ಬೆಂಗಳೂರು: ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿ ಇ ಎಲ್ ಸರ್ಕಲ್ ಕೆಳ ಸೇತುವೆ ಬಳಿ ನಿನ್ನೆ ರಾತ್ರಿ ದ್ವಿಚಕ್ರ ಸವಾರ ಮಹಮದ್ ಅಲಿ 18 ವರ್ಷ, ಶಿವಾಜಿನಗರ ನಿವಾಸಿ, ಅತಿ ವೇಗವಾಗಿ ಬಂದು ಸ್ಕಿಡ್ ಆಗಿ ನೆಲದ ಮೇಲೆ ಬಿದ್ದು ಮೃತಪಟ್ಟಿರುತ್ತಾನೆ.
ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಡುಗೆಹಳ್ಳಿ ಮೇಲ್ ಸೇತುವೆ ಮೇಲೆ ಕಾರು ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ನಾಗರಾಜು(55) ಮೃತಪಟ್ಟಿರುತ್ತಾರೆ.ಚಿಕ್ಕಬಳ್ಳಾಪುರಕ್ಕೆ ಹೋಗುವ ಸಮಯದಲ್ಲಿ ಈ ದುರ್ಘಟನೆ ಇಂದು ಬೆಳಿಗ್ಗೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದೆ.