ಬೆಂಗಳೂರು: ಬಿಡಿಎ ಸೇತುವೆ ಬಳಿ ಇರುವ ಖಾಸಗಿ ಹೋಟೆಲ್ನಲ್ಲಿ ಉಜ್ಜೇಕಿಸ್ತಾನದ ಮಹಿಳೆ ಜರೀನ ಎಂಬವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುತ್ತಾರೆ.
ಟೂರಿಸ್ಟ್ ವೀಸಾದಡಿ ಬಂದಿದ್ದ ಜರಿನ ಹೋಟೆಲ್ನಲ್ಲಿ ಲಾಕ್ ಮಾಡಿಕೊಂಡು ಮಲಗಿದ್ದರು, ನಿನ್ನೆ ಸಂಜೆ ರೂಮ್ ಬಾಯ್ ಕ್ಲೀನ್ ಮಾಡಲು ಹೋದಾಗ ಎಷ್ಟೇ ಕೂಗಿದರು ರೂಮ್ ತೆಗೆದೇ ಇದ್ದ ಕಾರಣ ನಕಲಿ ಕೀ ಬಳಸಿ ಬಾಗಿಲು ತೆಗೆದು ನೋಡಿದಾಗ ಕೊಲೆಯಾಗಿರುವ ಸ್ಥಿತಿಯಲ್ಲಿ ಮಹಿಳೆಯ ಶವ ಕಂಡು ಬಂದಿರುತ್ತದೆ.ಈ ಸಂಬಂಧ ಶೇಷಾದ್ರಿಪುರಂ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿರುತ್ತಾರೆ.