ಬೆಂಗಳೂರು: ಸುವರ್ಣ ಸದನ ಮಹಿಳಾ ಮಂಡಳಿಯ 52ನೇ ವಾರ್ಷಿಕೋತ್ಸವ, ಬೆಂಗಳೂರಿನ ಜೆಎಸ್ಎಸ್ ಸಿಬಿಎಸ್ಸಿ ಶಾಲೆಯ ರಂಗ ಮಂದಿರದಲ್ಲಿ ವೈಭವವಾಗಿ ನೆರವೇರಿತು..
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಗೀತ ದಿಗ್ಗಜೇ ಗಾನ ಸರಸ್ವತಿ ಶ್ರೀಮತಿ ಡಾಕ್ಟರ್ ಜಿ ಎನ್.ನಾಗಮಣಿ ಶ್ರೀನಾಥ್, ಇವರ ಸಂಗೀತ ಸಾಧನೆ ಎಲ್ಲರಿಗೂ ತಿಳಿದೇ ಇರುತ್ತೆ..ಹಾಗೂ ನೃತ್ಯ ಚೂಡಾಮಣಿ ವೈಜಯಂತಿ ಕಾಶಿ,ಕೂಚೂ ಪುಡಿ ಹಾಗೂ ಭರತನಾಟ್ಯ ಕಲಾವಿದೆ ಇಷ್ಟೇ ಅಲ್ಲ, ನಾಟಕ, ರಂಗಭೂಮಿ , ಹವ್ಯಾಸಿ ಕಲಾವಿದೆ,. ಟಿವಿ ಧಾರಾವಾಹಿಗಳಲ್ಲೂ ಪ್ರಸಿದ್ದ ಸೀತಾರಾಮರವರ ನಿರ್ದೇಶನದಲ್ಲೂ ನಟಿಸಿದ್ದಾರೆ… ಇವರಿಬ್ಬರೂ ಸಭೆಯನ್ನುದ್ದೇಶಿಸಿ ಮಾತನಾಡಿದರು..
ಸಂಘ ಬೆಳೆದು ಬಂದ ಹಾದಿಯನ್ನು ಪ್ರಶಂಶಿಸಿಸಿದರು.. ಹೆಣ್ಣುಮಕ್ಕಳ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹದ ನುಡಿಗಳನ್ನು ಆಡಿದರು.. ಬರೀ ಮನೋರಂಜನೆಗೆ ಅಷ್ಟೇ ಅಲ್ಲದೆ ಸಂಘ ಸಮಾಜಮುಖಿ ಕಾರ್ಯಗಳಲ್ಲಿ ಹೇಗೆ ಸಕ್ರಿಯವಾಗಿ ಕೈಜೋಡಿಸಿದೆ, ಎನ್ನುವುದನ್ನು ಅಧ್ಯಕ್ಷಣಿ ಸುಮಾ ಪ್ರಕಾಶ್ ಹಾಗೂ ಕಾರ್ಯದರ್ಶಿ ಪೂರ್ಣಿಮ, ಖಜಾಂಜಿ ಉಮಾವೆಂಕಟೇಶ್ ಅವರು ಅಂಕಿ ಅಂಶಗಳ ಸಮೇತ ತಿಳಿಸಿಕೊಟ್ಟರು.
ಮತ್ತೇ ಸುವರ್ಣ ಸದನದ ಸದಸ್ಯರು ತಮ್ಮ ತಮ್ಮಲ್ಲಿದ್ದ ಅಪ್ರತಿಮ ಸಾಧನೆ ಸಂಗೀತ, ನಾಟಕ ,ನೃತ್ಯ, ಆಟ, ವಿನೋದ, ಅಡಿಗೆ, ಕರ ಕುಶಲ ಕಲೆ, ಎಲ್ಲವನ್ನು ಪ್ರದಶಿಸಿ, ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು.ಹೀಗೆ ಭಾನುವಾರ ಸಂಜೆ ಸುವರ್ಣ ಸದನ ಕಾರ್ಯಕ್ರಮಗಳಿಂದ ಸುಸಸಂಪನ್ನವಾಯಿತು.