ಕೆ.ಆರ್.ನಗರ: 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಲಯನ್ಸ್ ಪ್ರೌಢಶಾಲೆ (ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ) ವಿಭಾಗದಲ್ಲಿ ಶೇ.100% ರಷ್ಟು ಫಲಿತಾಂಶ ಬಂದಿದ್ದು ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮುಖ್ಯಶಿಕ್ಷಕ ಲೋಕೇಶ್ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.ಪಟ್ಟಣದ ಲಯನ್ಸ್ ವಿದ್ಯಾ ಸಂಸ್ಥೆಯ ಆವರಣದಲ್ಲಿ 2025-26ನೇ ಸಾಲಿನಲ್ಲಿ ಒಟ್ಟು 60 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು ಹರ್ಷವರ್ಧನ (625/683) ಅಂಕಗಳಿಸಿದ ಸ್ಕೂಲ್ ಟಾಪರ್ ಸ್ಥಾನದಲ್ಲಿದ್ದಾನೆ ಎರಡನೇ ಟಾಪರ್ಆಗಿ ಹಮಾನಿಗೌಡ (580/625) 8 ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಏಕ್ರಾಗತೆಯಿಂದ ಮತ್ತು ದಿನನಿತ್ಯ ಶ್ರೀಭಗೀರಥ ಪ್ರಯತ್ನದಂತೆ ಕಠಿಣ ಅಭ್ಯಾಸ ಮಾಡಿದರೆ ನಿಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಗಲಿದೆ ಎಂದರಲ್ಲದೇ ನಿಮ್ಮ ಮುಂದಿನ ಉನ್ನತ ಶಿಕ್ಷಣದ ಆಯ್ಕೆ ನಿಮ್ಮದಾಗಿದ್ದು ಉತ್ತಮ ಶಿಕ್ಷಣ ಪಡೆದು ದೇಶಕ್ಕೆ ಮತ್ತು ಸಮಾಜಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು. ಈ ಬಾರಿ ಶೇ.100 ರಷ್ಟು ಫಲಿತಾಂಶ ತಂದು ಕೊಡಲು ಶ್ರಮಿಸಿದ್ದ ಸಂಸ್ಥೆಯ ಶಿಕ್ಷಕರುಗಳು, ಆಡಳಿತ ಮಂಡಳಿ ಮತ್ತು ಎಲ್ಲಾ ಪೋಷಕರು ಸಹಕಾರದಿಂದ ನಮ್ಮ ಗುರಿ ಸಾಧಿಸಲು ಸಾಧ್ಯವಾಗಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಎಂ.ಕೆ.ರುಕ್ಮೀಣಿ, ಯೋಗಾನಂದ.ಎಸ್. ಬಿ.ಎಸ್.ಹರೀಶ್, ಎ.ವಿ.ಅನಿಲ್ಕುಮಾರ್, ಜಿ.ರಮೇಶ್, ಎಲ್.ಎಸ್.ಲೋಕೇಶ್, ಸಿ.ರಾಮೇಗೌಡ,ಎನ್.ಸೌಮ್ಯ, ಜಯಶಂಕರ್ ಎಂ.ಎ(ಮೊಗಣ್ಣ), ಮಾಣಿಕ್ಯ, ರಮ್ಯಾ, ಜ್ಯೋತಿ, ಯೋಗೇಶ್, ಅರುಣ್ಅಭಿ, ವನಾಜಾಕ್ಷಿ, ಸ್ವಾತಿ, ದೈಹಿಕ ಹಿರಿಯ ಶಿಕ್ಷಕ ಟಿ.ಪಿ.ಸುರೇಂದ್ರ, ಕೆ.ಆರ್.ವಿನುತ, ಬೀಬಿಜಾನ್, ಫರೀನತಾಜ್, ಪಾರ್ವತಿ,ವಿದ್ಯಾರ್ಥಿಗಳು ಶೇ.100 ರಷ್ಟು ಫಲಿತಾಂಶ ಗಳಿಸಿದಕ್ಕೆ ವಿದ್ಯಾರ್ಥಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು, ಈ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.
ಲಯನ್ಸ್ ಪ್ರೌಢಶಾಲೆ (ಕನ್ನಡ ಮತ್ತು ಆಂಗ್ಲ ಮಾಧ್ಯಮ) ಎಲ್ಲಾ ವಿದ್ಯಾರ್ಥಿಗಳು ಶೇ.100% ಫಲಿತಾಂಶ ಬಂದಿದ್ದು ಬಹಳ ಸಂತೋಷವಾಗಿದ್ದು, ಇದಕ್ಕೆ ಸಹಕರಿಸಿದ ಎಲ್ಲಾ ಶಿಕ್ಷಕರುಗಳ ಜತೆಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಸಹಕಾರದಿಂದ ಸಾಧ್ಯವಾಗಿದ್ದು ಉತ್ತೀರ್ಣರಾದ ಎಲ್ಲ ಮಕ್ಕಳಿಗೆ ಅಭಿನಂದನೆ ಸಲ್ಲಿಸಲಾಗಿದೆ.
-ಜಿ.ರಮೇಶ್, ಮುಖ್ಯಶಿಕ್ಷಕರು, ಲಯನ್ಸ್ ಪ್ರೌಢಶಾಲೆ
2025-26ನೇ ಸಾಲಿನಲ್ಲಿ ಲಯನ್ಸ್ ಪ್ರೌಢಶಾಲೆ (ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ) ಶೇ.100 ರಷ್ಟು ಫಲಿತಾಂಶ ಗಳಿಸಿರುವುದು ಶ್ಲಾಘನೀಯವಾಗಿದೆ. ಲಯನ್ಸ್ ಪ್ರೌಢಶಾಲೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ 2025-26ನೇ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ.
-ಕೀರ್ತಿಕುಮಾರ್, ಕೆ.ಆರ್.ನಗರ.
ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಕೆ



