ಹೊಸದಿಲ್ಲಿ: ಕುಸ್ತಿಪಟು ಬಜರಂಗ್ ಪೂನಿಯ ಅವರನ್ನು ರಾಷ್ಟ್ರೀಯ ಉದ್ದೀಪನಾ ನಿಗ್ರಹ ಸಂಸ್ಥೆ (ನಾಡಾ) ಮತ್ತೆ ಅಮಾನತುಗೊಳಿಸಿದೆ. ಉದ್ದೀಪನಾ ಪರೀಕ್ಷೆಗೆ ಮೂತ್ರದ ಮಾದರಿ ನೀಡಲು ನಿರಾಕರಿಸಿದ್ದ ಆರೋಪ ದಡಿಯಲ್ಲಿ ಬಜರಂಗ್ ಅವರನ್ನು ಕಳೆದ ಎಪ್ರಿಲ್ನಲ್ಲಿ ನಾಡಾ ಮೊದಲ ಬಾರಿ ಅಮಾನತುಗೊಳಿಸಿತ್ತು.
ಬಳಿಕ ಎಡಿಡಿಪಿ ಈ ಅಮಾನತನ್ನು ತೆಗೆದುಹಾಕಿತ್ತು. ಆದರೆ ಈಗ, ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಬಜರಂಗ್ ವಿರುದ್ಧ ಉದ್ದೀಪನಾ ನಿಯಮ ಉಲ್ಲಂಘಿ ಸಿರುವ ಆರೋಪ ಹೊರಿಸಿರುವ ನಾಡಾ, ಅವರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದೆ.