ಗೌರಿಬಿದನೂರು: ತಾಲ್ಲೂಕಿನಲ್ಲಿ ವಸತಿ ರಹಿತರಾಗಿರುವ ಪ್ರತಿಯೊಬ್ಬರಿಗೂ ನಿವೇಶನ ಒದಗಿಸುವುದು ನಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲಾಗುವುದು,ಕಳೆದ ಮೂರು ವರ್ಷಗಳಿಂದ ನಾನು ಯಾವುದೇ ಪಂಚಾಯತ್ ಅಥವಾ ತಾಲ್ಲೂಕಿನ ಯಾವುದೇ ಮೂಲೆಗೆ ಭೇಟಿ ನೀಡಿದರೂ ಸಾರ್ವಜನಿಕರಿಂದ ಅತಿ ಹೆಚ್ಚು ಬರುವುದು ನಿವೇಶನ ಮತ್ತು ಮನೆಗಾಗಿ ಮನವಿ ಪತ್ರಗಳು. ಜನಸ್ಪಂದನ ಸಭೆಗಳಲ್ಲೂ ಇದೇ ಕೂಗು ಕೇಳಿಬರುತ್ತಿತ್ತು,
ಜನರ ಈ ಮೂಲಭೂತ ಬೇಡಿಕೆಯನ್ನು ಈಡೇರಿಸಲು ಈಗಾಗಲೇ ತಹಶೀಲ್ದಾರ್ ಮತ್ತು ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಹೇಳಿದರು.ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ತೊಂಡೇಬಾವಿ ಗ್ರಾಮ ಪಂಚಾಯತಿ ವತಿಯಿಂದ ಶುಕ್ರವಾರ ದಂದು ಆಯೋಜಿಸಲಾಗಿದ್ದ ಅರ್ಹರಿಗೆ ನಿವೇಶನ ಹಂಚಿಕೆಯ ವಿಶೇಷ ಗ್ರಾಮಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಶಕಗಳಿಂದಲೂ ನಿವೇಶನ ವಂಚಿತರಾಗಿರುವ ಕುಟುಂಬಗಳ ಪಟ್ಟಿಯನ್ನು ಸಿದ್ಧಪಡಿಸಿ, ಅವರಿಗೆ ಹಂತ ಹಂತವಾಗಿ ಸೈಟ್ ವಿತರಿಸುವ ಯೋಜನೆಯನ್ನು ತಾಲ್ಲೂಕು ಆಡಳಿತ ರೂಪಿಸಿದೆ, ಬಡ ಕುಟುಂಬಗಳಿಗೆ ಸ್ವಂತ ನಿವೇಶನ ದೊರೆತರೆ, ಅವರು ಸಾಲ ಮಾಡಿಯಾದರೂ ಒಂದು ಸಣ್ಣ ಮನೆ ಅಥವಾ ಗುಡಿಸಲು ನಿರ್ಮಿಸಿಕೊಂಡು ನೆಮ್ಮದಿಯಿಂದ ಬದುಕಬಹುದು ಎಂಬ ಆಶಯ ಹೊಂದಿದ್ದಾರೆ. ಅವರ ಈ ಕನಸನ್ನು ನನಸು ಮಾಡುವುದು ನನ್ನ ಕರ್ತವ್ಯ ಎಂದರು.ಈ ಪಂಚಾಯತಿಯಲ್ಲಿ ಈಗಾಗಲೇ ಆನ್ಲೈನ್ ಮೂಲಕ ಸ್ವೀಕೃತವಾದ 208 ಅರ್ಜಿಗಳಲ್ಲಿ 98 ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಉಳಿದ ಅರ್ಜಿಗಳು ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿದ್ದು, ಅವುಗಳನ್ನು ಮರುಪರಿ ಶೀಲಿಸಲಾಗುವುದು. ಯಾರಾದರೂ ಅರ್ಹರಿದ್ದು ನಿವೇಶನ ವಂಚಿತರಾಗಿದ್ದರೆ, ಅಂತಹವರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.ಮುಂದಿನ ಹಂತದಲ್ಲಿ ಪ್ರತಿಯೊಬ್ಬ ನಿವೇಶನ ರಹಿತ ಬಡವರಿಗೂ ನಿವೇಶನ ನೀಡುವುದಾಗಿ ತಿಳಿಸಿದರು.ಪಕ್ಷಿ ಕೂಡ ಮಳೆ-ಬಿಸಿಲಿನಿಂದ ರಕ್ಷಣೆ ಪಡೆಯಲು ಗೂಡು ಕಟ್ಟಿಕೊಳ್ಳುತ್ತದೆ. ಹಾಗೆಯೇ ಪ್ರತಿಯೊಬ್ಬ ಮನುಷ್ಯನಿಗೂ ಸ್ವಂತ ಮನೆ ಮತ್ತು ನಿವೇಶನ ಎಂಬುದು ಮೂಲಭೂತ ಹಕ್ಕು. ತಾಲ್ಲೂಕಿನ ಪ್ರತಿ ಅರ್ಹ ಕುಟುಂಬಕ್ಕೂ ಸ್ವಂತ ಸೂರು ಕಲ್ಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ,ತಾಲ್ಲೂಕಿನಾದ್ಯಂತ ನಿವೇಶನ ರಹಿತರ ಪಟ್ಟಿಯನ್ನು ಸಿದ್ಧಪಡಿಸಲು ಮತ್ತು ಲಭ್ಯವಿರುವ ಸರ್ಕಾರಿ ಜಾಗಗಳನ್ನು ಗುರುತಿಸಲು ಈಗಾಗಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ನಿವೇಶನಗಳನ್ನು ನೀಡಲು ಸಾಧ್ಯವಿದೆಯೋ ಅಂತಹ ಜಾಗಗಳ ಸರ್ವೇ ನಂಬರ್ಗಳನ್ನು ಗುರುತಿಸಿ, ಅಳತೆ ಕಾರ್ಯ ಮುಗಿಸಿ ವರದಿ ನೀಡುವಂತೆ ತಹಶೀಲ್ದಾರ್ ಹಾಗೂ ಸಂಬAಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಪಾರದರ್ಶಕತೆಯ ಕೊರತೆಯಾಗದಂತೆ ನಿಗಾ ವಹಿಸಲಾಗುವುದು ಎಂದು ಭರವಸೆ ನೀಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಜಿ.ಕೆ.ಹೊನ್ನಯ್ಯ ಮಾತನಾಡಿ, ವಸತಿ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು, ಗ್ರಾಮಸ್ಥರ ಸಮ್ಮುಖದಲ್ಲೇ ಅರ್ಹರನ್ನು ಗುರುತಿಸಿ, ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಇದಕ್ಕಾಗಿ ಕೆಲವು ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಸ್ವಂತ ನಿವೇಶನ ಅಥವಾ ಮನೆ ಇಲ್ಲದವರಿಗೆ ಮೊದಲ ಆದ್ಯತೆ,ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು, ಪಡಿತರ ಚೀಟಿ ಕಡ್ಡಾಯವಾಗಿದ್ದು ಅದರಲ್ಲಿ ಅರ್ಜಿದಾರರ ಹೆಸರಿರಬೇಕು,ಅವಿಭಕ್ತ ಕುಟುಂಬದಲ್ಲಿದ್ದು, ಪ್ರತ್ಯೇಕ ರೇಷನ್ ಕಾರ್ಡ್ ಹೊಂದಿರುವವರಿಗೂ ನಿಯಮಾನುಸಾರ ಅವಕಾಶ ಕಲ್ಪಿಸಲಾಗುವುದು ಹಾಗೂ ಈ ಹಿಂದೆ ಸರ್ಕಾರದ ಯಾವುದೇ ವಸತಿ ಯೋಜನೆಯಡಿ ಸೌಲಭ್ಯ ಪಡೆದಿದ್ದರೆ,ಸದ್ಯ ವಾಸವಿರಲು ಸುಸ್ಥಿತಿಯಲ್ಲಿರುವ ಸ್ವಂತ ಮನೆ ಹೊಂದಿದ್ದರೆ,ಅವಿಭಕ್ತ ಕುಟುಂಬದಲ್ಲಿದ್ದು ಪ್ರತ್ಯೇಕ ಪಡಿತರ ಚೀಟಿ ಹೊಂದಿಲ್ಲದಿದ್ದರೆ,ಅಗತ್ಯ ದಾಖಲೆಗಳನ್ನು ಸಕಾಲಕ್ಕೆ ಒದಗಿಸದಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸದೇ ಅನರ್ಹರು ಸೌಲಭ್ಯ ಪಡೆಯುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.ಇದೇ ವೇಳೆ ಸಭೆಯಲ್ಲಿ ಆಡಳಿತಾಧಿಕಾರಿ ಮುನಿರತ್ನಮ್ಮ, ತಾ.ಪಂ ವ್ಯವಸ್ಥಾಪಕ ಬಾಲಕೃಷ್ಣ, ಪಿಡಿಒ ಪೃಥ್ವಿಭಾ, ಚಿಮುಲ್ ನಿರ್ದೇಶಕ ಜೆ.ಕಾಂತರಾಜ್ ಹಾಗೂ ಫಲಾನುಭವಿಗಳು ಮತ್ತು ಗ್ರಾಮಸ್ಥರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ವಸತಿ ರಹಿತರಿಗೆ ನಿವೇಶನ ಹಂಚಿಕೆ ನಮ್ಮ ಮೊದಲ ಆದ್ಯತೆ: ಶಾಸಕ ಪುಟ್ಟಸ್ವಾಮಿಗೌಡ



