ನವದೆಹಲಿ: ಜನವರಿ 26 ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ಪರೇಡ್ನಲ್ಲಿ ದೇಶದ ಸೈನ್ಯ ಬಲ ಮತ್ತು ಸಂಸ್ಕೃತಿ ಅನಾವರಣವಾಗುತ್ತದೆ.
ದೇಶದ ವಿವಿಧ ರಾಜ್ಯಗಳಿಂದ ಬರುವ ಟ್ಯಾಬ್ಲೋಗಳು ಪರೇಡ್ನಲ್ಲಿ ಭಾಗವಹಿಸುತ್ತವೆ. ಈ ಬಾರಿಯ ಗಣರಾಜ್ಯಜ್ಯೋತ್ಸದಲ್ಲಿ ಕರ್ನಾಟಕದಿಂದ “ಬ್ರ್ಯಾಂಡ್ ಬೆಂಗಳೂರು” ಸ್ತಬ್ಧಚಿತ್ರ ಭಾಗಿಯಾಗಲಿದೆ.
ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ರಾಜ್ಯ ರಾಜಧಾನಿಯ `ಬ್ರ್ಯಾಂಡ್ ಬೆಂಗಳೂರು’ ವೈಭವ ಅನಾವರಣಗೊಳ್ಳಲಿದೆ.
ಬ್ರ್ಯಾಂಡ್ ಬೆಂಗಳೂರು ಬಿಂಬಿಸುವ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಯ್ಕೆ ಸಮಿತಿ ಒಪ್ಪಿಗೆ ನೀಡಿದೆ. ಹೀಗಾಗಿ ರಾಜ್ಯ ವಾರ್ತಾ ಇಲಾಖೆಯಿಂದ `ಬ್ರಾಂಡ್ ಬೆಂಗಳೂರು’ ಟ್ಯಾಬ್ಲೋ ರಚನೆ ಕಾರ್ಯ ಆರಂಭವಾಗಿದೆ.
ಗಣರಾಜ್ಯೋತ್ಸವಕ್ಕೆ ರಾಜ್ಯದ ಸ್ತಬ್ಧಚಿತ್ರ ಆಯ್ಕೆಯಾದರೂ ಪರೇಡ್ನಲ್ಲಿ ಸಾಗುವುದು ಅನುಮಾನವಾಗಿದೆ. ಕೆಂಪುಕೋಟೆ ಆವರಣದಲ್ಲಿ ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಸುವ ಸಾಧ್ಯತೆ ಇದೆ.