ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ಸಿಂಗಪುರದಲ್ಲಿ ಆಯೋಜಿಸಿರುವ “ಎರಡನೇ ವಿಶ್ವ ಕನ್ನಡ ಹಬ್ಬ”ಕ್ಕೆ ಭರತನಾಟ್ಯ ಕಲಾವಿದರಾದ ಕುಮಾರಿ ರಂಜನಾ ಹಾಗೂ ಕುಮಾರಿ ಸೃಷ್ಟಿ ಎಸ್ ಜೋಶಿ ರವರು ಆಯ್ಕೆಯಾಗಿದ್ದು, ವಿಶ್ವ ಕನ್ನಡ ಹಬ್ಬದ ಸರ್ವಾಧ್ಯಕ್ಷರಾದ ಡಾ. ಸಿ. ಸೋಮಶೇಖರ್ ರವರು ಈ ಕಲಾವಿದರಿಗೆ ಆದೇಶ ಪತ್ರ ನೀಡಿ ಅಭಿನಂದನೆಗಳನ್ನು ತಿಳಿಸಿದರು.
ಕುಮಾರಿ ರಂಜನಾ ಹಾಗೂ ಕುಮಾರಿ ಸೃಷ್ಟಿ ಎಸ್ ಜೋಶಿ ರವರು ಈಗಾಗಲೇ ಭರತನಾಟ್ಯ ಕಲಾವಿದರಾಗಿ ಉನ್ನತ ವೇದಿಕೆಗಳಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಂಚಿಕೊಂಡ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇವರ ಪ್ರತಿಭೆಯನ್ನು ಗುರುತಿಸಿ 2ನೇ ವಿಶ್ವ ಕನ್ನಡ ಹಬ್ಬದಲ್ಲಿ ಭರತನಾಟ್ಯ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಇವರಿಗೆ ಶುಭವಾಗಲಿ ಎಂದು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಶಿವಕುಮಾರ್ ನಾಗರ ನವಿಲೆಯವರು ತಿಳಿಸಿದರು. ಈ ಸಂದರ್ಭದಲ್ಲಿ ಕಾವ್ಯರವರು ಜೊತೆಗಿದ್ದರು.