ಖಾಲಿ ಹೊಟ್ಟೆಯಲ್ಲಿ ಈ ೩ ಆಹಾರಗಳನ್ನು ತಿನ್ನಬೇಡಿ! ಬೆಳಗಿನ ಉಪಾಹಾರ ದಿನದ ಪ್ರಮುಖ ಊಟ ಎಂದು ಪರಿಗಣಿಸಲಾಗಿದೆ. ಇದು ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ. ಜೊತೆಗೆ ದಿನವಿಡೀ ನೀವು ಚೈತನ್ಯದಿಂದ ಇರಲು ನೆರವಾಗುತ್ತದೆ. ಆದರೂ, ಬಹುತೇಕರು ತಮ್ಮ ದಿನವನ್ನು ಅನಾರೋಗ್ಯಕರ ಆಹಾರಗಳೊಂದಿಗೆ ಆರಂಭಿಸುತ್ತಾರೆ. ಖಾಲಿ ಹೊಟ್ಟೆಯಲ್ಲಿ ಸೇವಿಸುವ ಆಹಾರಗಳು ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಈ ಸಮಯದಲ್ಲಿ, ಸರಿಯಾದ ಆಹಾರಗಳ ಆಯ್ಕೆ ಅತ್ಯಗತ್ಯ. ಈ ಲೇಖನದಲ್ಲಿ, ಖಾಲಿ ಹೊಟ್ಟೆಯಲ್ಲಿ ಏಕೆ ಕೆಲವು ಆಹಾರಗಳನ್ನು ಸೇವಿಸಬಾರದು ಮತ್ತು ಅವುಗಳಿಗೆ ಪರ್ಯಾಯಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ.
೧. ಚಹಾ, ಕಾಫಿ ಮತ್ತು ಹಾಲು ಇವು ಅತಿ ಆಮ್ಲೀಯ ಪದಾರ್ಥಗಳು. ಬೆಳಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವುದು ಹಲವರ ನಿತ್ಯದ ಅಭ್ಯಾಸ. ಆದರೆ, ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಕಾಫಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಕಾಫಿ ಮತ್ತು ಚಹಾದಲ್ಲಿರುವ ಆಮ್ಲೀಯತೆ ಹೊಟ್ಟೆಯಲ್ಲಿ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಎದೆ ಉರಿ, ಅಜೀರ್ಣ ಮತ್ತು ದೀರ್ಘಕಾಲದಲ್ಲಿ ಅಲ್ಸರ್ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಅದೇ ರೀತಿ, ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚುತ್ತದೆ. ಇದು ಕೆಲವರಲ್ಲಿ ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಇತರ ಜೀರ್ಣ ಸಮಸ್ಯೆಗಳನ್ನು ಉಂಟುಮಾಡಬಹುದು. ಪರ್ಯಾಯ ಏನು? ಬೆಚ್ಚಗಿನ ನೀರು, ಶುಂಠಿ ನೀರು ಅಥವಾ ತೆಂಗಿನ ನೀರು ಸೇವಿಸುವುದರೊಂದಿಗೆ ದಿನವನ್ನು ಆರಂಭಿಸಬಹುದು. ಇದು ದೇಹವನ್ನು ಹೈಡ್ರೇಟ್ ಮಾಡಿ, ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಪೋಷಕಾಂಶ ಮತ್ತು ನಾರಿನಂಶಗಳಿAದ ಸಮೃದ್ಧವಾಗಿರುವ ರಾಗಿ ಅಂಬಲಿ ಕೂಡ ಉತ್ತಮ ಉಪಾಹಾರವಾಗಿದೆ.
೨. ಹುರಿದ ತಿಂಡಿಗಳು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವ ಹುರಿದ ತಿಂಡಿಗಳು (ಪೂರಿ, ವಡೆ, ಗೋಲಿಬಜ್ಜೆ, ಮಂಗಳೂರು ಬನ್ಸ್). ಬೆಳಗಿನ ಉಪಾಹಾರಕ್ಕೆ ಪೂರಿ, ವಡೆ, ಗೋಲಿಬಜ್ಜೆ ಮತ್ತು ಬನ್ಸ್ನಂತಹ ಹುರಿದ ತಿಂಡಿಗಳು ರುಚಿಕರವಾಗಿ ಕಂಡರೂ, ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚಿನ ಶ್ರಮ ನೀಡಬೇಕಾ ಗುತ್ತದೆ. ಅಧಿಕ ಎಣ್ಣೆ ಮತ್ತು ಕೊಬ್ಬಿನ ಪದಾರ್ಥಗಳನ್ನು ಜೀರ್ಣಿಸಲು ಹೊಟ್ಟೆಗೆ ಕಷ್ಟವಾಗಿ, ಆಮ್ಲೀಯತೆ ಮತ್ತು ದಿನವಿಡೀ ಆಲಸ್ಯದ ಭಾವನೆ ಕಾಡಬಹುದು. ಏನು ಪರ್ಯಾಯ? ಇಡ್ಲಿ, ಆವಿಯಲ್ಲಿ ಬೇಯಿಸಿದ ದೋಸೆ, ರಾಗಿ ದೋಸೆ ಅಥವಾ ಉಪ್ಪಿಟ್ಟಿನಂತಹ ಆಹಾರಗಳು ಸುಲಭವಾಗಿ ಜೀರ್ಣವಾಗಿ ದೇಹಕ್ಕೆ ಶಕ್ತಿ ನೀಡುತ್ತವೆ. ಇವುಗಳಲ್ಲಿ ಕೊಬ್ಬಿನಾಂಶ ಕಡಿಮೆ ಇರುವುದರಿಂದ ಆರೋಗ್ಯಕ್ಕೂ ಉತ್ತಮ.
೩. ಬಿಸ್ಕಟ್, ಬ್ರೆಡ್, ಜ್ಯಾಮ್ & ಬೇಕರಿ ಪದಾರ್ಥ ಇವು ಪೋಷಕಾಂಶ ರಹಿತ ಸಂಸ್ಕರಿಸಿದ ಆಹಾರಗಳು. ಕೆಲವರು ಸುಲಭದ ಮಾರ್ಗವಾಗಿ ಬಿಸ್ಕತ್, ಬ್ರೆಡ್ ಅಥವಾ ಜ್ಯಾಮ್ನೊಂದಿಗೆ ತಮ್ಮ ದಿನ ಆರಂಭಿಸುತ್ತಾರೆ. ಆದರೆ, ಈ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೈದಾ ಮತ್ತು ಸಕ್ಕರೆ ಇರುತ್ತದೆ. ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ತಕ್ಷಣ ಏರಿಕೆ ಕಂಡರೂ, ನಂತರ ಶಕ್ತಿಯ ಮಟ್ಟವು ದಿಢೀರ್ ಕುಸಿಯುತ್ತದೆ. ಇದರಿಂದ ಬೇಗನೆ ಆಯಾಸ ಮತ್ತು ಹಸಿವು ಕಾಣಿಸಿಕೊಳ್ಳಬಹುದು. ಈ ಆಹಾರಗಳಲ್ಲಿ ಪೋಷಕಾಂಶಗಳ ಕೊರತೆಯೂ ಇರುತ್ತದೆ. ಪರ್ಯಾಯ ಆಹಾರಗಳು ನೀವು ಸಂಸ್ಕರಿಸದ ಸಂಪೂರ್ಣ ಧಾನ್ಯದ ರೊಟ್ಟಿ, ಸಿರಿಧಾನ್ಯದ ರೊಟ್ಟಿ, ಅಥವಾ ಹಣ್ಣುಗಳನ್ನು ಸೇವಿಸುವುದು ಉತ್ತಮ. ಹಣ್ಣುಗಳು ವಿಟಮಿನ್ಗಳು ಮತ್ತು ನಾರಿನಂಶಗಳಿAದ ಸಮೃದ್ಧವಾಗಿದ್ದು, ಸ್ಥಿರ ಶಕ್ತಿಯನ್ನು ಒದಗಿಸುತ್ತವೆ.
ಇದು ನಿಮ್ಮನ್ನು ದಿನವಿಡೀ ಚಟುವಟಿಕೆಯಿಂದ ಇರಿಸಲು ಸಹಾಯಕವಾಗಿದೆ. Weekly Horoscope: ಅಕ್ಟೋಬರ್ ೧೨ ರಿಂದ ಅಕ್ಟೋಬರ್ ೧೮ರ ವಾರ ಭವಿಷ್ಯ, ಯಾರಿಗೆಲ್ಲಾ ಒಲಿದಿದೆ ಅದೃಷ್ಟ ನಿಮ್ಮ ದೇಹವು ರಾತ್ರಿಯಿಡೀ ವಿಶ್ರಾಂತಿ ಪಡೆದ ನಂತರ, ಬೆಳಗ್ಗೆ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಿದ್ಧವಾಗಿರುತ್ತದೆ. ಆದ್ದರಿಂದ, ನಿಮ್ಮ ದಿನವನ್ನು ಸರಿಯಾದ ಆಹಾರದಿಂದ ಪ್ರಾರಂಭಿಸುವುದು ಮುಖ್ಯ. ಈ ಮೇಲೆ ತಿಳಿಸಿದ ಅನಾರೋಗ್ಯಕರ ಆಹಾರಗಳನ್ನು ತಪ್ಪಿಸಿ. ಆರೋಗ್ಯಕರ ಪರ್ಯಾಯಗಳನ್ನು ಆಯ್ಕೆ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸಿ, ಶಕ್ತಿ ಮಟ್ಟ ಹೆಚ್ಚಿ, ಒಟ್ಟಾರೆ ಆರೋಗ್ಯ ಉತ್ತಮಗೊಳ್ಳುತ್ತದೆ.



