ಬೆಂಗಳೂರು: ರಾಜಗೋಪಾಲ್ ನಗರ ಪೊಲೀಸರು ಮನೆ ಕಳ್ಳತನ ಮಾಡುತ್ತಿದ್ದ ಮಹಿಳೆ ಸೇರಿದಂತೆ ಆರು ಜನ ಆರೋಪಿಗಳನ್ನು ಬಂಧಿಸಿರುತ್ತಾರೆ.
ಡಿಸೆಂಬರ್ ತಿಂಗಳಲ್ಲಿ ಮನೆ ಕಳ್ಳತನ ಮಾಡಿರುತ್ತಾರೆಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ
ಆರೋಪಿಗಳಾದ ಸುಧಾ, ಕಾವ್ಯ, ಲಕ್ಷ್ಮಮ್ಮ, ಅಭಿಷೇಕ್, ಸಂಜಯ್, ಮತ್ತು ಮಣಿ ಕಳ್ಳತನ ಮಾಡಿದ್ದಾರೆ. ಎನ್ನಲಾಗಿದ್ದ 22 ಲಕ್ಷ ಬೆಲೆಬಾಳುವ ಚಿನ್ನಾಭರಣ ಮತ್ತು ಒಂದುವರೆ ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.ಬಂಧತಿ ಆರೋಪಿಗಳು ರಾಜಗೋಪಾಲ ನಗರ ನಿವಾಸಿಯಾದ ಗೀತಾ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದರು.