸ್ಸಿಗಾಗಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಟ್ಟದ ಪೂರ್ವಭಾವಿ ಸಭೆಯನ್ನು ನಗರದ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಸ್ ಕಲ್ಯಾಣ ಮಂಟಪದಲ್ಲಿ ಚಳ್ಳಕೆರೆ ತಾಲ್ಲೂಕು ಬಿಜೆಪಿ ಪಕ್ಷ ಆಯೋಜಿಸಲಾಗಿತ್ತು.ಸಭೆಯಲ್ಲಿ ಮೇ 9ಕ್ಕೆ ನೆಡೆಯಲಿರುವ ಬಿಎಸ್ವೈ ಅಭಿಮಾನೋತ್ಸವ ಕಾರ್ಯಕ್ರಮದ ರೂಪುರೇಷೆಗಳು ಹಾಗೂ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ನಾಯಕರು ಪ್ರತಿ ಗ್ರಾಮ ಪಂಚಾಯತಿವಾರು ಮುಖಂಡರೊಂದಿಗೆ ನೇರ ಸಂವಾದ ನಡೆ ಸಿ,ಸ್ಥಳೀಯ ಮಟ್ಟದ ಸಿದ್ಧತೆಗಳ ಕುರಿತು ಮಾಹಿತಿ ಹಾಗೂ ವರದಿಯನ್ನು ಪಡೆದುಕೊಂಡರು.ಈ ಮಹತ್ವದ ಪೂರ್ವಸಿದ್ಧತೆ ಸಭೆಯಲ್ಲಿ ಬಿಎಸ್ ಯಡಿಯೂರಪ್ಪ ಅ ಭಿಮಾನೋತ್ಸವದ ಕಾರ್ಯಕ್ರಮದ ಯಶಸ್ಸುಗಾಗಿ,ಸಭೆಯಲ್ಲಿ ಪ್ರಸ್ತಾ ವಿಕ ಭಾಷಣ ಮಾಡಿದ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ 15ವರ್ಷಗಳಿಂದ ಬಿಜೆಪಿ ಪಕ್ಷದ ಎಂಎಲ್ಎ ಇಲ್ಲದೆ ಕಾರ್ಯಕರ್ತರು ನೊಂದಿದ್ದಾರೆ. 2028ರಲ್ಲಿ ಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕು ಎಂದರೆ ಇಂದಿನಿAದಲೇ ಪಕ್ಷದ ಸಂಘಟನೆಯಾಗಬೇಕು.ಬಿಎಸ್ ವೈ ಅಭಿಮಾನೋತ್ಸವ ಕಾರ್ಯಕ್ರಮ ನಮ್ಮ ಸಂಘಟನೆಗೆ ನಾಂದಿಯಾಗಬೇಕು ಈ ಕಾರ್ಯಕ್ರಮ ಯಶಸ್ವಿಯಾಗಲು ನಿಮ್ಮೆಲ್ಲರ ಸಹಕಾರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.ಬಿ.ಎಸ್.ವೈ ಅಭಿಮಾನೋತ್ಸವ ಕಾರ್ಯಕ್ರಮ ಸಮಿತಿ ಕಾರ್ಯಧ್ಯಕ್ಷರು ಹಾಗೂ ಮಾಜಿಸಚಿವರಾದ ಬಿ.ಶ್ರೀರಾಮುಲು ಮಾತನಾಡಿ, ಯಡಿಯೂ ರಪ್ಪನವರು, ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳಸಿ, 4ಬಾರಿ ಮುಖ್ಯಮಂತ್ರಿಯಾಗಿ ಭಾರತೀಯ ಜನತಾಪಾರ್ಟಿಯನ್ನು ದಕ್ಷಿಣ ಭಾರ ತದಲ್ಲಿ ಅಧಿಕಾರಕ್ಕೆ ತಂದು ಕಮಲ ಅರಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇನ್ನು ಜೊತೆಯಲ್ಲಿ ನಮ್ಮಂತಹ ನೂರಾರು ನಾಯಕರನ್ನು ಪಕ್ಷದಲ್ಲಿ ಬೆಳಸಿದ ಮಹಾನ್ ರಾಜಕೀಯ ಮುತ್ಸದ್ಧಿ ಭೀಷ್ಮ ನಮ್ಮ ಬಿಎಸ್ ವೈ ರವರು.ಇನ್ನು ಇಂತಹ ಮೇರು ನಾಯಕನನ್ನು ಸನ್ಮಾನಿಸುವ ಸೌಭಾಗ್ಯ ನಮ್ಮ ಚಿತ್ರದುರ್ಗ ಜಿಲ್ಲೆಗೆ ಸಿಕ್ಕಿರುವುದು ನಮ್ಮ ಪುಣ್ಯ, ಈ ಒಂದು ಕಾರ್ಯಕ್ರ ಮ ಕರ್ನಾಟಕದಲ್ಲಿ ಐತಿಹಾಸಿಕ ದಾಖಲೆಯನ್ನು ಸೃಷ್ಠಿಸುತ್ತದೆ, 2028 ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಈ ಕಾರ್ಯಕ್ರಮ ದಿಕ್ಸುಚಿಯಾಗುತ್ತದೆ.ಈ ಕಾರ್ಯಕ್ರಮದಲ್ಲಿ ಸುಮಾರು 10ಲಕ್ಷ ಜನರು ಸೇರುವ ನಿರೀಕ್ಷೆ ಇದೆ, ಚಳ್ಳಕೆರೆಯು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ ರವರ ತವರು, ಅವರ ಅಧ್ಯಕ್ಷತೆಯಲ್ಲಿ ದಾಖಲೆ ಯ ಕಾರ್ಯಕ್ರಮವಾಗಬೇಕು. ಮುಂದೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಂ.ಎಲ್.ಎ ಆರಿಸಿ ಬರ ಬೇಕೆಂದರೆ, ಈ ಕ್ಷೇತ್ರದ ಬಿಜೆಪಿ ಮು ಖಂಡರು, ಕಾರ್ಯಕರ್ತರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಜನರನ್ನು ಕಾರ್ಯಕ್ರಮಕ್ಕೆ ಕರೆ ತರುವ ಮೂಲಕ ಕುಮಾರಸ್ವಾಮಿಗೆ ಹೆಸರು ಕೀರ್ತಿಯನ್ನು ತರಬೇಕು ಎಂದು ಸಭೆಯಲ್ಲಿ ಉತ್ಸವ ತುಂಬಿದರು.ಬಿ.ಎಸ್.ವೈ ಅಭಿಮಾನೋತ್ಸವದ ಕಾರ್ಯಕ್ರಮ ಸಮಿತಿ ಉಸ್ತುವಾರಿ ಗಳು ಹಾಗೂ ರಾಜ್ಯ ಬಿಜೆಪಿ ಪ್ರಧಾನಕಾರ್ಯದರ್ಶಿ ಪ್ರೀತಮ್ ಗೌಡ ರವರು ಮಾತನಾಡಿ. ಬಿಎಸ್ವೈ ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಗಿ ಪಂಚಾ ಯಿತಿವಾರು ಪಕ್ಷದ ಮುಖಂಡರು,ಕಾರ್ಯಕರ್ತರ ಜವಾಬ್ದಾರಿ ಸೇರಿದಂತೆ ಕಾರ್ಯಕ್ರಮದಲ್ಲಿ ಜನರನ್ನು ಕರೆತರಲು ಬೇಕಾದ ಪೂರ್ವ ಸಿದ್ಧತೆ,ಕಾರ್ಯಕ್ರಮದಲ್ಲಿ ವಿವಿಧ ಸಮಿತಿಗಳಿಗೆ ಪ್ರಬಂಧಕರನ್ನು ನಿಯೋಜನೆ ಮಾಡಲು ಹಾಗೂ ಸಮಿತಿಗಳಲ್ಲಿ ಭಾಗವಹಿಸುವ ಪ್ರಬಂಧಕರ ಹೆಸರು ಹಾಗೂ ಪೂರ್ಣ ವಿಳಾಸ ಕೊಡಲು ಸೂಚಿಸಿದರು. ಈ ಸಭೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಪೂರಕವಾದ ಅನೇಕ ವಿಷಯ ಗಳನ್ನು ಚರ್ಚಿಸಿದರು.ಸಭೆಯಲ್ಲಿ ಸ್ವಾಗತ ಭಾಷಣವನ್ನು ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಬಿ. ಎಂ.ಸುರೇಶ್ ಮಾಡಿದರೆ.ಕಾರ್ಯಕ್ರಮ ನಿರೂಪಣೆಯನ್ನು ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್,ಓಬಳೇಶ್ ಮಾಡಿದರು. ವಂದನಾರ್ಪ ಣೆಯನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾಡಿ ದರೆ,ಸಭೆ ಉಸ್ತು ವಾರಿಯನ್ನು ನಗರಘಟಕದ ಪ್ರಧಾನ ಕಾರ್ಯದರ್ಶಿ ಡಾ.ರಾಮರಾಜು ಮಾಡಿದರು.
ಈ ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ನಿಕಟಪೂರ್ವ ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ,ಬಿಜೆಪಿ ವಿಭಾಗ ಸಹ ಉಸ್ತುವಾರಿ ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ.ಪಿ.ಎಂ.ಮAಜುನಾ ಥ್,ವೆಂಕಟೇಶ್ ಯಾದವ್,ಮಾಧುರಿ ಗಿರೀಶ್,ಬಿಜೆಪಿ ಜಿಲ್ಲಾ ಎಸ್ಟಿಮೋ ರ್ಚಾ ಅಧ್ಯಕ್ಷ ರಾಜಣ್ಣ,ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಪರುಶುರಾಮ ಚಳ್ಳಕೆರೆ ಮಂಡಲ ಅಧ್ಯ ಕ್ಷ ಬಿ.ಎಂ.ಸುರೇಶ್,ಬಿಜೆಪಿ ಜಿಲ್ಲಾ ಕೋಶಧ್ಯ ಕ್ಷ ಪ್ರಸಾದ್,ಸೋಮಶೇಖರ ಮಂಡಿಮಠ,ಮುಖಂಡರಾದ ಆದಿಭಾಸ್ಕರ ಶೆಟ್ಟಿ, ನಗರಘಟಕದ ಅಧ್ಯಕ್ಷ ಡಿಶ್ ಕೃಷ್ಣಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಮಂಡಲ ಮಟ್ಟದ ಪ್ರಧಾನ ಕಾರ್ಯದರ್ಶಿಗಳು,ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಹಿರಿಯ ಮುಖಂಡರು ಹಾಗೂ ನೂ ರಾರು ಸಂಖ್ಯೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದ್ದರು.
`2028ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಎಸ್ವೈ ಅಭಿಮಾನೋತ್ಸವ ಕಾರ್ಯಕ್ರಮ ದಿಕ್ಸೂಚಿ’



