ಟೆಲ್ ಅವಿವ್/ಜೆರುಸಲೇಂ: ಏಪ್ರಿಲ್ನಲ್ಲಿ ಕದನ ವಿರಾಮ ಜಾರಿಗೆ ಬಂದ ನಂತರ ಇರಾನ್ ಮೊದಲ ಬಾರಿಗೆ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ.ಕಳೆದ ಕೆಲ ದಿನಗಳಿಂದ ಅಮೆರಿಕದ ವಿನಂತಿಗಳನ್ನ ಧಿಕ್ಕರಿಸುತ್ತಲೇ ಬಂದ ಇರಾನ್ ಯಾವುದೇ ಎಚ್ಚರಿಕೆಯಿಲ್ಲದೇ ಇಸ್ರೇಲ್ನ ಬೈರೂತ್ನ ದಕ್ಷಿಣ ಉಪನಗರಗಳನ್ನ ಗುರಿಯಾಗಿಸಿ ಇರಾನ್ ಮಿಸೈಲ್ ದಾಳಿ ನಡೆಸಿದೆ.ಶಾಂತಿ ಒಪ್ಪಂದ ಅಂತಿಮ ಹಂತದಲ್ಲಿರುವಂತೆಯೇ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಸಂಘರ್ಷ ಹೆಚ್ಚಾಗಿದೆ. ಇದರಿಂದಾಗಿ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಅನಿಶ್ಚಿತತೆ ಮುಂದುವರಿದಿದೆ. ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಸಂಭವನೀಯ ಪ್ರತಿಕ್ರಿಯೆಗಾಗಿ ತನ್ನ ಪಶ್ಚಿಮ ವಾಯುಪ್ರದೇಶವನ್ನ ಇರಾನ್ ಮುಚ್ಚಿದೆ. ಸಂಭಾವ್ಯ ಇಸ್ರೇಲಿ ಆಕ್ರಮಣಕ್ಕೆ ಸಿದ್ಧವಾಗಲು ನೆರೆಯ ಇರಾಕ್ ಮತ್ತು ಸಿರಿಯಾ ಕೂಡ ತಮ್ಮ ವಾಯುಸೀಮೆಯನ್ನ ಬಂದ್ ಮಾಡಿವೆ.ಬೈರೂತ್ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಲೆಬನಾನ್ನ ಮೇಲೆ ಇಸ್ರೇಲ್ನಿಂದ ನಿರಂತರ ದಾಳಿ ನಡೆಯುತ್ತಿದ್ದರಿಂದ ಪ್ರತಿದಾಳಿ ನೆಡಸಲಾಗಿದೆ ಎಂದು ಇರಾನ್ ಸಮರ್ಥಿಸಿಕೊಂಡಿದೆ.ಇತ್ತ ಇರಾನ್ ಕ್ಷಿಪಣಿಗಳನ್ನ ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿರುವ ಇಸ್ರೇಲ್ ಮಿಲಿಟರಿ ಪಡೆ, ಪ್ರತೀಕಾರಕ್ಕೆ ದಾಳಿಗೆ ಮುಂದಾಗುತ್ತಿದೆ. ಮತ್ತೊಂದು ಕಡೆ ಇರಾನ್ ದಾಳಿಗೆ ಪ್ರತಿಯಾಗಿ ಇರಾನ್ನ 20 ಸ್ಥಳಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿದೆ.ಇಸ್ರೇಲ್ ಸೇನೆ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಇರಾನ್ನ ಪಶ್ಚಿಮ ಮತ್ತು ಮಧ್ಯ ಭಾಗದಲ್ಲಿರುವ ಸೇನಾ ಗುರಿಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ. ಇರಾನ್ ಆಡಳಿತಕ್ಕೆ ಸೇರಿದ ಸೇನಾ ಮೂಲಸೌಕರ್ಯಗಳ ಮೇಲೆ ನಿಖರ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದರೂ, ಯಾವ ಪ್ರದೇಶಗಳನ್ನು ಹೊಡೆದುರುಳಿಸಲಾಗಿದೆ ಎಂಬ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.ದಾಳಿಯ ಬಳಿಕ ಇರಾನ್ನ ಇಸ್ಫಹಾನ್, ಕರಾಜ್, ತಬ್ರೀಜ್ ಹಾಗೂ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ನಗರಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿರುವುದಾಗಿ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.



