ಬೆಂಗಳೂರು: ಇಂದು ಬೆಳಿಗ್ಗೆ 6.30ಕ್ಕೆ ಉಪಮುಖ್ಯಂAತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರಿAದ ಅಸ್ಸಾಂಗೆ ತೆರಳಿದ್ದಾರೆ.
ಅಸ್ಸಾಂಗೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮಧ್ಯಾಹ್ನ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಲಂಚ್ ಮೀಟಿಂಗ್ ಮಾಡುತ್ತೇನೆ. ನಮ್ಮ ಅಭ್ಯರ್ಥಿಗಳನ್ನ ಭೇಟಿ ಮಾಡಿ ಚರ್ಚೆ ಮಾಡ್ತೀನಿ. ನಮ್ಮ ಕಾರ್ಯಕರ್ತರು ಕಷ್ಟಪಟ್ಟಿದ್ದಾರೆ, ಅವರಿಗೆ ಗೆಲುವಿನ ವಿಶ್ವಾಸವಿದೆ. ನನಗೆ ಯಾವುದೇ ಚುನಾವಣಾ ಸಮೀಕ್ಷೆಗಳ ಬಗ್ಗೆ ನಂಬಿಕೆಯಿಲ್ಲ. ನಮ್ಮ ಪರವಾದ ಸಮೀಕ್ಷೆ ಬಂದ್ರೂ ನಾನು ನಂಬಲ್ಲ. ಈ ಬಾರಿ ಬದಲಾವಣೆ ಆಗುವ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಭಾರೀ ಮಳೆ ಹಿನ್ನೆಲೆ ಈಗಾಗಲೇ ಅಧಿಕಾರಿಗಳ ಜೊತೆಗೆ ಮೀಟಿಂಗ್ ಮಾಡಿದ್ದೇನೆ. ಮರಗಳ ಕೊಂಬೆಗಳನ್ನ ಕಟ್ ಮಾಡಲು ಹೇಳಿದ್ದೇನೆ. ನಿನ್ನೆ ಸಹ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾಹಿತಿ ನೀಡಿದ್ದೇನೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.
ಅಸ್ಸಾಂಗೆ ಹಾರಿದ ಡಿಕೆಶಿ



