ಬೆಂಗಳೂರು: ರಾಜ್ಯದ ಜನತೆಗೆ ಬಹಳ ದಿನಗಳಿಂದ ಕಾಡುತ್ತಿದ್ದ ಸಿಎಂ ದೆಹಲಿ ಭೇಟಿ ಕುತೂಹಲ ಕೊನೆಗೂ ಕೂಡಿಬಂದಿದೆ. ಮುಖ್ಯಮಂತ್ರಿಯವರನ್ನು ಕೇಳಿದಾಗಲೆಲ್ಲಾ ವರಿಷ್ಠರು ಕರೆದರೆ ದೆಹಲಿಗೆ ಹೋಗುವೆ ಎಂದು ಹೇಳುತ್ತಿದ್ದರು. ಇದೀಗ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವರಿಷ್ಠರು ಮುಖ್ಯಮಂತ್ರಿಯವರನ್ನು ನಾಳೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ವರಿಷ್ಠರ ಬುಲಾವ್ ಮೇರೆಗೆ ಇಂದು ರಾತ್ರಿ 7 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಮಾತುಕತೆ ಸಂದರ್ಭದಲ್ಲಿ ಯಾವ ವಿಷಯ ಚರ್ಚೆಗೆಬರುತ್ತದೆ ಎಂದು ತಿಳಿದುಬಂದಿಲ್ಲ. ನಾಯಕತ್ವ ಬದಲಾವಣೆಯೋ, ಸಂಪುಟ ವಿಸ್ತರಣೆಯೋ, ರಾಜ್ಯಸಭಾ ಹಾಗೂ ವಿಧಾನಪರಿಷತ್ ಚುನಾವಣೆ ವಿಷಯವೋ ಎಂಬುದು ತಿಳಿದುಬಂದಿಲ್ಲ.
ಒಂದು ಹಂತದಲ್ಲಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಯಾವುದೇ ಊಹಾಪೋಹಾಗಳೀಗೆ ಎಡೆಮಾಡಿಕೊಡಬೇಡಿ. ಸುಳ್ಳು ಸುದ್ದಿಗಳಿಗೆ ಆಸ್ಪದ ಕೊಡಬೇಡಿ. ಈಗಾಗಲೇ ರಾಜ್ಯ ಸಭೆ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ. ವಿಧಾನಪರಿಷತ್ ಚುನಾವಣೆಯೂ ನಡೆಯಲಿದೆ. ಇವುಗಳ ಸಂಬಂಧ ಚರ್ಚಿಸಲು ಸಿಎಂ ದೆಹಲಿಗೆ ಹೋಗುತ್ತಿದ್ದಾರೆ. ಎಂದು ತಿಳಿಸಿದದಾರೆ. ಒಟ್ಟಾರೆ ನಾಳೆ ಮುಖ್ಯಮಂತ್ರಿ ದೆಹಲಿ ಭೇಟಿ ತೀವ್ರ ಕುತೂಹಲಕ್ಕೆ ಎಡೆಮಾಡಕೊಡಲಾಗಿದೆ.



