ಕನಕಪುರ: ಕುಟುಂಬ ಕಲಹದಿಂದ ಬೇಸತ್ತು ತನ್ನ ಪತ್ನಿ ಯನ್ನೇ ಕೊಲೆ ಮಾಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಮುದುವಾಡಿ ಗೇಟ್ ಬಳಿ ನಡೆದಿದೆ.
ತಾಲ್ಲೂಕಿನ ಕೊಟ್ಟಗಾಳು ಗ್ರಾ. ಪಂಚಾಯಿತಿ ವ್ಯಾಪ್ತಿಯ ಪಿಚ್ಚನಕೆರೆ ಗ್ರಾಮದ ಮಂಜುಳಾ ಕೊಲೆಯಾದ ಮಹಿಳೆ ಯಾಗಿದ್ದು ರಾಮನಗರ ತಾಲ್ಲೂಕಿನ ವಡ್ಡರದೊಡ್ಡಿಯ ಆಕೆಯ ಪತಿ ರಾಜೇಶ್ ಎಂಬಾತ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಕೌಟುಂಬಿಕ ಕಲಹದಿಂದ ಬೇಸತ್ತ ದಂಪತಿಗಳಿಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಪತಿ ರಾಜೇಶ್ ಅಗಾಗಾ ಬಂದು ಮಂಜುಳಾಗೆ ಕಿರುಕುಳ ನೀಡುತ್ತಿದ್ದು ಭಾನುವಾರ ಬೆಳಿಗ್ಗೆ ದೊಡ್ಡಮುದುವಾಡಿ ಗೇಟ್ ನ ಬಸ್ ನಿಲ್ದಾಣದ ಬಳಿ ಬಸ್ ಕಾಯುತ್ತಾ ನಿಂತಿದ್ದ ಪತ್ನಿ ಮಂಜುಳ ಮೇಲೆ ಪತಿ ರಾಜೇಶ್ ಏಕಾಏಕಿ ರಾಡ್ ನಿಂದ ಹಲ್ಲೆಯನ್ನು ಮಾಡಿ ಪರಾರಿಯಾಗಿದ್ದಾನೆ,
ತಲೆಗೆ ಏಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವದಿಂದ ಮಂಜುಳ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಕನಕಪುರ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ದುರ್ದೈವಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಕೊಲೆ ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.