ನೆಲಮಂಗಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೆತ್ರದಲ್ಲಿ ಬಿಜೆಪಿ ಪಕ್ಷ ದಿಂದ ಅತ್ಯಾಧಿಕಾ ಮತಗಳಿಂದ ಡಾ.ಕೆ ಸುಧಾಕರ್ ಜಯಗಳಿಸಿದ ಇನ್ನೆಲೆ ನೆಲಮಂಗಲ ತಾಲ್ಲೂಕಿನ ಜೆಡಿಎಸ್ ಹಾಗೂ ಬಿಜೆಪಿಯ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿ ತಾಲ್ಲೂಕು ಕಚೇರಿ ಮುಂಭಾಗ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಸಂದರ್ಭದಲ್ಲಿ ಮಾಜಿ ಶಾಸಕ ಡಾ.ಕೆ. ಶ್ರೀನಿವಾಸ್ ಮೂರ್ತಿ ಮಾತನಾಡಿ ನಮ್ಮ ಎರಡು ಪಕ್ಷಗಳ ನಿರೀಕ್ಷೆಯಂತೆ ಡಾ.ಕೆ. ಸುಧಾಕರ್ ರವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿದ ನೆಲಮಂಗಲ ಕ್ಷೇತ್ರದ ಜನತೆಯ ಪಾದಗಳಿಗೆ ನಮಸ್ಕರಿಸುತ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಮೋದಿಜಿ ಸರ್ಕಾರ ಏನು ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ ಏನ್ ಮಾಡ್ತಿದೆ ಎನ್ನುವುದು ಜನಗಳಿಗೆ ಅರ್ಥವಾಗಿದೆ ಡಾ.ಕೆ. ಸುಧಾಕರ್ ರವರು ಸಚಿವರಾಗಿದ್ದಾಗ ಮಾಡಿದಂತ ಕೆಲಸ ಕಾರ್ಯಗಳನ್ನು ನೆನೆಸಿ ಕೊಂಡು ಅತ್ಯಧಿಕ ಮತಗಳನ್ನು ನೀಡಿ ಗೆಲ್ಲಿಸಿದಾರೆ ಜನ ಕೊಟ್ಟಂತ ತೀರ್ಪು ನಮ್ಮಪರ ಇದೆ ಕಾಂಗ್ರೆಸ್ಗೆ ಜನ ಉತ್ತರ ಕೊಟ್ಟಿದ್ದಾರೆ ಮುಂದಿನ ದಿನಗಳಲ್ಲಿ ಸುಧಾಕರ್ ನೇತೃತ್ವದಲ್ಲಿ ನೆಲಮಂಗಲ ಕ್ಷೇತ್ರವನ್ನು ಅಭಿವೃದ್ಧಿ ಮಾಡುವಲ್ಲಿ ಶ್ರಮವಹಿಸುತ್ತೇವೆ ಎಂದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌದರಿ ಮಾತನಾಡಿ ಚುನಾವಣೆ ಪ್ರಚಾರ ಸಂದರ್ಭದಲ್ಲಿ 25000ಲೀಡ್ ಕೊಡುವುದಾಗಿ ಹೇಳಿದ್ದೆ ಆದರೆ ನೆಲಮಂಗಲ ಜನತೆ ನಾವು ಇಟ್ಟ ನಿರೀಕ್ಷೆಗು ಮೀರಿ 33255 ಮತಗಳ ಲೀಡ್ ಕೊಡುವ ಮೂಲಕ ಡಾ.ಕೆ ಸುಧಾಕರ್ರವರನ್ನು ಜಯಗಳಿಸಿರುವುದು ಸಂತಸ ತಂದಿದೆ. ಗೇಲಿವಿಗಾಗಿ ಸಹಕಾರ ನೀಡಿದ ಎರಡು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರುಗಳಿಗೆ ಮತ್ತು ತಾಲ್ಲೂಕಿನ ಜನತೆಗೆ ಅಭಿನಂದನೆ ತಿಳಿಸುತ್ತೆನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ ವಿ ನಾಗರಾಜ್, ಜಿಲ್ಲಾಧ್ಯಕ್ಷ ರಾಮಕೃಷ್ಣಯ, ಬಿಜೆಪಿ ಮುಖಂಡ ಸಪ್ತಗಿರಿ ಶಂಕರ್ ನಾಯಕ್, ಬೈರೇಗೌಡ, ಕನಕರಾಜ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಕಾರ್ಯಕರ್ತರು ಭಾಗಿಯಾಗಿದರು.