ಬೆಂಗಳೂರು: ಪಕ್ಷದಲ್ಲಿ ತಮ್ಮ ಆಪ್ತರ ವಿರುದ್ಧ ಪ್ರಮುಖರು ಕ್ರಮ ಜರುಗಿಸುತ್ತಿದ್ದರೂ ಅವರ ರಕ್ಷಣೆಗೆ ಮುಖ್ಯಮಂತ್ರಿಯವರು ಬರುತ್ತಿಲ್ಲ ಎಂದು ಮುಖ್ಯಮಂತ್ರಿಯವರ ಆಪ್ತರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರ ಕೆಲವು ಆಪ್ತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ದಾವಣಗೆರೆ ಉಪಚುನಾವಣ ನಂತರ ಮುಸ್ಲಿಂನ ಕೆಲ ನಾಯಕರ ವಿರುದ್ಧ ಶಿಸ್ತು ಕ್ರಮದ ಹೆಸರಿನಲ್ಲಿ ಅವರನ್ನು ಪಕ್ಷದಿಂದ ಅಮಾನತು ಹಾಗೂ ಮತ್ತಿತರ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಕ್ರಮಕ್ಕೆ ಒಳಗಾಗುತ್ತಿರುವವರು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರು. ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸಿದವರ ವಿರುದ್ಧವೇ ಕ್ರಮ ಜರುಗಿಸಲಾಗುತ್ತಿದೆ. ಕ್ರಮಕ್ಕೆ ಒಳಗಾಗುತ್ತಿರುವವರು ಬಹುತೇಕ ಸಿಎಂ ಸಿದ್ದರಾಮಯ್ಯ ಅವರ ನಿಷ್ಠರೇ ಆಗಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಿದಾಗ ಸಿಎಂ ಅವರು ರಕ್ಷಣೆಗೆ ಬರುತ್ತಿಲ್ಲ ಅವರ ಪರ ಗಟ್ಟಿಯಾಗಿ ನಿಲ್ಲುತ್ತಿಲ್ಲ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಕ್ರಮಕ್ಕೆ ಒಳಗಾಗುತ್ತಿರುವವರ ಪರವಾಗಿ ಸಿದ್ದರಾಮಯ್ಯ ನಿಲ್ಲುತ್ತಿಲ್ಲ. ನಿಷ್ಠರ ಕಷ್ಟ ಕಾಲದಲ್ಲಿ ಅವರ ನೆರವಿಗೆ ಬರುತ್ತಿಲ್ಲ. ಸಿದ್ದರಾಮಯ್ಯ ಯಾಕೆ ಹೀಗೆ ಮಾಡುತ್ತಿದ್ದಾರೆ. ತಟಸ್ಥ ದೋರಣೆ ಯಾಕೆ, ದೊರೆ ಮಾಡಿದ್ದಕ್ಕೆ ದಂಡ ಇಲ್ಲ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.ಒಟ್ಟಾರೆ ಕಷ್ಟ ಕಾಲದಲ್ಲಿ ತಮ್ಮ ನೆರವಿಗೆ ಬಾರದ ಮುಖ್ಯಮಂತ್ರಿಯವರ ಕ್ರಮದ ವಿರುದ್ಧ ಬಹುತೇಕ ಕಾಂಗ್ರೆಸ್ನ ಅವರ ಸಮುದಾಯದ ಮುಖಂಡರು ತಮ್ಮ ಅತೃಪ್ತಿಯನ್ನು ಹೊರಗೆಳೆದಿದ್ದಾರೆ.
ಸಿಎಂ ಆಪ್ತರ ಅಸಮಾಧಾನ ಪಕ್ಷದಲ್ಲಿ ಆಪ್ತರ ರಕ್ಷಣೆಗೆ ಬಾರದ ಕ್ರಮಕ್ಕೆ ತೀವ್ರ ಮುನಿಸು



